ಶಕ್ತಿ ಯೋಜನೆ

Fact Check: ಶಕ್ತಿ ಯೋಜನೆ ಬಂದ್ ಎಂದು ಸುಳ್ಳು ಹರಡಿದ ಜಸ್ಟ್‌ ಕನ್ನಡ ಸುದ್ದಿ ಮಾಧ್ಯಮ

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಲೇ ಈ ಗ್ಯಾರಂಟಿ ಯೋಜನೆಗಳ ಪಾಲುದಾರರಾದ ಗ್ರಾಮೀಣ ಮಹಿಳೆಯರು ಸಿದ್ದರಾಮಯ್ಯನವರ ಈ ಯೋಜನೆಗಳ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದರೆ. ಪ್ರತಿಪಕ್ಷಗಳು ಟೀಕೆಗಳನ್ನು ಮಾಡುತ್ತಿವೆ. ಈ ಯೋಜನೆಗಳ ಕುರಿತು ತಪ್ಪು ಮಾಹಿತಿಗಳನ್ನು, ಟೀಕೆಗಳನ್ನು ಬರೆದು ಹಂಚಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ. ಈಗ, ಬಿಗ್ ಬ್ರೇಕಿಂಕ್ ನ್ಯೂಸ್,  01 ಮಾರ್ಚ್ 2024ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್…

Read More
Bharat

Fact Check: ಭಾರತ ಸರ್ಕಾರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ.ಗಳನ್ನು ನೀಡುತ್ತಿದೆ ಎಂಬುದು ಸುಳ್ಳು

ಭಾರತ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಪ್ರಧಾನಿ ಮೋದಿಯವರ ಹಲವು ಯೋಜನೆಗಳ ಕುರಿತು ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎಲ್ಲರ ಮೊಬೈಲ್‌ಗಳಿಗೆ ಒಂದು ತಿಂಗಳ ಉಚಿತ ರಿಚಾರ್ಟ್ ಮಾಡಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಈಗ, ಭಾರತ ಸರ್ಕಾರವು ರೋಜ್ಗಾರ್ ಸಂಗಮ್ ಯೋಜನೆಯಡಿ ಮಾಸಿಕ 3000 ರೂ.ಗಳನ್ನು ನೀಡುತ್ತಿದೆ. ಅರ್ಹತಾ ಮಾನದಂಡಗಳೆಂದರೆ, 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು….

Read More

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಿಟ್ ವಿಡಿಯೋ ಹಂಚಿ ಸುಳ್ಳು ಸಾರಿದ BJP ನಾಯಕರು

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳ ಹಿಂದೆಯಷ್ಟೇ ರೈತರ ಸಾಲ ಮನ್ನದ ಕುರಿತು ತೀವ್ರವಾದ ಚರ್ಚೆಗಳು ಜರುಗಿವೆ. “ಸಾಲ ಪಡೆದಿರುವ ರೈತರು ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನ ಮಾಡಲಾಗುವುದು, ಅದು ಮಧ್ಯಮಾವದಿ ಸಾಲ ಇರಬಹುದು ಅಥವಾ ಧೀರ್ಘವಧಿಯ ಸಾಲ ಇರಬಹುದು, ಎಲ್ಲದರ ಮೇಲಿರುವ ಬಡ್ಡಿಯನ್ನು ಮನ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ “ಎಲ್ಲಿಂದ ತರ್ಲಿ ದುಡ್ಡು? ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುತ್ತೇವೆ ಹಾಗಂತ ಹೇಳಿದ್ದೆಲ್ಲವನ್ನು ಮಾಡೋಕೆ ಆಗತ್ತಾ,…

Read More

ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ

ಕಳೆದ ನವೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕರ್ನಾಟಕದ ಯೋಧ ಕ್ಯಾ. ಪ್ರಾಂಜಲ್ ರವರ ಸಾವಿಗೆ ಇಡೀ ರಾಜ್ಯದ ಜನರು ಸಂತಾಪ ಸೂಚಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳು ಸಹ ಪ್ರಾಂಜಲ್‌ರವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ 50 ಲಕ್ಷದಷ್ಟು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದು ತಡವಾಗುತ್ತಿದ್ದಂತೆ ಬಿಜಿಪಿ ಕಾರ್ಯಕರ್ತರು ಸೇರಿದಂತೆ ಹಲವು ಮಾಧ್ಯಮಗಳು ಸಹ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದಾರೆ.ಈಗ, ಕ್ಯಾ. ಪ್ರಾಂಜಲ್ ಯಾರು? ಯಾವಾಗ…

Read More

Fact Check : ದಸರಾ ಕಲಾವಿದರಿಗೆ ಸಹಿ ವ್ಯತ್ಯಾಸದಿಂದ ಚೆಕ್‌ಬೌನ್ಸ್‌ ಆಗಿದೆಯೇ ಹೊರತು ನಾಡಹಬ್ಬದಲ್ಲಿ ಹಗರಣವಾಗಿಲ್ಲ

ರಾಜ್ಯ ಸರ್ಕಾರವನ್ನು ಟೀಕಿಸುವ ಬರದಲ್ಲಿ ಸುಳ್ಳು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ವೈರಲ್‌ ಆಗಿದೆ. ಅದರಲ್ಲಿ “ಥೂ ನಿಮ್ಮ ಸರ್ಕಾರಕ್ಕೆ !! ದಸರಾ ಕಲಾವಿದರಿಗೆ ಕೊಟ್ಟ ಚೆಕ್‌ ಬೌನ್ಸ್‌ ಆಗಿದ್ದಲ್ಲದೆ ಅವರಿಗೆ ದಂಡ ಹಾಕಲಾಗಿದೆ!! ನಾಡಹಬ್ಬದಲ್ಲೂ ಹಗರಣ ಮಾಡಿದ ಕಾಂಗ್ರೆಸ್ಸನ್ನು ಖಂಡಿಸಲು ಶೇರ್‌ ಮಾಡಿ” ಎಂದು ಬರೆದುಕೊಳ್ಳಲಾಗಿದೆ. ಇದರ ಕುರಿತು ಪರಿಶೀಲನೆ ನಡೆಸಿದಾಗ ದಸರಾ ಅಂಗವಾಗಿ ಖರ್ಚು ವೆಚ್ಚದ ಲೆಕ್ಕಕ್ಕಾಗಿ ಆಯಾ ಉಪಸಮಿತಿಗಳ ಹೆಸರಿನಲ್ಲಿಯೇ ಬ್ಯಾಂಕ್‌ ಖಾತೆ ತೆರೆದು ಆ ಮೂಲಕವೇ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್‌ ನೀಡಲಾಗುತ್ತಿದೆ….

Read More

ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.

ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥರು ಹಿಂದು ವಿರೋಧಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮತ್ತು ಸಂಸದ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಮಾರ್ಚ್, 2018ರಲ್ಲಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿಕೊಟ್ಟು ಜಗದ್ಗುರು ಭಾರತಿ ತೀರ್ಥರನ್ನು ಭೇಟಿಯಾಗಿದ್ದರು. ಚರ್ಚೆಯ ನಂತರ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಿದರು.ನಂತರ ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿಯವರ ಚಿತ್ರವನ್ನು…

Read More