Fact Check | ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

” ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ-20 ಟ್ರೋಫಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ನಂತರ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಅವರು ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ನ್ಯೂಸ್‌ ನೋಡಿ, ಇದು ಬಿಬಿಸಿಯ ಅಧಿಕೃತ ವರದಿಯಾಗಿದೆ. ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಮತಾಂತರಗೊಂಡ ವರದಿಯನ್ನು ಪ್ರಕಟಗೊಳಿಸಲಾಗಿದೆ.” ಎಂದು ಬಿಬಿಸಿ ಬಂಗಾಳದ ವರದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನು ನೋಡಿದ ಹಲವು ಬಿಬಿಸಿಯೇ ಈ ವರದಿ ಮಾಡಿದ್ದಾಗ…

Read More

Fact Check | ಭಾರತೀಯ ಪೊಲೀಸರು ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಸಂದೇಶ ಹಂಚಿಕೆ

“ಸರ್ಕಾರಿ ಅಧಿಕಾರಿಗಳಂತೆ ವೇಷ ಧರಿಸಿ ಜನಗಣತಿ ಮಾಡಲು ಕಳ್ಳರ ಗುಪೊಂದು ಬರುತ್ತದೆ, ಈ ಗುಂಪು ನಿಮ್ಮ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಈ ಬಗ್ಗೆ ಪೊಲೀಸ್‌ ಇಲಾಖೆಯೇ ಎಚ್ಚರಿಕೆಯನ್ನು ನೀಡಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಸಾಕಷ್ಟು ಮಂದಿ ಇದೇ ನಿಜವಾದ ಸುದ್ದಿ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನನಿಜವೆಂಬಂತೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಜನಗಣತಿ ಎಂಬುದು ಈಗ ನಡೆಯುತ್ತಿಲ್ಲ. ಆದರೂ ಕೂಡ ಈ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ….

Read More
Survey

Fact Check: ದರೋಡೆಕೋರರ ತಂಡವೊಂದು ಸರ್ಕಾರಿ ಸಮೀಕ್ಷೆಯ ನೆಪದಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂಬುದು ಸುಳ್ಳು

ಜಾತಿ ಜನಗಣತಿ ನಡೆಸುವ ಕುರಿತು ಪರ ವಿರೋಧಗಳ ಚರ್ಚೆಯ ಬೆನ್ನಲ್ಲೆ ಜನಗಣತಿಯ ಸಮೀಕ್ಷೆಯ ಕುರಿತು ಮತ್ತು ಸರ್ಕಾರಿ ಯೋಜನೆಯಾದ ಆಯು‍ಷ್ಮಾನ್ ಭಾರತದ ಕುರಿತು ಸುಳ್ಳು ಸುದ್ದಿಯೊಂದು ಹಲವಾರು ವರ್ಷಗಳಿಂದ ಹರಿದಾಡುತ್ತಿದೆ. ಎಲ್ಲಾ ಫ್ಲಾಟ್ / ಮನೆ ಮಾಲೀಕರಿಗೆ ಹೈ ಅಲರ್ಟ್, ದರೋಡೆಕೋರರ ಗುಂಪೋಂದು ಜನಗಣತಿಯ ನೆಪದಲ್ಲಿ ಅಥವಾ ಆಯುಷ್ಮಾನ್ ಸರ್ಕಾರಿ ಯೋಜನೆ ಭಾಗವಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ಗೃಹ ಸಚಿವಾಲಯದ ಸ್ಟಾಂಪ್ ಮತ್ತು ಲೆಟರ್ ಹೆಡ್ ಅನ್ನು ಹೊಂದಿದ್ದು, ಗುರುತಿನ ಚೀಟಿಗಳು ಸಹ ಇವೆ. ಇದು…

Read More