Fact Check | ಇಂಗ್ಲೀಷ್‌ ನಾಮಫಲಕ ತೆರವುಗೊಳಿಸಿದ್ದನ್ನು ಕೇಸರಿ ನಾಮಫಲಕ ಎಂದು ಸುಳ್ಳು ಹಂಚಿಕೆ

“ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಕೇಸರಿ ಬಣ್ಣವನ್ನು ಬಳಸುವಂತಿಲ್ಲ ಎಂಬ ಕಾರಣಕ್ಕೆ ಜನರ ಗುಂಪೊಂದು ಅಂಗಡಿಯ ನಾಮಫಲಕಗಳನ್ನು ಧ್ವಂಸಗೊಳಿಸಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಹಿಂದೂ ಅಂಗಡಿಯೊಂದನ್ನು ಧ್ವಂಸ ಮಾಡಲಾಗಿದೆ, ಈ ಬಗ್ಗೆ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ ಎಂದು ಕೋಮು ಬಣ್ಣವನ್ನು ಬಳಿಯಲಾಗಿದೆ. ಇದನ್ನೇ ನಿಜವೆಂದು ನಂಬಿ ಸಾಮಾಜಿಕ ಜಾಲತಾಣದಲ್ಲಿ ಅನ್ಯ ಕೋಮಿನ ವಿರುದ್ಧ, ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ ವೈರಲ್‌ ವಿಡಿಯೋವನ್ನು ಬಳಸಿಕೊಂಡು ಕರ್ನಾಟಕದ ಕಾಂಗ್ರಸ್‌ ಸರ್ಕಾರದ…

Read More