Fact Check | ಪ್ಯಾಲೆಸ್ತೀನಿಯರು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಭಾರತ, ಇಸ್ರೇಲ್ ಮತ್ತು ಅಮೆರಿಕದ ಧ್ವಜಗಳಿಗೆ ಪುರುಷರ ಗುಂಪೊಂದು ಅವಮಾನ ಮಾಡುತ್ತಿರುವು ಮತ್ತು ಆ ಧ್ವಜಗಳನ್ನು ಸುಡುವುದನ್ನು ತೋರಿಸುವ ಫೋಟೋವನ್ನು ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ಹಂಚಿಕೊಂಡ ಹಲವರು ಪ್ಯಾಲೆಸ್ತೀನಿಯರು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುತ್ತಿದ್ದಾರೆ. ಆದರೆ ಕೆಲ ಭಾರತೀಯರು ಮಾತ್ರ ಇನ್ನೂ ಕೂಡ ಪ್ಯಾಲೆಸ್ತೀನಿಯರನ್ನು ಬೆಂಬಲಿಸುತ್ತಿದ್ದಾರೆ ಎಂದು ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Oo shitty ass , if India supports Israel fr front then u Muslims will…

Read More

Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

ಇತ್ತೀಚೆಗೆ ಭಾರತದ ಹಲವು ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಿ ಎಂದು ಹಿಂದು ಪರ ಸಂಘಟನೆಗಳು ಮತ್ತು ಕಾರ್ಯಕರ್ತರು ಕರೆಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಿಂದುಗಳು ಹಿಂದುಗಳ ಜೊತೆಗೆ ಮಾತ್ರ ವ್ಯಾಪರ ನಡೆಸಬೇಕು ಎಂಬುದು ಹಿಂದುಪರ ಸಂಘಟನೆಗಳ ವಾದವಾಗಿತ್ತು. ಕರ್ನಾಟಕದಲ್ಲಿ ಸಹ ಇಂತಹ ಅನೇಕ ಪ್ರಕರಣಗಳು ದಾಖಲಾಗಿದ್ದವು, ಕೊನೆಗೆ ಜನಗಳು ಇಂತಹ ಕೋಮುದಳ್ಳೂರಿಗೆ ಉತ್ತೇಜನ ನೀಡದೆ. ವ್ಯಾಪರ ಬಹಿಷ್ಕಾರದಂತಹ ಕ್ಯತ್ಯಗಳನ್ನು ಬೆಂಬಲಿಸಲಿಲ್ಲ. ಆದರೆ ಈಗ, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಅಮೇರಿಕಾದ ಚಿಕಾಗೋದಲ್ಲಿ ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ. ಮತ್ತು ಹಿಂದೂ…

Read More
ಮೋದಿ

Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು

ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತಾಗಿ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು, ಪ್ರತಿಪಾಧನೆಗಳನ್ನು ಅವರ ಬೆಂಬಲಿಗರೆ ಹಂಚಿಕೊಳ್ಳುತ್ತಿದ್ದಾರೆ. ಇವು ಅನೇಕ ಬಾರಿ ಟೀಕೆಗೂ ಗುರಿಯಾಗಿವೆ. ಇಂತಹ ಸಾಕಷ್ಟು ಪ್ರತಿಪಾದನೆಗಳು ಹೀಗಾಗಲೇ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು. ಪ್ರತಿನಿತ್ಯ ಇಂತಹ ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬತೆ ಇತ್ತೀಚೆಗೆ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ, ಅಪ್ಪಟ ದೇಶಪ್ರೇಮಿ ಶ್ರೀ ನರೇಂದ್ರ ಮೋದಿ. ಎಂಬ ಪೋಸ್ಟ್‌ ಒಂದು ಸಾಕಷ್ಟು…

Read More

Fact Check | ಇಸ್ರೇಲ್‌-ಹಮಾಸ್‌ ಸಂಘರ್ಷಕ್ಕೆ ಸಂಬಂಧ ಕಲ್ಪಸಿ ಸ್ಕ್ರಿಪ್ಟೆಡ್ (ನಾಟಕೀಯ) ವಿಡಿಯೋ ಹಂಚಿಕೆ

ಇಸ್ರೇಲ್‌ ಹಮಾಸ್‌ ಯುದ್ಧ ಆರಂಭವಾದಗಿನಿಂದ ಹಲವು ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿವೆ. ಇದೀಗ ಇದಕ್ಕೆ ಪೂರಕ ಎಂಬಂತೆ ಮುಸಲ್ಮಾನ ಯುವಕರು ಕೆಟ್ಟವರು ಮತ್ತು ಪ್ಯಾಲೆಸ್ಟೈನ್‌ ವಿರುದ್ಧ ನಕಾರಾತ್ಮಕ ಭಾವನೆ ಎಲ್ಲೆಡೆ ಮೂಡಿಸುವ ಉದ್ದೇಶದಿಂದ ಹಲವರು ವಿವಿಧ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಂದ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕಳೆದ ಒಂದು ವಾರದಿಂದ ಪ್ಯಾಲೆಸ್ಟೈನ್‌ ಯುವಕರು ಸ್ತ್ರೀ…

Read More

Fact Check | ಪ್ಯಾಲೆಸ್ಟೈನ್‌ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್‌ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕತ್ತೆಯ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ನಂತರ ಆ ಕತ್ತೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ಯಾಲೆಸ್ಟೈನ್‌ ಜನರನ್ನು ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ. ಇದೇ ಫೋಟೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಈ ವಿಚಾರದ ಕುರಿತು ಅವಲೋಕನ ನಡೆಸದೇ ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ….

Read More

Fact Check | ತಾಯಿಯೊಬ್ಬಳು ತನ್ನ ಧ್ವಂಸಗೊಂಡ ಮನೆಯಿಂದ ಮಗುವಿನ ಆಟಿಕೆ ತರುತ್ತಿರುವ ಫೋಟೋ ಗಾಜಾದಲ್ಲ!

ಇಸ್ರೆಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಸಾಕಷ್ಟು ಮಂದಿ ಹಮಾಸ್‌ ಜನರ ಶಕ್ತಿ ಕುಗ್ಗುವುದಿಲ್ಲ ಎಂದು ತಲೆ ಬರಹವನ್ನು ನೀಡಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಈ ಫೋಟೋಗೆ ವಿವಿಧ ರೀತಿಯ ಸುಳ್ಳು ಕತೆಗಳನ್ನು ಕಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ  “ಈ ಛಾಯಾಚಿತ್ರದಲ್ಲಿ ಪ್ಯಾಲೇಸ್ಟಿನಿಯನ್ ತಾಯಿಯೊಬ್ಬಳು ಗಾಜಾದಲ್ಲಿರುವ ಧ್ವಂಸವಾದ ಕಟ್ಟಡದಲ್ಲಿರುವ ತಮ್ಮ ಮನೆಯಿಂದ ತನ್ನ ಮಗುವಿನ ಆಟಿಕೆಯ ಕಾರನ್ನು ವಾಪಸ್ಸು ತರುತ್ತಿರುವುದನ್ನ ನೋಡಬಹುದಾಗಿದೆ.”…

Read More