Fact Check | ಗ್ಯಾಂಗ್‌ರೇಪ್‌ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಯಾದ ಬಳಿ ಕೇಕ್‌ ಕತ್ತರಿಸಿ ಸಂಭ್ರಮಿಸಿರುವ ಫೋಟೊ ನಕಲಿ!

“ಐಐಟಿ-ಬಿಎಚ್‌ಯು ಗ್ಯಾಂಗ್‌ರೇಪ್ ಪ್ರಕರಣದ ಮೂವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ” ಎಂದು ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಗಾಗಿ ಹಲವರು ಬಿಜೆಪಿ ವಿರುದ್ಧ ಮತ್ತು ಆರೋಪಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ವಿವಿಧ ಮಂದಿ ಹಲವು ರೀತಿಯಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. BHU gangrape accused grantedbail within seven months crime.This is What kind of…

Read More
ಬಾಂಗ್ಲಾದೇಶ

Fact Check : ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ದೇವಾಲಯವೆಂದು ಭಾರತದ ದೇವಾಲಯದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಭಾರತದ ದೇವಾಲಯದ ಚಿತ್ರವನ್ನು, ಬಾಂಗ್ಲಾದೇಶದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ” ಭಾರತ ದೇಶವು ತನ್ನ ಎಲ್ಲಾ ಆಣೆಕಟ್ಟೆಗಳನ್ನು ತೆರೆದಾಗ ಪ್ರವಾಹ ಉಂಟಾಗಿ ಬಾಂಗ್ಲಾದೇಶದಲ್ಲಿನ ದೇವಾಲಯವು ನೀರಿನಲ್ಲಿ ಮುಳುಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹಕ್ಕೆ ಭಾರತವನ್ನು ಆರೋಪಿಸಿ ಅನೇಕ ಸುಳ್ಳುಗಳು ಇತ್ತೀಚೆಗೆ ಕಂಡುಬರುತ್ತಿವೆ. ಫ್ಯಾಕ್ಟ್‌ ಚೆಕ್‌ : ಗೂಗಲ್‌ ರಿವರ್ಸ್‌ ಇಮೇಜ್‌ನ್ನು ಬಳಸಿಕೊಂಡು ಈ ಚಿತ್ರವನ್ನು ಹುಡುಕಿದಾಗ ಇದು 2019ರದ್ದಾಗಿದೆ. ಭಾರತದಲ್ಲಿ ಸಂಭವಿಸಿದ ಪ್ರವಾಹದಲ್ಲಿ  ಕಂಡು ಬಂದ ಚಿತ್ರವಾಗಿದೆ. ಇದು…

Read More
ಬಾಂಗ್ಲಾದೇಶ

Fact Check : ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಪಶ್ಚಿಮ ಬಂಗಾಳದ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಇಸ್ಲಾಮಿಕ್‌ ಧರ್ಮದವರು ಆಚರಿಸುತ್ತಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌:  ಈ ವೀಡಿಯೊ ಜೂನ್‌2023ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಜಮಾತೆ ಇಸ್ಲಾಮಿ ಹಿಂದ್‌ ಢಾಕಾ ಮೆಟ್ರೋಪಾಲಿಟನ್ ಪೋಲಿಸ್ (DMP) ಪಡೆಯಿಂದ ಅನುಮತಿಯನ್ನು ಪಡೆದುಕೊಂಡು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ಪಕ್ಷದ ನಾಯಕರಾದ ಶಫೀಕುರ್ರೆಹಮಾನ್‌ ಸೇರಿದಂತೆ, ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆಗೊಳಿಸಬೇಕು. ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು…

Read More

Fact Check| ಆರ್‌ಜಿ ಕರ್ ಪ್ರಕರಣ: ಪ್ರಾಂಶುಪಾಲರ ಕೊಠಡಿಯಲ್ಲಿ ಬರ್ತಡೇ ಆಚರಿಸಿಕೊಂಡ ವ್ಯಕ್ತಿ ಆರೋಪಿ ಸಂಜಯ್ ರಾಯ್ ಅಲ್ಲ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಪಕ್ಕದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಕೇಕ್ ಕತ್ತರಿಸುತ್ತಿದ್ದಾನೆ ಎಂದು ಹೇಳುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಭೀಕರ ಅಪರಾಧ ಪತ್ತೆಯಾದಾಗಿನಿಂದ ಪ್ರಾಂಶುಪಾಲ ಸಂದೀಪ್ ಘೋಷ್ ಸುದ್ದಿಯಲ್ಲಿದ್ದಾರೆ. ಆಗಸ್ಟ್ 9ರಂದು ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ನಂತರ ಘೋಷ್ ಘಟನೆಯ ಬಗ್ಗೆ ಎಫ್‌ಐಆರ್…

Read More
ಆರ್ ಜಿ ಕರ್

Fact Check: ಪಶ್ಚಿಮ ಬಂಗಾಳದ ಜಾತ್ರೆಯೊಂದರ ವೀಡಿಯೋವನ್ನು ಬಿಜೆಪಿ ಆಯೋಜಿಸಿದ್ದ ಆರ್ ಜಿ ಕರ್ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ನೃತ್ಯ ಮಾಡಿದ್ದಾಳೆ ಎಂದು ಹಂಚಿಕೆ

ಯುವತಿಯೊಬ್ಬಳು ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ನೃತ್ಯಗಾರ್ತಿಯ ಹಿಂದಿನ ವೇದಿಕೆಯಲ್ಲಿ, ‘ಜಸ್ಟಿಸ್ ಫಾರ್ ಆರ್ ಜಿ ಕರ್’ ಪೋಸ್ಟರ್ ಗಳನ್ನು ನೋಡಬಹುದು. ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೀಡಿಯೊ ಇದಾಗಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆಗಸ್ಟ್ 9 ರಂದು ಕಿರಿಯ ವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಾಗಿನಿಂದ, ಸರ್ಕಾರದಿಂದ ಉತ್ತರದಾಯಿತ್ವ ಮತ್ತು ಅಪರಾಧಿಗಳಿಗೆ ತ್ವರಿತ ಶಿಕ್ಷೆ…

Read More

Fact Check| ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂಬುದು ಸುಳ್ಳು

ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ‌. ಫ್ಯಾಕ್ಟ್‌ಚೆಕ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಸ್ವಯಂ ಪ್ರೇರಿತವಾಗಿ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳ ಸರ್ಕಾರದ ಪರ ಕಪಿಲ್ ಸಿಬಲ್‌ರವರು ವಾದ ಮಂಡಿಸುತ್ತಿದ್ದಾರೆ. ಹಾಗಾಗಿ ಕಪಿಲ್ ಸಿಬಲ್‌ರವರು ಆರೋಪಿ ಸಂಜಯ್ ರಾಯ್ ಪರ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು….

Read More
ಮಮತಾ ಬ್ಯಾನರ್ಜಿ

Fact Check: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೂಲತಃ ಮುಸ್ಲಿಂ ಎಂಬುದು ಸುಳ್ಳು

ಇತ್ತೀಚೆಗೆ ಒಂದು ಪಕ್ಷವನ್ನು ಮತ್ತು ಅದರ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಮುಸ್ಲಿಂ ಎಂದು ಗುರುತಿಸಿ ಟೀಕಿಸುವ, ಅವಮಾನಿಸುವ ಸಂಸ್ಕೃತಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ಅನೇಕ ಕೆಲವು ವರ್ಷಗಳಿಂದ ಜವಹರಲಾಲ್ ನೆಹರೂ ಅವರು ಮೂಲತಃ ಮುಸ್ಲಿಂ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮಹಾತ್ಮಾ ಗಾಂಧಿಯವರನ್ನು ಸಹ ಮುಸ್ಲಿಂ ಮೂಲದವರು ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ನಂತರ ಪ್ರಖ್ಯಾತ ಯೂಟೂಬರ್ ಧ್ರುವ ರಾಠಿ ಸಹ ಮುಸ್ಲಿಂ ಆತನ ಮೂಲಕ ಪಾಕಿಸ್ತಾನ ಆ ಕಾರಣಕ್ಕಾಗಿಯೇ ಆತ ಆರ್‌ಎಸ್‌ಎಸ್‌ ಮತ್ತು…

Read More

Fact Check | ಕೋಲ್ಕತ್ತಾ ಪ್ರಕರಣದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆಗೈಯ್ಯಲಾಗಿದೆ ಎಂಬುದು ಸುಳ್ಳು

“14 ಆಗಸ್ಟ್ 2024 ರ ರಾತ್ರಿ, ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಮಹಿಳೆಯರಿಂದ “ರಿಕ್ಲೈಮ್ ದಿ ನೈಟ್” ಪ್ರತಿಭಟನೆಯನ್ನು ಆಯೋಜಿಸಲಾಯಿತು. ಈ ಫ್ರತಿಭಟನೆಯಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ಅಂಕಿತಾ ಬೌರಿ ಎಂಬಾಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಯಾರು ಕೂಡ ಏನನ್ನು ಮಾತನಾಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಿದ ಹಲವರು…

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮೇಲೆ ಹಲ್ಲೆ: ಸುಳ್ಳು ಕೋಮು ಆರೋಪದೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಪುರುಷರ ಗುಂಪೊಂದು ಮಹಿಳೆಯನ್ನು ಕ್ರೂರವಾಗಿ ಥಳಿಸುತ್ತಿರುವ ಆತಂಕಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು “ಪಶ್ಚಿಮ ಬಂಗಾಳದಲ್ಲಿ ಪೊಲೀಸರ ಸಮ್ಮುಖದಲ್ಲಿ ಹಿಂದೂ ಮಹಿಳೆಯ ಮೇಲೆ ಮುಸ್ಲಿಂ ಪುರುಷರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಹಂಚಿಕೊಳ್ಳುತ್ತಿದ್ದಾರೆ. (ಗಮನಿಸಿ: ವೀಡಿಯೊ ಹಿಂಸಾತ್ಮಕ ದೃಶ್ಯದಿಂದ ಕೂಡಿರುವುದರಿಂದ ನಾವು ಆರ್ಕೈವ್ ಗಳು ಅಥವಾ ಲಿಂಕ್ ಗಳನ್ನು ಒದಗಿಸಿಲ್ಲ) ಫ್ಯಾಕ್ಟ್‌ ಚೆಕ್: ಈ ಹೇಳಿಕೆ ಸುಳ್ಳಾಗಿದ್ದು, ಮಕ್ಕಳ ಅಪಹರಣದ ಶಂಕೆಯ ಮೇಲೆ ಗುಂಪೊಂದು ಮಹಿಳೆಯನ್ನು ಥಳಿಸಿದೆ ಎಂದು ಬರಾಸತ್‌ನ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ಷಾ ಝಖಾರಿಯಾ ದಿ…

Read More
ರೈಲ್ವೆ ಅಪಘಾತ

Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ

ಕೋಲ್ಕತ್ತಾ ನಗರ ಮತ್ತು ಸಿಲ್ಚಾರ್ ನಡುವೆ ಸಂಚರಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹೊಸ ಜಲ್ಪೈಗುರಿ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಧ್ಯ ಈ ಘಟನೆಗೆ ಕಾರಣವಾಗಬಹುದಾದ ಎಲ್ಲಾ ಕಾರಣಗಳನ್ನು ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ಪರಿಶೀಲಿಸುತ್ತಿದ್ದಾರೆ. 2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ…

Read More