Fact Check : ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಾದ ಇತ್ತೀಚಿನ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳುತ್ತಿದೆ
ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ನಡೆದ ಸ್ಫೋಟದ ವೀಡೀಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ “ಭಯೋತ್ಪಾದಕನ ದೇಹದೊಳಗೆ ಟೈಮ್ ಬಾಂಬ್‌ನ್ನು ಇರಿಸಿ ಪ್ಯಾಲೆಸ್ಟೀನಿಯರಿಗೆ ಹಿಂದಿರುಗಿಸಿದ ಇಸ್ರೇಲ್. ಅದರ ಪರಿಣಾಮ ಇದರಲ್ಲಿದೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್: ಸತ್ಯ : 2012ರ ಜುಲೈ ತಿಂಗಳಿನಲ್ಲಿ ಈ ವೀಡೀಯೊವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆಯಲ್ಲಿ ಸಂಭವಿಸಿದ್ದು ಸರ್ಕಾರಿ ಪ್ರಾಯೋಜಿತ ಕಾರ್‌ಬಾಂಬ್ ಸ್ಪೋಟದಿಂದಾಗಿ ಅಂತ್ಯಕ್ರೀಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಸುಮಾರು 85 ಜನರು ಸಾವನ್ನಪ್ಪಿದ್ದಾಗಿ…