Fact Check: ಅಂಜಲಿ ಬಿರ್ಲಾ UPSC ಪರೀಕ್ಷೆಗೆ ಹಾಜಾರಾಗದೇ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಎಂಬುದು ಸುಳ್ಳು
ಭಾರತೀಯ ಜನತಾ ಪಕ್ಷದ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಮರು ನೇಮಕಗೊಂಡ ನಂತರ, ಅವರ ಮಗಳು ಅಂಜಲಿ ಬಿರ್ಲಾ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಗೆ ಹಾಜರಾಗದೆ ತೇರ್ಗಡೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಕ್ಸ್ ಬಳಕೆದಾರರೊಬ್ಬರು ಯೂಟೂಬರ್ ಧ್ರುವ ರಾಠೀ ಅವರ ನಕಲಿ ಖಾತೆಯಿಂದ ಅಂಜಲಿ ಬಿರ್ಲಾ ಅವರ ಫೋಟೋವನ್ನು ಹಂಚಿಕೊಂಡು, “ನೀವು ಯುಪಿಎಸ್ಸಿ ಪರೀಕ್ಷೆಯಲ್ಲಿ ಕುಳಿತುಕೊಳ್ಳದೆ ಉತ್ತೀರ್ಣರಾಗಬಹುದಾದ ಏಕೈಕ ದೇಶ ಭಾರತ. ಆದರೆ ಅದಕ್ಕಾಗಿ, ನೀವು ಲೋಕಸಭಾ…