Fact Check | ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು 2023ರ ಫೋಟೋ ಹಂಚಿಕೆ

“ಈ ಫೋಟೋ ನೋಡಿ ಇದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಗೆದ್ದ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ. ಈ ವೇಳೆ ರೋಹಿತ್‌ ಶರ್ಮಾ ಅವರ ಕುಟುಂಬವು ಕೂಡ ಅವರೊಂದಿಗೆ ಇತ್ತು. ದೇವರ ದರ್ಶನ ಪಡೆದು ದೇವಸ್ಥಾನದ ಮುಂದೆ ಅವರು ಕಂಡು ಬಂದಿದ್ದಾರೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಫೋಟೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ರೋಹಿತ್‌ ಶರ್ಮಾ…

Read More

Fact Check | ರೋಹಿತ್‌ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಸುಳ್ಳು.!

ಏಕದಿನ ವಿಶ್ವಕಪ್‌ ಕಿಕೆಟ್‌ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ ತಂಡದ ಆಟಗಾರರ ಮೇಲೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿಯೆಂದರೆ ರೋಹಿತ್‌ ಶರ್ಮಾ ಅವರ ನಿವೃತ್ತಿ ವಿಚಾರ ಇದಕ್ಕೆ ಸಂಬಂಧ ಪಟ್ಟಂತೆ ಪೋಸ್ಟರ್‌ವೊಂದು ವೈರಲ್‌  ಕೂಡ ಆಗಿತ್ತು ಅದರಲ್ಲಿ “ಬ್ರೆಕಿಂಗ್‌ ನ್ಯೂಸ್‌…..

Read More

Fact Check : ಮ್ಯಾಕ್ಸ್‌ವೆಲ್ ಜಾಗದಲ್ಲಿ ಕೊಹ್ಲಿ ಇದ್ದಿದ್ದರೆ ಸಿಂಗಲ್ ತೆಗೆದುಕೊಳ್ಳುತ್ತಿದ್ದರು ಎಂದು ಗೌತಮ್ ಗಂಭೀರ್ ಹೇಳಿಲ್ಲ

“ಒಂದು ವೇಳೆ ವಿರಾಟ್‌ ಕೊಹ್ಲಿ 195 ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದರೆ, ಅಲ್ಲಿ ದ್ವಿಶತಕ ಬಾರಿಸುವ ಸಲುವಾಗಿ ಅವರು ಸಿಂಗಲ್ಸ್‌ ತೆಗೆದುಕೊಳ್ಳುತ್ತಿದ್ದರು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೆ ಮಾಡಲಿಲ್ಲ. ಅವರು ಸಿಕ್ಸರ್‌ ಬಾರಿಸಿದರು. ಆದ್ದರಿಂದಲೇ ಅವರು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ವೈಯಕ್ತಿಕ ಮೈಲುಗಲ್ಲುಗಳ ಸಲುವಾಗಿ ಆಡುವವರಲ್ಲ” ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭಿರ್‌ ಅವರು ಹೇಳಿದ್ದಾರೆ ಎಂದು  ವ್ಯಾಪಕವಾಗಿ ಸುದ್ದಿಯೊಂದು ಹರಡುತ್ತಿದೆ. ಈ ಸುದ್ದಿಯ ಪೂರ್ವಪರವನ್ನು ಅಳೆಯದೆ, ತಿಳಿಯದೆ ಯಥಾವತ್ತಾಗಿ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ….

Read More

Fact Check : ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್‌ ಹಾಕಿದ್ದಾರೆ ಎಂಬುದು ಸುಳ್ಳು

ಭಾರತದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಗಾಜಾವನ್ನು ಬೆಂಬಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವ್ಯಾಪಕವಾಗಿ ಹರಡಲಾಗುತ್ತಿದೆ. ಆ ಸುದ್ದಿಯನ್ನು ವ್ಯಾಪಾಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಆ ಪೋಸ್ಟ್‌ನ ತಲೆಬರಹದಲ್ಲಿ “ಕೊಹ್ಲಿ ತಮ್ಮ ಏಕದಿನ ಪಂದ್ಯದಲ್ಲಿ 49ನೇ ಶತಕದ ಸಿಡಿಸಿದ ನಂತರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “ಇನ್‌ ಸಾಲಿಡರಿಟಿ ವಿಥ್‌ ಗಾಜಾ” ಎಂಬ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಪ್ಯಾಲೆಸ್ಟೈನ್‌ ಬೆಂಬಲಕ್ಕೆ ನಿಂತಿದ್ದಾರೆ.” ಎಂದು ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಮತ್ತು ಪೋಸ್ಟ್‌ನ ಕುರಿತು…

Read More