ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More
ವಾರಣಾಸಿ

Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.  ಈಗ, ‘ಸಲೀಂ…

Read More

Fact Check | ವಾರಣಾಸಿಯಲ್ಲಿ ಮತ ಚಲಾವಣೆ ಮಾಡಿದ್ದ EVMಗಳು ಪಿಕ್‌ಅಪ್‌ ವ್ಯಾನ್‌ನಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವಾರಣಾಸಿಯಲ್ಲಿನ ಪಿಕ್‌ಅಪ್‌ ವ್ಯಾನಿನಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿದ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳು ಕಂಡುಬಂದಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಈ ಬಾರಿಯ ಲೋಕಸಭೆ ಚುನಾವಣೆ  ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ನಂಬುತ್ತೀರಾ?” ಎಂಬ ಬರಹದೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. EVM जिंदाबाद😡😠 pic.twitter.com/JLHiZUGEzU — Nature's friend प्रकृति प्रेमी (@Jagdishbhatti3) May 14, 2024 ಈ ವಿಡಿಯೋದಲ್ಲಿ ಪಿಕ್‌ಅಪ್‌ ವ್ಯಾನ್‌ವೊಂದರಲ್ಲಿ ವಿವಿಧ ಪೆಟ್ಟಿಗೆಗಳಿದ್ದು, ಆ ಪೆಟ್ಟಿಗೆಗಳ ಒಳಗೆ ಇವಿಎಂ ಮಷೀನ್‌ಗಳು, ವಿವಿಪ್ಯಾಟ್…

Read More
AI

Fact Check: AI ಸೃಷ್ಟಿಸಿದ ಚಿತ್ರಗಳನ್ನೇ ಕಾಶಿ, ಅಯೋಧ್ಯೆಯ ರೈಲ್ವೆ ನಿಲ್ದಾಣದ ನೀಲನಕ್ಷೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕೃತಕ ಬುದ್ದಿಮತ್ತೆ(AI)ಯಿಂದ ಸೃಷ್ಟಿಸಿದ ಪೋಟೋಗಳನ್ನು ಮತ್ತು ವಿಡಿಯೋಗಳನ್ನು ನಿಜವೆಂದು ನಂಬಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ “ಇದು ಕಾಶಿ, ವಾರಣಾಸಿ ಅಥವಾ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ, ರೈಲ್ವೆ ಸ್ಟೇಷನ್ ನೀಲನಕ್ಷೆ” ಎಂದು ಪ್ರತಿಪಾದಿಸಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್‌: ಇದು ಕೃತಕ ಬುದ್ಧಿಮತ್ತೆ(AI)ಯಿಂದ ಸೃಷ್ಟಿಸಿದ ಚಿತ್ರವಾಗಿದೆ. ಅಮರ್ ಎಂಬ ಇಂಜಿನಿಯರ್ ಒಬ್ಬ ಹಲವಾರು ರೈಲ್ವೆ ನಿಲ್ದಾಣಗಳ ಚಿತ್ರಗಳನ್ನು ಸೃಷ್ಟಿಸಿದ್ದು, ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈತ ಅಯೋಧ್ಯೆಯ ರೈಲ್ವೇ ನಿಲ್ದಾಣದ ಚಿತ್ರವನ್ನೂ ಸಹ AI…

Read More