Fact Check: ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿಯ ಡೀಪ್ ಫೇಕ್ ಜಾಹೀರಾತುಗಳು ವೈರಲ್ ಆಗಿವೆ

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ವಿವಾಹವಾದ ಅದ್ದೂರಿ ಸಮಾರಂಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಏವಿಯೇಟರ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾದ ಜಾಹೀರಾತುಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. ಜಾಹೀರಾತುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್ ಚೆಕ್: ವೈರಲ್ ವೀಡಿಯೋಗಳಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಯೋಗಿ ಆದಿತ್ಯನಾಥ್ ಮತ್ತು ಗೌತಮ್ ಅದಾನಿ ಅವರ ತುಟಿ…

Read More

Fact Check | ದೇಶದ ಸಂಪತ್ತಿನಲ್ಲಿ ಮುಸ್ಲಿಮರು ಮೊದಲ ಹಕ್ಕುದಾರರಾಗಿದ್ದಾರೆಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

“ದೇಶದ ಸಂಪತ್ತಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಲಾಗಿ ಮತ್ತು ಅವರೇ ಮೊದಲ ಹಕ್ಕುದಾರರಾಗಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ವ್ಯಾಪಕವಾಗಿ ಹಂಣಚಿಕೊಳ್ಳುತ್ತಿದ್ದಾರೆ. उत्तर प्रदेश की जनता ने योगी जी के सुर ही बदल डाले… Indian Muslims pic.twitter.com/LtwB483blo — 𝐍𝐚𝐮𝐬𝐡𝐚𝐝 (@NaushadVibe) June 10, 2024…

Read More
ನೋಯ್ಡಾ

Fact Check: ಕಳೆದೊಂದು ದಶಕದಲ್ಲಿ ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ

ಕಳೆದೊಂದು ದಶಕದಲ್ಲಿ ಉತ್ತರ ಪ್ರದೇಶದ ನೋಯ್ಡಾ ಹೇಗೆ ಅಭಿವೃದ್ಧಿ ಹೊಂದಿದೆ ನೋಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಒಂದು 2015 ರಿಂದ ಇನ್ನೊಂದು 2024 ರಲ್ಲಿ ಎಂದು ನಗರವೊಂದರ ಎರಡು ವೈಮಾನಿಕ ಚಿತ್ರಗಳನ್ನು ತೋರಿಸುತ್ತದೆ. ಹಾಗಾದರೆ ನಿಜಕ್ಕೂ ನೋಯ್ಡಾ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿರುವಷ್ಟು ಅಭಿವೃದ್ದಿಯಾಗಿದೆಯೇ ನೋಡೋಣ ಬನ್ನಿ.  ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಬರುವ ಮೊದಲ ಕ್ಲಿಪ್, 2015 ರಲ್ಲಿ ಚಿತ್ರೀಕರಿಸಲಾಗಿದೆ, ಇದು ಹೆದ್ದಾರಿ ಜಂಕ್ಷನ್ ಅನ್ನು ತೋರಿಸುತ್ತದೆ. ನಮ್ಮ ತಂಡ ಇದನ್ನು…

Read More
ಓವೈಸಿ

Fact Check: ಓವೈಸಿ ಅವರ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಕೋಮುದ್ವೇಷ ಹರಡಲು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಹೈದರಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ರಾಮ ನವಮಿಯ ದಿನ ತಮ್ಮ ಪ್ರಚಾರದ ವೇಳೆ ಮಸೀದಿಯೊಂದಕ್ಕೆ ಬಾಣ ಹೊಡೆಯುವ ರೀತಿಯಲ್ಲಿ ನಟಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದಾದ್ಯಂತ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಈಗ ಅಸದುದ್ದೀನ್ ಓವೈಸಿಯವರು ಸಹ ಇದೇ ರೀತಿಯ ಕೋಮುದ್ವೇಷದ ಹೇಳಿಕೆ ನೀಡಿದ್ದರು ಎಂದು ಮಾಧವಿ ಲತಾ ಅವರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ”ಯೋಗಿ ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ ಯಾವಾಗಲೂ ಪ್ರಧಾನಿಯಾಗಿ ಉಳಿಯುವುದಿಲ್ಲ. ಸಮಯದ ಕಾರಣದಿಂದ…

Read More
ಬಿಜೆಪಿ

Fact Check: ನಿರುದ್ಯೋಗ ತಪ್ಪಿಸಲು ಮಕ್ಕಳು ಮಾಡಿಕೊಳ್ಳಬೇಡಿ ಎಂದು ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ಹೇಳಿರುವುದು ನಿಜ

ಇತ್ತೀಚೆಗೆ, ಅಜಂಗಢದ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ‘ದೇಶದಲ್ಲಿ ನಿರುದ್ಯೋಗ ಹೆಚ್ಚಾಗದಿರಲು ಮೋದಿಜಿ-ಯೋಗಿ ಒಂದೇ ಒಂದು ಮಗುವಿಗೆ ಜನ್ಮ ನೀಡಲಿಲ್ಲ’ ಎಂದಿದ್ದಾರೆ ಎಂಬ ಹೇಳಿಕೆಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ” ಈ ವಿಡಿಯೋ ನಕಲಿ(ಡೀಪ್ ಫೇಕ್). ಕಾಂಗ್ರೆಸ್, ಸಂಸದರಂತೆ, ಜನರನ್ನು ದಾರಿತಪ್ಪಿಸಲು, ಅಶಾಂತಿಯನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಒಡಕುಗಳನ್ನು ಬಿತ್ತಲು ಡೀಪ್‌ಫೇಕ್‌ಗಳನ್ನು ಬಳಸುತ್ತಿದೆ….

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದ ಹಿಂದೂ ದಂಪತಿಗಳ ವಿಡಿಯೋ ಎಂದು ಬಿಹಾರದ ವಿಡಿಯೋ ಹಂಚಿಕೆ

ಬಿಹಾರದಲ್ಲಿ ಬೈಕ್‌ನಲ್ಲಿ ಬಂದ ಮಹಿಳೆಯ ಮೇಲೆ ಪುರುಷರ ಗುಂಪು ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ವೀಡಿಯೊ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಸುಳ್ಳು ಹೇಳಿಕೆಯೊಂದಿಗೆ, ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮುಸ್ಲಿಮರು ಎಂದು ಹೇಳಲಾಗುತ್ತಿದೆ. “ಪಶ್ಚಿಮ ಬಂಗಾಳದ ಮುಸ್ಲಿಮರು ಹಿಂದೂ ದಂಪತಿಗಳು ಹೊಲ ಗದ್ದೆ ತೋಟಗಳ ಕಡೆ ಹೋದಾಗ ಈ ರೀತಿ ವರ್ತನೆ ಮಾಡುತ್ತಿದ್ದಾರೆ, ನಿಮ್ಮ ಬಂಗಾಳದ ಮುಸ್ಲಿಂ ಯುವಕರು ಈಗಲಾದರೂ ಹಿಂದುಗಳು ನರೇಂದ್ರ ಮೋದಿ  ಈ ದೇಶಕ್ಕೆ ಯಾಕಿರಬೇಕು ಎಂಬುದನ್ನು ಅರ್ಥ…

Read More
ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶ ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿಲ್ಲ

ಭಾರತದ ಆರ್ಥಿಕತೆಗೆ, ಜಿಡಿಪಿ ದತ್ತಾಂಶಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ನವೆಂಬರ್ ತಿಂಗಳಲ್ಲಿ ಭಾರತವೂ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ, ಇದರ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂಬ ಸುಳ್ಳು ಸುದ್ದಿಯೊಂದನ್ನು ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರು ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಂಡಿದ್ದರು. ದೇಶದ ಮತ್ತು ರಾಜ್ಯದ ಹಲವು ಮಾಧ್ಯಮಗಳು ಸಹ ಸತ್ಯವನ್ನು ಪರಿಶೀಲಿಸದೆ ತಪ್ಪಾಗಿ…

Read More
Baba Balakanathh

ಬಾಬಾ ಬಾಲಕ್ ನಾಥ್ ರಾಜಸ್ಥಾನದ ನೂತನ ಮುಖ್ಯಮಂತ್ರಿ ಎಂದು ಯೋಗಿ ಆದಿತ್ಯನಾಥ್ ಘೋಷಿಸಿಲ್ಲ

ರಾಜಸ್ತಾನದ ಚುನಾವಣೆ ಮುಗಿದು ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೆ ಕೇಂದ್ರ ವೀಕ್ಷಕರನ್ನು ನೇಮಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮುಂದಿನ ರಾಜಸ್ತಾನದ ಮುಖ್ಯಮಂತ್ರಿ ಯಾರು ಎಂಬ ಆಯ್ಕೆಯ ಕುರಿತು ಸಾಕಷ್ಟು ಚರ್ಚೆ ಜರುಗುತ್ತಿದೆ. ಇದರ ಬೆನ್ನಲ್ಲೇ,  ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಬಾಬಾ ಬಾಲಕ್ ನಾಥ್ ಅಧಿಕಾರ ವಹಿಸುವರೆಂದು ಆದಿತ್ಯನಾಥ್ ಘೋಷಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

Read More

ರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಯೋಧ್ಯೆಯ ರಾಮಮಂದಿರದ ಕೆಲಸಗಳು ಭರದಿಂದ ಸಾಗುತ್ತಿವೆ. ಅಯೋಧ್ಯೆಯ “ರಾಮ ಮಂದಿರ”, “ಹಿಂದೂ ರಾಷ್ಟ್ರ” ಮತ್ತು “ಅಖಂಡ ಭಾರತ” ಬಿಜೆಪಿ ಮತ್ತು ಬಲಪಂಥೀಯರು ಪ್ರತಿಪಾದಿಸುತ್ತಿರುವ “ಉಗ್ರ ಹಿಂದುತ್ವದ” ಪ್ರತೀಕವಾಗಿದೆ ಮತ್ತು ಆಢಳಿತಾರೂಢ ಬಿಜೆಪಿಯ ರಾಜಕೀಯದ ಅಸ್ತ್ರವಾಗಿದೆ. ಆದ್ದರಿಂದ ಬಿಜೆಪಿ ನಾಯಕರು ಭಾರತವನ್ನು ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ತಮ್ಮ ಪಕ್ಷದ ಬೆಂಬಲಿಗರಿಗೆ ಈಗಾಗಲೇ ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ, “ರಾಮಜನ್ಮ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ…

Read More