ವಿದ್ಯುತ್ ಶುಲ್ಕ

Fact Check: ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಯಾವುದೇ ಪೂಜಾ ಸ್ಥಳಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಿಲ್ಲ

ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಹಿಂದೂ ಧಾರ್ಮಿಕ ಸ್ಥಳಗಳ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮಳಲ್ಲಿ ಹಲವರು ಪೋಸ್ಟ್‌ಗಳ ಮೂಲಕ ಆರೋಪಿಸಿದ್ದಾರೆ. ಸಾಮಾನ್ಯ ಜನರು, ಹಿಂದೂ ದೇವಾಲಯಗಳು ಮತ್ತು ಗೋಶಾಲೆಗಳಿಗೆ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 7.85 ರೂ.ಗಳಾಗಿದ್ದರೆ, ಚರ್ಚ್‌ಗಳು ಮತ್ತು ಮಸೀದಿಗಳಿಗೆ ಪ್ರತಿ ಯೂನಿಟ್‌ಗೆ ಕೇವಲ 1.85 ರೂ. ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ದೆಹಲಿ ವಿದ್ಯುತ್ ಇಲಾಖೆ ಎಲ್ಲಾ ಪೂಜಾ ಸ್ಥಳಗಳಿಗೆ ಸಮಾನವಾಗಿ ಶುಲ್ಕ ವಿಧಿಸುತ್ತದೆ. ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು…

Read More
ಅಣ್ಣಾಮಲೈ

Fact Check: ತಮಿಳುನಾಡಿನ ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅಳುತ್ತಿರುವುದು ಸೋಲಿನ ಕಾರಣಕ್ಕಾಗಿ ಅಲ್ಲ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಸಹ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಚುನಾವಣಾ ಖಾತೆಯನ್ನು ತೆರೆಯಲು ವಿಫಲವಾದ ಕಾರಣ, ಪಕ್ಷದ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಅವರು ಭಾಷಣದ ವೇಳೆ ಭಾವುಕರಾಗಿ ಅಳುತ್ತಿದ್ದಾರೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನೇಕ ಎಕ್ಸ್ ಬಳಕೆದಾರರು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ 33-ಸೆಕೆಂಡ್-ಉದ್ದದ ತುಣುಕನ್ನು ಹಂಚಿಕೊಂಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಪಕ್ಷದ ಹೀನಾಯ ಸೋಲನ್ನು ಪ್ರದರ್ಶಿಸಲು ಸಹ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಮತ್ತು ಕೆಲವರು ಅಣ್ಣಾಮಲೈ…

Read More
ಮೋದಿ

Fact Check: ತಮಿಳುನಾಡಿನಲ್ಲಿ “ಗೋ ಬ್ಯಾಕ್ ಮೋದಿ” ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಕೋಲ್ಕತ್ತಾದ ಹಳೆಯ ಪೋಟೋ ವೈರಲ್ ಆಗಿದೆ

ಪ್ರಸ್ತುತ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಪಲಿತಾಂಶಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 2 ಸಾವಿರ ಪೋಲಿಸ್ ಭದ್ರತೆಯೊಂದಿಗೆ 48 ಗಂಟೆಗಳ ಕಾಲ(ಎರಡು ದಿನ) ಧ್ಯಾನಕ್ಕೆ ತೆರಳಿದ್ದಾರೆ. ಆದರೆ ಮೋದಿಯವರ ಧ್ಯಾನದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ತಮಿಳುನಾಡು ಸೇರಿದಂತೆ ದೇಶದಾದ್ಯಂತ ವ್ಯಾಪಕವಾಗದ ಟೀಕೆಗೆ ಗುರಿಯಾಗುತ್ತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಮೋದಿಯವರನ್ನು ಟೀಕಿಸಲಾಗುತ್ತಿದೆ. ಈಗ, “ತಮಿಳುನಾಡಿನ ಜನಗಳಷ್ಟು ಮೋದಿಯನ್ನು ದ್ವೇಷಿಸುವವರು ಇಲ್ಲ” ಎಂದು ರಸ್ತೆಯ…

Read More
ದುಬೈ

Fact Check: ದುಬೈ ಶೇಖ್‌ನ ಹೆಂಡತಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ ಎಂದು 2019ರ UAE ರಾಜಕುಮಾರಿಯ ವಿಡಿಯೋ ಹಂಚಿಕೆ

‘ದುಬೈ ರಾಜನ ಪತ್ನಿ’ ಚೆನ್ನೈನಲ್ಲಿ ವ್ಯಾಪಾರ ಪ್ರವಾಸದಲ್ಲಿದ್ದಾಗ ತಮಿಳುನಾಡಿನ ಶ್ರೀಪುರಂನಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ದುಬೈ ಶೇಖ್ ಅವರ ಹೆಂಡತಿ.. ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು.. ಆಗ ತಮಿಳುನಾಡಿನ ಗೋಲ್ಡನ್ ಟೆಂಪಲ್ ದರ್ಶನ ಮಾಡಿದ್ದಾರೆ.. ಹಿಜಾಬ್ ಇಲ್ಲ ,ಬುರ್ಖಾ ಇಲ್ಲ.. ಸನಾತನ ಧರ್ಮಕ್ಕನುಗುಣವಾಗಿ ಶಿಸ್ತಿನ ವಸ್ತ್ರ ಧರಿಸಿ ಪ್ರಸಾದವನ್ನು ಸ್ವೀಕರಿಸಿಕೊಂಡಿದ್ದಾರೆ.. ಇಲ್ಲಿ ನೂರಾರು ಕಟ್ಟುಪಾಡುಗಳು, ಎಂತಹ ವಿಚಿತ್ರ ವಿಪರ್ಯಾಸ.” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ. ದುಬೈ…

Read More
BJP

Fact Check: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ

ಈ ಬಾರಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಯವರು ಅಲ್ಲಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಈಗ, ತಮಿಳುನಾಡಿನಲ್ಲಿ ಗಿಣಿ ಶಾಸ್ತ್ರ ಹೇಳುವವನ ಗಿಳಿ ಚುನಾವಣೆಯಲ್ಲಿ BJP ಗೆಲ್ಲುತ್ತದೆ ಎಂದಿದ್ದಕ್ಕೆ ಶಾಸ್ತ್ರದವನನ್ನು ಎಳೆದೊಯ್ದ ಪೊಲೀಸರು! ಎಲ್ಲಿದೆ ಪ್ರಜಾಪ್ರಭುತ್ವ! ಎಂಬ ವಿಡಿಯೋ ಒಂದನ್ನು ಹರಿಬಿಡಿಟ್ಟಿದ್ದು, ಈ ವಿಡಿಯೋದಲ್ಲಿ ತಮಿಳುನಾಡಿನ ಪೋಲೀಸರು ಗಿಳಿ ಶಾಸ್ತ್ರ ಹೇಳುವ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿ…

Read More
KRS

Fact Check: ಬರದಲ್ಲೂ KRS ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬುದು ಸುಳ್ಳು

ಈ ಬಾರಿ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಬೇಸಿಗೆ ಸಮೀಪಿಸುತ್ತಿದ್ದಂತೆ ನೀರಿಗಾಗಿ ಸಮಸ್ಯೆ ಶುರುವಾಗಿದೆ. ಬೆಂಗಳೂರಿನಾದ್ಯಂತ ಕುಡಿಯುವ ನೀರಿಗೆ ಸಮಸ್ಯೆಯಾಗಿ ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಸಧ್ಯ ರಾಜ್ಯದ 195 ತಾಲ್ಲೂಕುಗಳನ್ನು ಪರಪೀಡಿತ ಪ್ರದೇಶಗಳೆಂದು ಪಟ್ಟಿ ಮಾಡಿ ಆಯಾ ತಾಲೂಕುಗಳಿಗೆ ಬರ ಪರಿಹಾರದ ಹಣವನ್ನು ನೀಡುವ ಸಲುವಾಗಿ ಕೆಲಸಗಳು ನಡೆಯುತ್ತಿವೆ. ಆದರೆ “ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ  ಕಾಂಗ್ರೆಸ್ ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಲೇ ಇದೆ….

Read More
Halal

Fact Check: ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ತಮಿಳುನಾಡಿನ ನ್ಯಾಯಾಲಯದಲ್ಲಿ ವಾದಿಸಿಲ್ಲ

ಇತ್ತೀಚೆಗೆ ಹಲಾಲ್‌ಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲಾಲ್ ಎಂದರೆ ಏನು ಎಂಬ ಕುರಿತು ತಿಳಿದುಕೊಳ್ಳದೆ ಹಲಾಲ್‌ಗೆ ಸಂಬಂಧಿಸಿದಂತೆ ತಪ್ಪಾಗಿ ಅರ್ಥಿಸಲಾಗುತ್ತಿದೆ. ಇನ್ನೂ ಉತ್ತರ ಪ್ರದೇಶದ ಸರ್ಕಾರವು ಹಲಾಲ್‌ಗೆ ಸಂಬಂಧಿಸಿದ ಯಾವುದೇ ಆಹಾರವನ್ನು, ಬಳಸುವುದು, ಶೇಕರಿಸುವುದು ಮತ್ತು ಮಾರಾಟ ಮಾಡುವುದನ್ನು ತನ್ನ ರಾಜ್ಯದ ವ್ಯಾಪ್ತಿಯೊಳಗೆ ನಿಷೇಧಿಸಿದೆ. ಈಗ, ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು…

Read More
DMK

Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು

ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಕೇರಳಾದ ಕಮುನಿಸ್ಟ್‌ ಪಕ್ಷದ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಎರಡೂ ಪಕ್ಷಗಳೂ ಹಿಂದು ವಿರೋಧಿ ಪಕ್ಷಗಳು ಎಂಬಂತೆ ಬಿಂಬಿಸಲಾಗುತ್ತಿದೆ. ತಮಿಳುನಾಡಿನ ಸಚಿವ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರ ಮಗನಾದ ಉದಯನಿಧಿ ಸ್ಟಾಲಿನ್ “ಸನಾತನ” ಧರ್ಮದ ಬಗ್ಗೆ ಮಾಡಿದ ಟೀಕೆಯ ನಂತರ ಇಂತಹ ಅಪಪ್ರಚಾರಗಳು ಇನ್ನೂ ಹೆಚ್ಚಾಗಿವೆ. ಇತ್ತೀಚೆಗೆ, ತಮಿಳುನಾಡಿನ ಕ್ರಿಶ್ಚಿಯನ್ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪ್ರಾಚೀನ ಶಿವಲಿಂಗವನ್ನು ತೆರವುಗೊಳಿಸಿ, ಹಿಂದೂ ವಿರೋಧಿ ನಡೆ ಅನುಸರಿಸಿದೆ ಎಂಬ…

Read More
ರಾಹುಲ್ ಗಾಂಧಿ

ಭಾರತೀಯ ಸೈನ್ಯದ ಬದಲು, ಕಾರ್ಮಿಕರು ಮತ್ತು ರೈತರ ಸೈನ್ಯ ಬೇಕೆಂದು ರಾಹುಲ್ ಗಾಂಧಿ ಪ್ರತಿಪಾದಿಸಿಲ್ಲ

ಭಾರತದ ಕಾರ್ಮಿಕರು, ರೈತರು ಮತ್ತು ನೌಕರರನ್ನು ಬಳಸಿಕೊಂಡರೆ ಚೀನಾದ ವಿರುದ್ದ ಹೋರಾಡಲು ಭಾರತೀಯ ಸೇನೆಯ ಅಗತ್ಯವೇ ಇರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಇಂತವನನ್ನು ಮುಂದಿನ ಪ್ರಧಾನಿ ಮಾಡಿದರೆ ದೇಶದ ಕತೆ ಏನಾಗಬಹುದು ಎಂದು ಚಿಂತಿಸಿ” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವಿಡಿಯೋ 24 ಜನವರಿ, 2021ರಂದು ತಮಿಳುನಾಡಿನಲ್ಲಿ ನೇಕಾರ ಸಮುದಾಯದ ಜೊತೆಗೆ ರಾಹುಲ್ ಗಾಂಧಿ ನಡೆಸಿದ ಸಂವಾದವಾಗಿದೆ. “ಭಾರತದ ದುರ್ಬಲ ಆರ್ಥಿಕತೆಯಿಂದಾಗಿ ನಮ್ಮ ಗಡಿಗಳಲ್ಲಿ ಚೀನಾದ ಅತಿಕ್ರಮಣಗಳು ನಡೆಯುತ್ತಿದೆ ಎಂದು…

Read More

ಕಾವೇರಿ ಕೇವಲ ಕರ್ನಾಟದ ಸ್ವತ್ತಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಲ್ಲ: ಇದು ತಿರುಚಿದ ಫೋಟೊ

ಕಾವೇರಿ ಕರ್ನಾಟಕಕ್ಕಿಂತ ತಮಿಳುನಾಡಿನಲ್ಲೇ ಹೆಚ್ಚು ಹರಿಯುವುದರಿಂದ ತಮಿಳುನಾಡಿಗೆ ಕಾವೇರಿ ಮೇಲೆ ಹೆಚ್ಚಿನ ಹಕ್ಕಿದೆ. ಕಾವೇರಿ ಕೇವಲ ಕರ್ನಾಟದ ಸ್ವತ್ತಲ್ಲ ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: KRS ನಿಂದ ಒಂದು ಹನಿ ನೀರು ಬಿಡುವುದಿಲ್ಲ, ತಮಿಳುನಾಡಿನ ಮನವಿಯನ್ನು CWRC ತಿರಸ್ಕರಿಸಿರುವುದರಿಂದ ಸಂತಸವಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿದ ಮಾತನಾಡಿದ ಅವರು, ‘2,000 ಕ್ಯೂಸೆಕ್ಸ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತಿರುತ್ತದೆ. 1,000 ಕ್ಯೂಸೆಕ್ಸ್…

Read More