Fact Check | ಅಂಗಡಿ ಮಾಲೀಕರು ಹೆಸರು ಪ್ರದರ್ಶಿಸಬೇಕು ಎಂಬ ಆದೇಶದ ವಿರುದ್ಧ ‘ದ ಗ್ರೇಟ್‌ ಖಲಿ’ ಪ್ರತಿಭಟಿಸಿದ್ದಾರೆ ಎಂಬುದು ಸುಳ್ಳು

ಖ್ಯಾತ ಕುಸ್ತಿಪಟು ದಲಿಪ್ ಸಿಂಗ್ ರಾಣಾ ಎಂದೂ ಕರೆಯಲ್ಪಡುವ ದಿ ಗ್ರೇಟ್ ಖಲಿ ಮುಸ್ಲಿಂ ಮಾರಾಟಗಾರರ ಗಾಡಿಯಿಂದ ಮಾವಿನ ಹಣ್ಣುಗಳನ್ನು ತಿನ್ನುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂಗಡಿಗಳ ಮೇಲೆ ನಾಮಫಲಕಗಳನ್ನು ಕಡ್ಡಾಯಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರದ ವಿರುದ್ಧ ಖಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲವು ಪೋಸ್ಟ್‌ಗಳು ವೈರಲ್‌ ಆಗುತ್ತಿದೆ.  ಉತ್ತರ ಪ್ರದೇಶದ ರಾಜಕೀಯದಲ್ಲಿ ಅಂಗಡಿಗಳ ಮೇಲೆ…

Read More
Uttarkashi

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಇಲಿ-ರಂಧ್ರ(Rat-hole) ಗಣಿಗಾರಿಕೆಯು ಸಣ್ಣ ಗುಂಡಿಗಳನ್ನು ಅಗೆಯುವ ಮೂಲಕ ಕಲ್ಲಿದ್ದಲನ್ನು ಹೊರತೆಗೆಯುವ ಒಂದು ವಿಧಾನ, ಈ ಗಣಿಗಾರಿಕೆಯು ಹಸ್ತಚಾಲಿತ ಕಲ್ಲಿದ್ದಲು ಹೊರತೆಗೆಯುವಿಕೆಯ ಪ್ರಾಚೀನ, ಅಧಿಕೃತವಾಗಿ ನಿಷೇಧಿತ ವಿಧಾನವಾಗಿದ್ದು, ಇದು ಗಣಿಗಾರರು ಕಲ್ಲಿದ್ದಲನ್ನು ಹೊರತೆಗೆಯಲು ಭೂಮಿಗೆ ಇಳಿಯುವ ಅತ್ಯಂತ ಕಿರಿದಾದ, ಲಂಬವಾದ ಶಾಫ್ಟ್‌ಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಈ ಅಭ್ಯಾಸವನ್ನು 2014 ರಲ್ಲಿ ಕಲ್ಲಿದ್ದಲು ಹೊರತೆಗೆಯುವ ಅವೈಜ್ಞಾನಿಕ ವಿಧಾನವೆಂದು ನಿಷೇಧಿಸಲಾಗಿದೆ. ನವೆಂಬರ್ 28 ರ ಸಂಜೆಯವರೆಗೆ, ಜನರು ಇಲಿ-ರಂಧ್ರ ಗಣಿಗಾರರ ಕೆಲಸಗಳನ್ನು ಕೀಳಾಗಿ ನೋಡುತ್ತಿದ್ದರು ಆದರೆ ನವೆಂಬರ್ 12 ರಿಂದ ಉತ್ತರಾಖಂಡದ…

Read More

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್- ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಎಂಬುವುದು ಸುಳ್ಳು, ಈ ವಿಡಿಯೋ ಬಂಗಾಳದ್ದು

ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್ ನಡೆಸಲಾಗಿದೆ, ಹಿಂದೂ ಹುಡುಗಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಲವು ವಾಟ್ಸ್‌ಆಪ್‌ಗಳಲ್ಲಿ, ” ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಘಟನೆ, ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ, ನಮ್ಮ ಅಬ್ದುಲ್ಲ ಎಲ್ಲರಂತಲ್ಲ ಎನ್ನುವವರು ನೋಡಿ” ಎಂದು ಇಂಗ್ಲಿಷ್‌ ಮತ್ತು ಕನ್ನಡ ಮಿಶ್ರಿತ ಬರಹಗಳೊಂದಿಗೆ ವಾಟ್ಸಾಆಪ್‌ಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಫ್ಯಾಕ್ಟ್‌ ಚೆಕ್‌ ತಂಡದ…

Read More

ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು

ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂದು ಹಲ್ಲೆಗೊಳಗಾದ ಆರೋಪಿಗಳು ತೆವಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಪ್ರದೇಶದ್ದಲ್ಲ. ಶಿಕ್ಷೆಗೊಳಗಾಗಿ ತೆವಳುತ್ತಿರುವವರು ಕೊಲೆ ಪ್ರಕರಣದ ಆರೋಪಿಗಳಾದ ತೇಜ್ವೀರ್, ಯುವರಾಜ್ ಮತ್ತು ಬಂಟಿ ಕುಶಾಲ್. ಇವರ ಹೆಸರುಗಳನ್ನು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ತಪ್ಪಾಗಿ ತಿರುಚಲಾಗಿದೆ. ಇದನ್ನು ಬೂಮ್…

Read More