ಮುಸ್ಲಿಂ

Fact Check: ಮುಸ್ಲಿಂ ಮಹಿಳೆಯಿಂದ ಮಗು ಅಪಹರಣ ಎಂದು ಈಜಿಪ್ಟಿನ ಫೇಕ್ ವಿಡಿಯೋ ಹಂಚಿಕೆ

ಕಳೆದ ಒಂದು ದಶಕದಿಂದ ಮುಸ್ಲಿಂ ಸಮುದಾಯದವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಸುಳ್ಳು ಆರೋಪಗಳನ್ನು ಹರಿಬಿಡಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಇಸ್ಲಾಮ್ ಧರ್ಮದ ಮೇಲೆ, ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಹುಟ್ಟಿಸುವುದೇ ಆಗಿದೆ. ಜನರು ಸಹ ಇವುಗಳ ಸತ್ಯ ತಿಳಿದುಕೊಳ್ಳದೆ ಸುಳ್ಳುಗಳನ್ನೇ ನಂಬಿಕೊಳ್ಳುತ್ತಾ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಲಿಫ್ಟ್‌ ಒಂದರಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಈಜಿಪ್ಟ್‌ನ ವಿಡಿಯೋ ಹಂಚಿಕೊಳ್ಳಲಾಗುತ್ತಿತ್ತು. ಈಗ “ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆ ಬದಿ ಕುಳಿತಿದ್ದ ಬಾಲಕನನ್ನು ಅಪಹರಿಸಿದ್ದಾರೆ. ಇಂತವರ ಕುರಿತು…

Read More
ಮುಂಬೈ

Fact Check: ಮುಂಬೈನ ಮೀರಾ ರಸ್ತೆಯ ಗಲಭೆ ಎಂದು ಪಶ್ಚಿಮ ಬಂಗಾಳದ ವಿಡಿಯೋ ಹಂಚಿಕೆ

ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ದೇಶದ ಕೆಲವು ಭಾಗಗಳಲ್ಲಿ ಕೋಮು ಗಲಭೆಯ ಸಾಧ್ಯೆತೆ ಹೆಚ್ಚಿದ್ದರೂ ಪೋಲಿಸ್ ಇಲಾಖೆಯ ಕಟ್ಟೆಚ್ಚರದಿಂದ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶದಾದ್ಯಂತ ಮುಂಜಾಗ್ರತ ಕ್ರಮವನ್ನು ವಹಿಸಿಲಾಗಿತ್ತು. ಆದರೂ ಮುಂಬೈನ ಮುಂಸ್ಲಿಂ ಸಮುದಾಯದ ಹೆಚ್ಚಿರುವ ಮೀರಾ ರಸ್ತೆಯಲ್ಲಿ ಕೋಮುಗಲಭೆಯ ಪ್ರಕರಣಗಳು ದಾಖಲಾಗಿವೆ. ಕೆಲವು ಬಲಪಂಥೀಯ ಯುವಕರು ಕೇಸರಿ ಭಾವುಟ ಹಿಡಿದು, ಘೋಷಣೆಗಳ ಕೂಗುತ್ತಾ ಮುಸ್ಲಿಂ ಸಂಚಾರಿಗಳಿಗೆ ತಳಿಸುವ, ಅವರ ಅಂಗಡಿ ಮುಗ್ಗಟ್ಟುಗಳನ್ನು ಒಡೆದು ಹಾಕುವ ವಿಡಿಯೋಗಳು ಈಗ ಸಾಮಾಜಿಕ…

Read More

Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕರ್ನಾಟಕದ ಕುರಿತು ಉತ್ತರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಲೂ ಈ ಸುಳ್ಳು ಅಪಪ್ರಚಾರಗಳು ಇನ್ನಷ್ಟು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ “ಕರ್ನಾಟಕದ ಬೆಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಾಗುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳು ದಾಳಿ ನಡೆಸಿ ಅಪಹರಿಸಿದ್ದಾರೆ. ಅಪಹರಣಕ್ಕೊಳಗಾದ ಹುಡುಗಿಯರು ಯಾರು ಎಂದು ತಿಳಿದುಬಂದಿಲ್ಲ” ಎಂಬ ಹಿಂದಿಯಲ್ಲಿ ಬರೆದ ತಲೆಬರಹದೊಂದಿಗೆ ಹಲವಾರು ಜನ ಇದನ್ನು ಹಂಚಿಕೊಳ್ಳುತ್ತಿದ್ದಾರೆ.ಲಿಫ್ಟ್‌ನಲ್ಲಿ ಗ್ರೌಂಡ್ ಫ್ಲೌರ್ ವರೆಗೆ ಕರೆದೋಯ್ದು ಅಲ್ಲಿಂದ ನೇರವಾಗಿ ಕಾರಿಗೆ…

Read More

ಮುಸ್ಲಿಂ ಸಮುದಾಯದ ಕುರಿತು ಪ್ರೊಪಗಂಡದ ಸುಳ್ಳು ವಿಡಿಯೋ ಹಂಚಿಕೊಂಡ ಪೋಸ್ಟ್‌ಕಾರ್ಡ್

ಜಗತ್ತಿನ ಯಾವುದೇ ರಾಷ್ಟ್ರದಲ್ಲೇ ಆಗಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ಧರ್ಮಗಳ ಮೇಲೆ, ಅಲ್ಲಿನ ಬಹುಸಂಖ್ಯಾತರು ನಿರಂತರವಾಗಿ ಶೋಷಿಸುತ್ತಾರೆ. ಮತ್ತು ಅವರ ಸಂಸ್ಕೃತಿಯನ್ನು ತುಚ್ಚಿಕರಿಸಿ, ಅವರ ಕಥೆಗಳನ್ನು, ಕೊಡುಗೆಗಳನ್ನು ಮರೆವಿಗೆ ಸರಿಸಿ, ಸಾಧ್ಯವಾದಷ್ಟು ಅವರ ಮೇಲೇ ಸಲ್ಲದ ಆರೋಪಗಳನ್ನು ಹೊರಿಸಿ ನಂತರ ಅವರ ಮೇಲೆ ನೇರ ದಾಳಿ ನಡೆಸುತ್ತವೆ. ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಾಭಲ್ಯದ ದೇಶಗಳಲ್ಲಿ ಯಹೂದಿ ಮತ್ತು ಮುಸ್ಲಿಮರನ್ನು ನಡೆಸಿಕೊಂಡಂತೆ, ಮುಸ್ಲಿಂ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಹಿಂದುಗಳನ್ನು ನಡೆಸಿಕೊಂಡಂತೆ, ಬಹುಸಂಖ್ಯಾತ ಹಿಂದು ಸಮಾಜದ ಭಾರತದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನೂ ಹೀಗೆಯೇ…

Read More
ಮುಸ್ಲಿಂ

Fact Check: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಮದುವೆಯಾಗಿದ್ದಾನೆ ಎಂಬುದು ಸುಳ್ಳು

ಇದು ಇಸ್ಲಾಂನ ಸೌಂದರ್ಯ. ಇಲ್ಲಿ ಹೆಂಡತಿಯಾಗಲು ವಯಸ್ಸು ಮುಖ್ಯವಲ್ಲ. ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳಾದ ಪುಟ್ಟ ಬಾಲಕಿಯನ್ನೇ ಮದುವೆಯಾಗಿದ್ದಾನೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇಟಲಿಯ ಕ್ಯಾಥೋಲಿಕ್ ಕುಟುಂಬವೊಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತಮ್ಮ ಮಗಳ ಮೊದಲ ಕಮುನಿಯನ್(communion ceremony) ಆಚರಣೆಯನ್ನು ನಡೆಸುತ್ತಿರುವ ವಿಡಿಯೋ ಇದಾಗಿದೆ. ಹುಡುಗಿಯ ತಂದೆ ಜಿನೊ ಕೊಪ್ಪೊಲಾ ಅಕ್ಟೋಬರ್ 23ರಂದು ತಮ್ಮ ಇಂಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದಾರೆ. ಮಾರನೆ ದಿನವೂ ಸಹ ತನ್ನ ಹೆಂಡತಿ ಜೊತೆಗೆ ಮಗಳಿಗೆ…

Read More
ಟಿಪ್ಪು ಸುಲ್ತಾನ

ಟಿಪ್ಪು ಸುಲ್ತಾನನ ನಿಜ ಚಿತ್ರವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿರುವ ಪೋಟೋಗಳು ಅರಬ್ ಮತ್ತು ಆಫ್ರಿಕಾದ ವ್ಯಾಪಾರಿಗಳದ್ದು

ಕಳೆದೊಂದು ದಶಕದಲ್ಲಿ “ಮೈಸೂರ ಹುಲಿ” ಎಂದೇ ಖ್ಯಾತನಾದ ಟಿಪ್ಪು ಸುಲ್ತಾನ್ ಕುರಿತು, ಆತನ ಇತಿಹಾಸದ ಕುರಿತು ಸಾಕಷ್ಟು ರಾಜಕೀಯ ಪ್ರೇರಿತ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಿವೆ. ನೈಜ ಇತಿಹಾಸವನ್ನು ಕೆದಕುವ ಭರದಲ್ಲಿ ಸುಳ್ಳುಗಳನ್ನು, ಕಟ್ಟು ಕಥೆಗಳನ್ನೂ ಬಳಸಿಕೊಂಡು ಟಿಪ್ಪು ಸುಲ್ತಾನನ ಇತಿಹಾಸದ ಮೇಲೆ ಸಾಕಷ್ಟು ದಾಳಿ ನಡೆಸಲಾಗುತ್ತಿದೆ. ಇಂತಹ ತೇಜೋವಧೆಯ ಭಾಗವಾಗಿ ಹಲವಾರು ವರ್ಷಗಳಿಂದ “ಇದು ನಿಜವಾದ ಟಿಪ್ಪು ಸುಲ್ತಾನನ ಚಿತ್ರ. ಕಾಂಗ್ರೆಸ್ ಸುಳ್ಳು ಚಿತ್ರವನ್ನು ಭಾರತದ ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ತೋರಿಸುತ್ತಾ ಬಂದಿದೆ.” ಎಂದು ಪ್ರತಿಪಾದಿಸಿದ ಹಲವಾರು…

Read More

Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು

ಎಷ್ಟು ಬುದ್ಧಿವಂತರು ನೋಡಿ!!? ಕಾಂಗ್ರೆಸ್ ತನ್ನ ಚುನಾವಣಾ ಗುರುತಿಗೆ ಇಸ್ಲಾಮಿಕ್ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಸಹ ಅವರಿಗೆ ಬೆಂಬಲ ನೀಡುತ್ತ ಬಂದಿದೆ.. ಎಲ್ಲಿ 90% ಹಿಂದೂಗಳಿಗೆ ಗೊತ್ತಾದರೆ ಹಿಂದುಗಳ ಮತಗಳು ಸಿಗುವುದಿಲ್ಲವೋ ಎಂಬ ಕಾರಣಕೆ, ಇದನ್ನು ಗೋಪ್ಯವಾಗಿ ಇಡಲಾಗಿತ್ತು. ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದನ್ನು ಬಹುತೇಕ ಬಲಪಂಥೀಯ ಪುಟಗಳು, ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವು ಉಳುತ್ತಿರುವ ಜೋಡಿ ಎತ್ತುಗಳ ಚಿಹ್ನೆ ಹೊಂದಿತ್ತು. ಇಂದಿರಾ ಕಾಂಗ್ರೆಸ್ ಬಣವು ಹಸು ಮತ್ತು ಕರು…

Read More