ಮುಸ್ಲಿಮರು

Fact Check: ಬಾಂಗ್ಲಾದೇಶದ ಮುಸ್ಲಿಮರು ಕಿಕ್ಕಿರಿದ ರೈಲಿನಲ್ಲಿ ಅಸ್ಸಾಂ ಮತ್ತು ಕೋಲ್ಕತ್ತಾಗೆ ಬಂದಿಳಿದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ರೈಲಿನ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ರೈಲು ಬಾಂಗ್ಲಾದೇಶದಿಂದ ಭಾರತದ ಕಡೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರೈಲಿನ ತುಂಬಾ ಮುಸ್ಲಿಂ ಸಮುದಾಯದ ಜನ ಕಿಕ್ಕಿರಿದು ಕುಳಿತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಈ ವೀಡಿಯೋವಿಗೆ “ಇದು ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ, ಈ ಗುಂಪಿನ ಮುಂದೆ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ ಅಸ್ಸಾಂ ಮತ್ತು ಕೋಲ್ಕತ್ತಾ ಮೂಲಕ ಬಾಂಗ್ಲಾದೇಶ ಈ ಮುಸ್ಲಿಮರನ್ನು ವಿರೋಧಿಸಲು ಇನ್ನೂ ಸಮಯವಿದೆ. ಇಲ್ಲದಿದ್ದರೆ…

Read More

Fact Check | ಚಿಲಿಯಲ್ಲಿ ರೈಲು ಡಿಕ್ಕಿಯ ವೀಡಿಯೊವನ್ನು ಭಾರತದ ವಂದೇ ಭಾರತ್ ರೈಲು ಅಪಘಾತ ಎಂದು ಹಂಚಿಕೆ

” ಈ ವಿಡಿಯೋ ನೋಡಿ ಇದು ಭಾರತದ ವಂದೇ ಭಾರತ್‌ ರೈಲು ದುರಂತದ ವಿಡಿಯೋ, ಈ ರೈಲಿನ ದುರಂತದ ಬಗ್ಗೆ ಯಾರೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ವೇಗದ ಪರಿಣಾಮವಾಗಿ ಈಗ ಬೃಹತ್‌ ಅಪಘಾತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ?, ಅಮಾಯಕರ ಸಾವಿನ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ?” ಎಂಬ ಬರಹಗಳೊಂದಿಗೆ ರೈಲು ಅಪಘಾತದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://www.youtube.com/watch?v=bG9QN1ngUXM ಈ ವಿಡಿಯೋ ನೋಡಿದ ಹಲವರು ವಂದೇ ಭಾರತ್‌ ರೈಲಿನ ಬಣ್ಣಕ್ಕೂ ಅಪಘಾತಗೊಂಡ ರೈಲಿನ  ಬಣ್ಣ…

Read More

ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಬದಲಿಸಿದ್ದರು ಎಂಬುದು ಸುಳ್ಳು

ಭಾರತದ ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಅವರನ್ನು ಭಯೋತ್ಪಾದಕರು, ಧರ್ಮ ದ್ರೋಹಿಗಳು ಎಂದು ಬಿಂಬಿಸುವ ಹುನ್ನಾರಗಳು ನಡೆಯುತ್ತಿರುವುದು ದುರಂತದ ಸಂಗತಿ. ಪ್ರತೀದಿನವೂ ಅನೇಕ ಸುಳ್ಳು ಆರೋಪಗಳನ್ನು ಹೊರಿಸಿ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ನಮ್ಮ ಭಾರತೀಯ ಸಂವಿಧಾನದಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಯನ್ನು ಆತನ ಧರ್ಮ, ಜಾತಿ, ಭಾಷೆ, ಹುಟ್ಟಿನ ಸ್ಥಳ, ಬಣ್ಣ ಹೀಗೆ ಯಾವ ಆಧಾರದ ಮೇಲೆಯೂ ತಾರತಮ್ಯ ಎಸಗಬಾರದು ಎಂದು ಹೇಳುತ್ತದೆ. ಆದರೆ ಇಂದು ಆಡಳಿತಾರೂಢ ಪಕ್ಷಗಳೇ ಈ ರೀತಿ ದ್ವೇಷ ರಾಜಕಾರಣ ಮತ್ತು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು….

Read More
ರೈಲು

ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು

ಪಶ್ಚಿಮ ಬಂಗಾಳದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿರುವ ಮುರಿಶಿದಬಾದ್ ಜಿಲ್ಲೆಯಲ್ಲಿ ನಮಾಜ್ ಮಾಡುವಾಗ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತದೆ ಎಂದು ರೈಲು ಹಳಿಗಳನ್ನು ಕಾನೂನುಬಾಹಿರವಾಗಿ ಕಿತ್ತು ಬಿಸಾಡಿದ್ದಾರೆ, ಇನ್ನು ಮಠ-ಮಂದಿರ ದೇವಸ್ಥಾನಗಳು ಅವರಿಗೆ ಯಾವ ಲೆಕ್ಕ ಎಂದು ಪ್ರತಿಪಾದಿಸಿ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನಮಾಜ್ ಮಾಡಲು ರೈಲಿನ ಶಬ್ದದಿಂದ ತೊಂದರೆ ಆಗುತ್ತದೆ ಎಂದು ರೈಲು ಹಳಿ ಮತ್ತು ರೈಲನ್ನೆ ನಾಶ ಮಾಡಲು ಪ್ರಯತ್ನ ಪಡುತ್ತಿರುವ ಜನ ಎಂದು ಮತ್ತೊಂದು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ಇವುಗಳ ಹಿನ್ನಲೆಯೇನು ಎಂದು…

Read More