ಕೇರಳ ಪೋಲಿಸರು ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಸುಳ್ಳು
ಶಬರಿಮಲೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳು, ಸುಳ್ಳು ಪ್ರತಿಪಾದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಶಬರಿಮಲೆಯಲ್ಲಿರುವ ವಾವರ್ ಸ್ವಾಮಿ ಮಸೀದಿಯ ಕುರಿತು ಅಪಪ್ರಚಾರ ಮಾಡಿ ಅನೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು. ಈಗ ಕೇರಳದ ಕಮುನಿಸ್ಟ್ ಸರ್ಕಾರ ಮತ್ತು ಇಂಡಿಯಾ ಒಕ್ಕೂಟವನ್ನು ಅಲ್ಲಗೆಳೆಯುವ ಸಲುವಾಗಿ “ಕೇರಳದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿದೆ ನೋಡಿ. ಮಕ್ಕಳು ಎಂಬುದನ್ನು ಲೆಕ್ಕಿಸದೆ ಶಬರಿಮಲೆಗೆ ತೆರಳುತ್ತಿದ್ದ ಬಾಲಕನನ್ನು ಕೇರಳ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.” ಎಂಬ ಸಂದೇಶದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದನ್ನು…