ಈಶ್ವರಪ್ಪ

Fact Check: ಕಾಂಗ್ರೆಸಿಗೆ ಲಾಭ ಆಗುವುದು ಬೇಡ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಈಶ್ವರಪ್ಪ ಹೇಳಿಲ್ಲ

ಇತ್ತೀಚೆಗೆ ರಾಜಕೀಯ ನಾಯಕರ ನಕಲಿ ಹೇಳಿಕೆಯ ಪತ್ರಿಕಾ ವರದಿಗಳು ಸಾಕಷ್ಟು  ಸುದ್ದಿ ಮಾಡುತ್ತಿವೆ. ಲೋಕಸಭಾ ಚುನಾವಣಾ ಮೊದಲನೇ ಹಂತದ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಮತ ಬೇಡ” ಎಂದಿದ್ದಾರೆ ಎಂದು ನಕಲಿ ವರದಿ ಹರಿಬಿಡಲಾಗಿತ್ತು. ನಂತರ, ಚಾಮರಾನಗರ ಬಿಜೆಪಿ ಅಭ್ಯರ್ಥಿ ಎಸ್‌ ಬಾಲರಾಜ್ ಅವರು ” ದೇಶಭಕ್ತ ಆರ್‌ಎಸ್‌ಎಸ್‌ಯಿಂದ ಮಾತ್ರ ಸಂವಿಧಾನ ಬದಲಿಸಲು ಸಾಧ್ಯ” ಎಂದು ಹೇಳಿದ್ದಾರೆ ಎಂದು ನಕಲಿ ವರದಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡಲಾಗಿತ್ತು. ಈಗ ಎರಡನೇ ಹಂತದ ಚುನಾವಣೆಗೆ ಇನ್ನು ಒಂದು…

Read More

Fact Check: ಶಿಕ್ಷಕನೋರ್ವ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬುದು ಸುಳ್ಳು

ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10 ನೇ ತರಗತಿ ವರಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಹಾಲು(ಕ್ಷೀರ ಭಾಗ್ಯ), ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದೆ. ಈ ಹಿಂದೆ ಶಾಲೆಯಲ್ಲಿ ಮೊಟ್ಟೆ ವಿತರಿಸುವ ಕುರಿತು ಬಿಜೆಪಿ ಪಕ್ಷದ ಅನೇಕ ಮುಖಂಡರು ವಿರೋಧಿಸಿದ್ದರು. ಆದರೆ ಮತ್ತೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ತನ್ನ ಹಿಂದಿನ ಯೋಜನೆಯನ್ನು ಮುಂದುವರೆಸಿದೆ….

Read More
ಶಿವಮೊಗ್ಗ ಗಲಭೆಯ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು

ಶಿವಮೊಗ್ಗ ಗಲಭೆ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು

ಅಕ್ಟೋಬರ್ 01ರ ಭಾನುವಾರ ಸಂಜೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಗಲಭೆ ಉಂಟಾಗಿತ್ತು. ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ 60 ಮಂದಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್‌ಕೌಂಟರ್ ನಿಂದ ಮುಸ್ಲಿಂ ಯುವಕ ಮೃತ್ಯು ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಕತ್ತಿಗಳನ್ನಿಡಿದು ಮುಸ್ಲಿಮರ ಮೆರವಣಿಗೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ…

Read More