ರೈಲ್ವೆ ಅಪಘಾತ

Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ

ಕೋಲ್ಕತ್ತಾ ನಗರ ಮತ್ತು ಸಿಲ್ಚಾರ್ ನಡುವೆ ಸಂಚರಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹೊಸ ಜಲ್ಪೈಗುರಿ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಧ್ಯ ಈ ಘಟನೆಗೆ ಕಾರಣವಾಗಬಹುದಾದ ಎಲ್ಲಾ ಕಾರಣಗಳನ್ನು ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ಪರಿಶೀಲಿಸುತ್ತಿದ್ದಾರೆ. 2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ…

Read More

Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ನೊಡಿ ಎನ್ನಲಾದ ವೀಡಿಯೊ ಒಂದು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗುಂಪೊಂದು ಕೆಲವು ಪುರುಷರನ್ನು ಹಿಂಬಾಲಿಸಿ ಥಳಿಸುವುದನ್ನು ನಾವು ನೋಡಬಹುದು. ಕೆಲವು ರೋಹಿಂಗ್ಯಾ ಪುರುಷರು ಹಿಂದೂಗಳಿಗೆ ಒದೆಯುವುದು ಮತ್ತು ಗುದ್ದುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಲೇಖನದ ಮೂಲದ ಇದು ನಿಜವೇ, ನಿಜಕ್ಕೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಪರಿಸ್ಥಿತಿ ಕಷ್ಟಕರವಾಗಿದೆಯೇ ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋವಿನ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು,…

Read More

Fact Check | ಪ.ಬಂಗಾಳದ ಮಹಿಳಾ ಮುಸ್ಲಿಂ ಮತದಾರರ ಗುಂಪು ಎಂದು ಲಿಬಿಯಾದ ಫೋಟೋ ಹಂಚಿಕೆ.!

“ಈ ಫೋಟೋ ನೋಡಿ ಇದು ಮಹಿಳಾ ಮುಸ್ಲಿಂ ಮತದಾರರ ಗುಂಪು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇದೀಗ ಶೇಕಡ 78 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇದಕ್ಕೆ ಕಾರಣ ಪಶ್ಚಿಮಬಂಗಾಳ ಅನಧಿಕೃತವಾಗಿ ರೋಹಿಂಗ್ಯ ಮುಸ್ಲಿಂ ಮತ್ತು ಇತರ ಮುಸ್ಲಿಮರಿಗೆ ಆಶ್ರಯ ನೀಡಿದ್ದು.” ಎಂದು ಮುಸ್ಲಿಂ ಮಹಿಳೆಯರ ಗುಂಪಿರುವ ಫೋಟೋದೊಂದಿಗೆ ಈ ರೀತಿಯ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. समझ नही आता, ये छिलके अपनी बेगम कैसे पहचानते होंगे?🤔 pic.twitter.com/vN6v2dmbvc —…

Read More

Fact Check | ಪಶ್ಚಿಮ ಬಂಗಾಳದ ನಕಲಿ ಮತದಾನದ ಈ ವಿಡಿಯೋ ಇತ್ತೀಚಿನದ್ದಲ್ಲ

ದೇಶಾದ್ಯಂತ ವಿವಿಧ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ EVM ಬಳಿ ನಿಂತಿದ್ದು, ಮತ ಚಲಾಯಿಸಲು ಬರುವ ಮತದಾರರನ್ನು ತಡೆದು ಆತನೇ ಮತದಾರರ ಬದಲಾಗಿ ನಕಲಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡು ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ನಡೆದ ನಕಲಿ…

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೈಕ್‌ ರ್ಯಾಲಿಗೆ ತಡೆ ಎಂದು ಒರಿಸ್ಸಾದ ವಿಡಿಯೋ ಹಂಚಿಕೆ

ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯವನ್ನು ಮತ್ತು ತ್ರುಣಮೂಲ್ ಕಾಂಗ್ರೆಸ್‌(TMC) ಪಕ್ಷವನ್ನು ಕೇಂದ್ರವಾಗಿರಿಸಿಕೊಂಡು ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲು ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿದೆ. ಅದರ ಭಾಗವಾಗಿ ಈಗ, “ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಬೈಕ್‌ ರ್ಯಾಲಿಯನ್ನು ತಡೆದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಪ್ರತಿಪಾದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಭಗವಧ್ವಜ ಬಾವುಟ ಮತ್ತು ಬೈಕುಗಳು…

Read More

ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಬದಲಿಸಿದ್ದರು ಎಂಬುದು ಸುಳ್ಳು

ಭಾರತದ ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಅವರನ್ನು ಭಯೋತ್ಪಾದಕರು, ಧರ್ಮ ದ್ರೋಹಿಗಳು ಎಂದು ಬಿಂಬಿಸುವ ಹುನ್ನಾರಗಳು ನಡೆಯುತ್ತಿರುವುದು ದುರಂತದ ಸಂಗತಿ. ಪ್ರತೀದಿನವೂ ಅನೇಕ ಸುಳ್ಳು ಆರೋಪಗಳನ್ನು ಹೊರಿಸಿ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ನಮ್ಮ ಭಾರತೀಯ ಸಂವಿಧಾನದಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಯನ್ನು ಆತನ ಧರ್ಮ, ಜಾತಿ, ಭಾಷೆ, ಹುಟ್ಟಿನ ಸ್ಥಳ, ಬಣ್ಣ ಹೀಗೆ ಯಾವ ಆಧಾರದ ಮೇಲೆಯೂ ತಾರತಮ್ಯ ಎಸಗಬಾರದು ಎಂದು ಹೇಳುತ್ತದೆ. ಆದರೆ ಇಂದು ಆಡಳಿತಾರೂಢ ಪಕ್ಷಗಳೇ ಈ ರೀತಿ ದ್ವೇಷ ರಾಜಕಾರಣ ಮತ್ತು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು….

Read More

Fact Check: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ

ಭಾರತೀಯ ಜನತಾ ಪಕ್ಷವು ಇಂಡಿಯಾ ಒಕ್ಕೂಟದ ನಾಯಕರು ಮುಸ್ಲಿಂ ತುಷ್ಟೀಕರಣ ನಡೆಸುತ್ತಿದ್ದಾರೆ ಎಂದು ಮೊದಲಿನಿಂದಲೂ ಆರೋಪಿಸುತ್ತಾ ಬರುತ್ತಿದ್ದಾರೆ ಮತ್ತು ಮುಸ್ಲಿಂ ದ್ವೇಷವನ್ನು ತನ್ನ ಪಕ್ಷದ ಸಿದ್ದಾಂತ ಎನ್ನುವ ರೀತಿಯಲ್ಲಿ ಅನುಸರಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಯಾರೇ ಮುಸ್ಲಿಂ ಸಮುದಾಯದೊಟ್ಟಿಗೆ ಗುರುತಿಸಿಕೊಂಡಿದ್ದರು ಸಹ ಅವರ ಪೋಟೋಗಳನ್ನು ಬಳಸಿಕೊಂಡು ಅವರನ್ನು ಟೀಕಿಸಲಾಗುತ್ತದೆ ಮತ್ತು ಅವರ ಹೆಸರಿನ ಜೊತೆಗೆ ಮುಸ್ಲಿಂ ಹೆಸರನ್ನು ಸೇರಿಸಿ ವ್ಯಂಗ್ಯ ಮಾಡಲಾಗುತ್ತದೆ. ಆದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ನಾಯಕರು ಸಹ ಬಿಜೆಪಿ ನಾಯಕರು ಮುಸ್ಲಿಂ ಕಾರ್ಯಕ್ರಮದಲ್ಲಿ ಭಾಗಿಯಾದ…

Read More
BJP

Fact Check: ಮಣಿಪುರದಲ್ಲಿ ಬಿಜೆಪಿ ನಾಯಕರನ್ನು ಥಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಮಣಿಪುರದಲ್ಲಿ ಆಂತರಿಕ ಹಿಂಸಾಚಾರ ಪ್ರಾರಂಭವಾಗಿ ಅನೇಕ ತಿಂಗಳುಗಳೇ ಕಳೆಯುತ್ತಿವೆ. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಮಣಿಪುರದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಹ ರಾಜ್ಯದ ಅಂತರಿಕ ಕಲಹ ನಿಯಂತ್ರಿಸಲು ಸಾಧ್ಯವಾಗದೆ ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸುವಂತೆ ಕೇಳಿಕೊಂಡಿದ್ದರು. ಆದರೂ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಸಹ ಜಾರಿಗೊಳಿಸಿಲ್ಲ. ಭಾರತದ ಯಾವ ಮಾಧ್ಯಮಗಳು ಸಹ ಮಣಿಪುರದ ಸುದ್ದಿಗಳನ್ನು ಬಿತ್ತರಿಸುತ್ತಿಲ್ಲ. ಆದರೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ…

Read More

Fact Check: ಮಂಗಳೂರಿನ ಇಫ್ತಾರ್ ಕೂಟದ ವಿಡಿಯೋವನ್ನು ಬಂಗಾಳದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

ಕೆಲವು ದಿನಗಳ ಹಿಂದೆಯಷ್ಟೆ ಮಂಗಳೂರಿನಲ್ಲಿ ರಸ್ತೆ ಮಧ್ಯೆಯೇ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ ಎಂದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಪೋಟೋಗಳು ಹರಿದಾಡುತ್ತಿದ್ದವು. ಜನರು ರಸ್ತೆ ಮಧ್ಯೆ ಮಾಡುವ ಅಗತ್ಯವಿತ್ತೆ ಎಂದು ಟೀಕಿಸಿದ್ದರು ಮತ್ತು ಈ ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಆದರೆ ಈಗ, “ಇತ್ತೀಚೆಗೆ ರಸ್ತೆಯಲ್ಲಿ ನಮಾಜ್ ಮಾಡಿದ್ದರು ನಂತರ ಇಫ್ತಾರ್ ಕೂಟವನ್ನು ರಸ್ತೆಯಲ್ಲಿ ಆಯೋಜಿಸಲಾಗಿದೆ. ಈ ವಿಡಿಯೋ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬಂದಿದೆ. ಇದು ನಿಜವೆ?” ಎಂಬ ಹೇಳಿಕೆಯೊಂದಿಗೆ ಇಫ್ತಾರ್ ಕೂಟದ…

Read More
Sandeshkhali

Fact Check: ಸಂದೇಶ್‌ಖಾಲಿಗೆ ಸಂಬಂಧಿಸಿದ್ದು ಎಂದು ಹಳೆಯ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರಾದ ಶೇಖ್ ಷಹಜಹಾನ್, ಶಿಬ್ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರು ಮಹಿಳೆಯರ ಮೇಲೆ ನಡೆಸಿದ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯ ಬೆಳಕಿಗೆ ಬರುತ್ತಿದ್ದಂತೆ ದೇಶದಾದ್ಯಂತ ಟೀಕಿಸುತ್ತಿದ್ದಾರೆ. ಟಿಎಂಸಿ ನಾಯಕರು ಅಕ್ರಮ ಭೂ ಕಬಳಿಕೆ ಮತ್ತು ಮೀನು ಸಾಕಣೆಗಾಗಿ ಅವರನ್ನು ‘ಭೇರಿ’ಗಳಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಕ್ಷಿಣ ಬಂಗಾಳದ ದ್ವೀಪ ಗ್ರಾಮವಾದ ಸಂದೇಶ್ಖಾಲಿಯಲ್ಲಿ ಪಕ್ಷದ ಸದಸ್ಯರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟಿಸಲು ಮಹಿಳೆಯರು ಬೀದಿಗಿಳಿದಿದ್ದಾರೆ. ಹಜ್ರಾ…

Read More