Fact Check: ಪ್ಲಾಸ್ಟಿಕ್‌ನಿಂದ ಗೋಧಿ ತಯಾರಿಸಲಾಗುತ್ತಿದೆ ಎಂಬುದು ಸುಳ್ಳು

ಪ್ಲಾಸ್ಟಿಕ್‌ನಿಂದ ಗೋಧಿ ಮಾಡುವ ಜಾಲವೊಂದು ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಕೊಳ್ಳುವ ಮೊದಲು ಎಚ್ಚರವಹಿಸಿರಿ. ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವೀಡಿಯೊ ಸ್ಮಾರ್ಟೆಸ್ಟ್ ವರ್ಕರ್ಸ್ ಎಂಬ ಯೂಟ್ಯೂಬ್‌ ಖಾತೆಯೊಂದರಲ್ಲಿ ಸೆಪ್ಟೆಂಬರ್ 24, 2023ರಲ್ಲಿ “ಪ್ಲಾಸ್ಟಿಕ್‌ನ ಹೊಸ ಉದ್ದೇಶ: ಮರುಬಳಕೆ ಪ್ರಮಾಣವನ್ನು ಅನಾವರಣಗೊಳಿಸುವುದು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. “ಆಟೋಮೊಬೈಲ್ ಉದ್ಯಮಗಳಿಗೆ ಮರುಬಳಕೆಯ ಪ್ಲಾಸ್ಟಿಕ್ ಕಣಗಳನ್ನು ಹೇಗೆ ತಯಾರಿಸಲಾಗುತ್ತದೆ” ಎಂಬ ವಿಡಿಯೋ ವಿವರಣೆ ಪ್ರಕಟಿಸಿದೆ. ವೀಡಿಯೊದಲ್ಲಿ ಬಳಸಲಾದ ಉಪಕರಣಗಳು ಪ್ಲಾಸ್ಟಿಕ್ ಗ್ರಾನ್ಯುಲೇಟರ್(granulator) ತಯಾರಿಸುವವು ಆಗಿವೆ. ಮರುಬಳಕೆ…

Read More