Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು

“ಇತ್ತೀಚೆಗೆ, 23 ಸೆಪ್ಟೆಂಬರ್ 2024 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ವಿಟೋ ಅಧಿಕಾರವನ್ನು ಪಡೆದುಕೊಂಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. BHARAT GOT A PERMANENT MEMBERSHIP IN UNSC WITH VETO…

Read More

Fact Check | ಪ್ಯಾಲೆಸ್ಟೈನ್‌ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್‌ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕತ್ತೆಯ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ನಂತರ ಆ ಕತ್ತೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ಯಾಲೆಸ್ಟೈನ್‌ ಜನರನ್ನು ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ. ಇದೇ ಫೋಟೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಈ ವಿಚಾರದ ಕುರಿತು ಅವಲೋಕನ ನಡೆಸದೇ ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ….

Read More

Fact Check | ತಾಯಿಯೊಬ್ಬಳು ತನ್ನ ಧ್ವಂಸಗೊಂಡ ಮನೆಯಿಂದ ಮಗುವಿನ ಆಟಿಕೆ ತರುತ್ತಿರುವ ಫೋಟೋ ಗಾಜಾದಲ್ಲ!

ಇಸ್ರೆಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಸಾಕಷ್ಟು ಮಂದಿ ಹಮಾಸ್‌ ಜನರ ಶಕ್ತಿ ಕುಗ್ಗುವುದಿಲ್ಲ ಎಂದು ತಲೆ ಬರಹವನ್ನು ನೀಡಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಈ ಫೋಟೋಗೆ ವಿವಿಧ ರೀತಿಯ ಸುಳ್ಳು ಕತೆಗಳನ್ನು ಕಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ  “ಈ ಛಾಯಾಚಿತ್ರದಲ್ಲಿ ಪ್ಯಾಲೇಸ್ಟಿನಿಯನ್ ತಾಯಿಯೊಬ್ಬಳು ಗಾಜಾದಲ್ಲಿರುವ ಧ್ವಂಸವಾದ ಕಟ್ಟಡದಲ್ಲಿರುವ ತಮ್ಮ ಮನೆಯಿಂದ ತನ್ನ ಮಗುವಿನ ಆಟಿಕೆಯ ಕಾರನ್ನು ವಾಪಸ್ಸು ತರುತ್ತಿರುವುದನ್ನ ನೋಡಬಹುದಾಗಿದೆ.”…

Read More

Fact Check : ಇಸ್ರೇಲ್‌ ಕಾನ್ಸೂಲೇಟ್‌ ಕಚೇರಿ ಮೇಲೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ದಾಳಿ ನಡೆಸಲು ಯತ್ನ ಎಂಬುದು ಸುಳ್ಳು

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಹೆಚ್ಚಾಗುತ್ತಿದ್ದಂತೆ ಸುಳ್ಳು ಸುದ್ದಿಗಳು ಕೂಡ ಹೆಚ್ಚು ಹೆಚ್ಚು ಹರಡಲು ಆರಂಭವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮುಸ್ಲಿಂ ದೇಶಗಳಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ವಿಚಾರಗಳಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಮತ್ತು ಮುಸ್ಲಿಂ ದೇಶಗಳಲ್ಲಿ ಇಸ್ರೇಲ್‌ಗೆ ಸಂಬಂಧ ಪಟ್ಟವರು ಜೀವ ಭಯದಿಂದ ಬದುಕುವಂತಾಗಿದೆ ಎಂಬ ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಟರ್ಕಿಯಲ್ಲಿನ ಒಂದು ಘಟನೆಯನ್ನ ಇದೀಗೆ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧಕ್ಕೆ ಥಳಕು ಹಾಕುವ ಮೂಲಕ ಟರ್ಕಿಯಲ್ಲೂ ಕೂಡ…

Read More

Fact Check : ಹಮಾಸ್‌ನಲ್ಲಿನ ಮೃತದೇಹಗಳು ಅಲುಗಾಡುತ್ತಿವೆ ಎನ್ನಲಾಗುತ್ತಿರುವ ವಿಡಿಯೋ ಈಜಿಪ್ಟ್‌ನದ್ದು

ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಆರಂಭವಾದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಇತ್ತೀಚೆಗೆ ಹಮಾಸ್‌ ವಿಶ್ವದ ಬೆಂಬಲವನ್ನು ಗಳಿಸಲು ಜಗತ್ತಿನ ಮುಂದೆ ಸಂತ್ರಸ್ತ ರಾಷ್ಟ್ರದಂತೆ ನಾಟಕವಾಡುತ್ತಿದೆ ಎಂದು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್ ದಾಳಿಯ ನಂತರ ಪ್ಯಾಲೆಸ್ತೀನಿಯರು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ನಕಲಿ ಹೆಣಗಳನ್ನ ಪ್ರದರ್ಶಿಸಿದ್ದಾರೆ. ಆ ಮೂಲಕ ವಿಶ್ವದ ಮುಂದೆ ಸಿಂಪಥಿ ಗಿಟ್ಟಿಸಿಕೊಂಡು ತಾವೇ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಯನ್ನು…

Read More