ಮುಸ್ಲಿಮರ ಜನಸಂಖ್ಯೆ

Fact Check: ಯುಕೆಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚೆಗೆ ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗುತ್ತಿದೆ. ಯರೋಪ್‌ ರಾಷ್ಟ್ರಗಳಲ್ಲಿ ವಲಸೆ ವಿರೋಧಿ ಹೋರಾಟಗಳ ಕೂಗು ಹೆಚ್ಚಾಗುತ್ತಿದ್ದಂತೆ ಈಗ, ಮುಸ್ಲಿಂ ಸಮುದಾಯ ಮತ್ತು ಅವರ ಧರ್ಮದ ಕುರಿತು ಕೆಲವು ಮತಾಂಧ(ಫ್ಯಾಸಿಸ್ಟ್)ರು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡುವ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳ ಕೇಂದ್ರ ಬಿಂದು ಮುಸ್ಲಿಮರು ಎಂದು ಬಿಂಬಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಹಿಷ್ಕರಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ, ಯುಕೆ ಅಥವಾ ಇಂಗ್ಲೆಂಡಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಗಳ ಸಂದೇಶವೊಂದು…

Read More

Fact Check | ಶೇಖ್ ಹಸೀನಾ ಅಳುತ್ತಿರುವ ಹಳೆಯ ಫೋಟೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬಂದ ನಂತರದಲ್ಲಿ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಲವರು “ಭಾರತದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಲು ಸಾಧ್ಯವಾಗದೆ ಭಾರತದಲ್ಲೇ ಉಳಿಯುತ್ತಿರುವುದಕ್ಕೆ ಅವರು ಬೇಸರ ವ್ಯಕ್ತ ಪಡಿಸಿ ಅಳುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಈ ಫೋಟೋ ಹರಿದಾಡುತ್ತಿದೆ. Dictator arrives in exile in India crying pic.twitter.com/iaMcFCIrHI —…

Read More

Fact Check | ಬ್ರಿಟನ್‌ನ ಚುನಾವಣಾ ಫಲಿತಾಂಶದ ನಂತರ ಅಲ್ಲಿನ ಮುಸ್ಲಿಮರು ಟ್ರಾಫಿಕ್‌ ವಾರ್ಡನ್‌ಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಯುಕೆಯಲ್ಲಿ 2024 ರ ಚುನಾವಣೆಯಲ್ಲಿ ಲೇಬರ್ ಪಕ್ಷವು ಗೆದ್ದ ನಂತರ ಟ್ರಾಫಿಕ್ ವಾರ್ಡನ್ ಅನ್ನು ಮುಸ್ಲಿಂ ಪುರುಷರ ಗುಂಪು ಟಿಕೇಟ್‌ ನೀಡುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಅಲ್ಲಿನ ಕನ್ಸರ್ವೇಟಿವ್ ಪಕ್ಷದ ಸೋಲು ಮುಸ್ಲಿಮರಿಗೆ ಬಹಳ ಆನಂದವನ್ನು ಉಂಟು ಮಾಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಟ್ರಾಫಿಕ್‌ ವಾರ್ಡನ್‌ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ವೈರಲ್‌ ವಿಡಿಯೋವನ್ನು ಮುಸ್ಲಿಮರ ವಿರುದ್ಧ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು…

Read More
ಕೈರ್ ಸ್ಟಾರ್ಮರ್

Fact Check: ಬ್ರಿಟನ್‌ನ ನೂತನ ಪ್ರಧಾನಿ ಕೈರ್ ಸ್ಟಾರ್ಮರ್ ತಾವು ಪ್ರಧಾನಿಯಾದ ನಂತರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂಬುದು ಸುಳ್ಳು

ಇಂಗ್ಲೆಂಡಿನ ನೂತನ ಪ್ರಧಾನಿ ಕೈರ್ ಸ್ಟಾರ್ಮರ್ ಅವರು ಪ್ರಧಾನಿಯಾದ ನಂತರ ಲಂಡನ್‌ನ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅವರು ಹೊಸ ಪ್ರಧಾನಿಯಾಗಿ (ಇಲ್ಲಿ ಮತ್ತು ಇಲ್ಲಿ) ತಮ್ಮ ಇನ್ನಿಂಗ್ಸ್ ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಅಂತರ್ಜಾಲದಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಕಿಂಗ್ಸ್‌ಬರಿಯಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಕೈರ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಫೇಸ್‌ಬುಕ್‌ಗೆ…

Read More
ಪಾರ್ಶ್ವವಾಯು

Fact Check: ತಾಮ್ರದ ಕಡಗ ಅಥವಾ ರಕ್ಷಾಸೂತ್ರ ಕಟ್ಟಿಕೊಳ್ಳುವ ಮೂಲಕ ಪಾರ್ಶ್ವವಾಯು ತಡೆಯಬಹುದು ಎಂಬುದಕ್ಕೆ ಸಾಕ್ಷಿಗಳಿಲ್ಲ

ಮುಂಗೈಗೆ ರಕ್ಷಾಸೂತ್ರದಂತಹ ದಾರ ಮತ್ತು ಲೋಹದ ಬ್ರಾಸೈಟ್‌ ಧರಿಸುವುದರಿಂದ ಪಾರ್ಶ್ವವಾಯುವನ್ನು ತಡೆಯಬಹುದು ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ವ್ಯಕ್ತಿಯೊಬ್ಬರು ಹೇಳಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ನಡೆಸಿದ ಅಧ್ಯಯನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಈ ಸಂಶೋಧನೆಯನ್ನು ಹಿಂದೂ ಪುರಾಣಗಳಲ್ಲಿ ಮತ್ತು ನೂರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು, ಸಾಧು ಸಂತರು ಕಂಡುಕೊಂಡಿದ್ದರು, ಎಂದು ಅಂಗೈನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಧರಿಸಲು ಶಿಫಾರಸು ಮಾಡಲಾಗುತ್ತಿದೆ. ಯುಕೆ ಅಧ್ಯಯನವು…

Read More
ಚಿನ್ನ

Fact Check: 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ, ಹಲವಾರು ಸುದ್ದಿ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂಗ್ಲೆಂಡ್‌(ಯುಕೆ)ನಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ (ಎಂಟಿ) ಚಿನ್ನವನ್ನು 2023-24ರಲ್ಲಿ ದೇಶೀಯ ಬ್ಯಾಂಕ್‌ಗಳಿಗೆ(domestic vaults) ಸ್ಥಳಾಂತರಿಸಿದೆ ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆರ್‌ಬಿಐ ತನ್ನ 2023-24ರ ವಾರ್ಷಿಕ ವರದಿಯಲ್ಲಿ ವಿದೇಶದಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ ಚಿನ್ನವನ್ನು ದೇಶೀಯ ಬ್ಯಾಂಕ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ 1991ರಲ್ಲಿ ಭಾರತ ದಿವಾಳಿತನ ಎದುರಿಸುತ್ತಿದ್ದಾಗ ಅಂದಿನ ಪ್ರಧಾನಿ ಚಂದ್ರಶೇಖರ್…

Read More

Fact Check | ಪ್ಯಾಲೆಸ್ಟೈನ್‌ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್‌ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕತ್ತೆಯ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ನಂತರ ಆ ಕತ್ತೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ಯಾಲೆಸ್ಟೈನ್‌ ಜನರನ್ನು ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ. ಇದೇ ಫೋಟೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಈ ವಿಚಾರದ ಕುರಿತು ಅವಲೋಕನ ನಡೆಸದೇ ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ….

Read More