Fact Check | ಹುತಾತ್ಮರಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಎಂದು ಮಾಡೆಲ್‌ ರೇಷ್ಮಾ ಸೆಬಾಸ್ಟಿಯನ್‌ರ ವಿಡಿಯೋ ಹಂಚಿಕೆ

” ಈ ವಿಡಿಯೋ ನೋಡಿ ಈಕೆ ಯಾರು ಎಂದು ತಿಳಿಯಿತೆ.? ಈಕೆ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಆ ವಿಡಿಯೋವಿನ ಒಂದು ಭಾಗದಲ್ಲಿ ಸ್ಮೃತಿ ಸಿಂಗ್‌ ರಾಷ್ಟ್ರಪತಿಗಳಿಂದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದನ್ನು ನೋಡಬಹುದಾಗಿದ್ದು, ಮತ್ತೊಂದು ಭಾಗದಲ್ಲಿ, ಮಹಿಳೆಯೊಬ್ಬರು ವಿಡಿಯೋಗೆ ಪೋಸ್‌ ನೀಡುವುದನ್ನು ನೋಡಬಹುದಾಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಇಬ್ಬರೂ ಕೂಡ ಒಬ್ಬರೆ ಅವರು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್,…

Read More

Fact Check | ಅಗ್ನಿವೀರ್‌ ಪರಿಹಾರ ಧನ : ರಾಹುಲ್‌ ಗಾಂಧಿ, ರಾಜನಾಥ್‌ ಸಿಂಗ್ ಹೇಳಿಕೆಗಳಲ್ಲಿ ಸುಳ್ಳೆಷ್ಟು? ಸತ್ಯವೆಷ್ಟು?

ಜುಲೈ 1 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭದಲ್ಲಿ, ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಟೀಕಿಸಿದರು , ಸರ್ಕಾರವು ಪಿಂಚಣಿ ಅಥವಾ ಹುತಾತ್ಮರ ಸ್ಥಾನಮಾನವನ್ನು ನೀಡಿಲ್ಲ ಎಂದು ಹೇಳಿದರು. ಇದನ್ನೇ ನಿಜವೆಂದು ಭಾವಿಸಿದ ಕಾಂಗ್ರೆಸ್‌ ಬೆಂಬಲಿಗರು ಹಾಗೂ ಹಲವು ಕಾರ್ಯಕರ್ತರು ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. Rahul Gandhi Ji on his meeting with the family members of Agniveer of…

Read More
ಅಗ್ನಿಪಥ್

Fact Check: ಅಗ್ನಿಪಥ್ ಯೋಜನೆ ಮರುಪ್ರಾರಂಭವಾಗಲಿದೆ ಎಂದು ಹಂಚಿಕೊಳ್ಳುತ್ತಿರುವ ಮಾಹಿತಿ ಸುಳ್ಳು

ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಕೇಂದ್ರ ಸರ್ಕಾರದಿಂದ ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯ “ಮರುಪ್ರಾರಂಭ” ವನ್ನು ಘೋಷಿಸುವ ದಾಖಲೆಯನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಯೋಜನೆಯಲ್ಲಿನ ಬದಲಾವಣೆಗಳ ಬೇಡಿಕೆಗಳ ನಡುವೆ, “ಅಗ್ನಿಪಥ್ ಯೋಜನೆಯು ವಿಮರ್ಶೆಗಳ ನಂತರ ಸೈನಿಕ ಸಮಾನ್ ಯೋಜನೆಗೆ ಬದಲಾವಣೆ (sic)” ಎಂದು ಹಂಚಿಕೊಂಡಿರುವ ವರದಿ ಹೇಳುತ್ತದೆ. ಸೇವಾ ಅವಧಿಯನ್ನು ನಾಲ್ಕರಿಂದ ಏಳು ವರ್ಷಗಳವರೆಗೆ ವಿಸ್ತರಿಸುವುದು, ತರಬೇತಿ ಅವಧಿಯನ್ನು 24 ರಿಂದ 42 ವಾರಗಳಿಗೆ…

Read More

Fact Check | ಬಿಜೆಪಿ ಮಾರ್ಗದರ್ಶಿ ಮಂಡಳಿಗೆ ಇತ್ತೀಚೆಗೆ ಮೋದಿ ಹೆಸರು ಸೇರಿಸಿದೆ ಎಂಬುದು ಸುಳ್ಳು

ಬಿಜೆಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೆಸರನ್ನು ‘ಮಾರ್ಗದರ್ಶಕ್ ಮಂಡಲ್’ ವರ್ಗದ ಅಡಿಯಲ್ಲಿ ಪಟ್ಟಿಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಕ್ರೀನ್‌ಶಾಟ್‌ ಜೊತೆಗೆ “2024 ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೆಸರನ್ನು ಸೇರಿಸಲಾಗಿದೆ. ಅವರನ್ನು ಈಗ ಬಿಜೆಪಿಯಿಂದ ನಿಧಾನವಾಗಿ ದೂರ ಇಡಲಾಗುತ್ತಿದೆ.” ಎಂದು ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಕೇರಳ ಕಾಂಗ್ರೆಸ್‌ ಕೂಡ ಇದೇ…

Read More

Fact Check | ದೇಣಿಗೆಯ ಹಣವನ್ನು ಭಾರತೀಯ ಸೇನೆ ಶಸ್ತ್ರಾಸ್ತ್ರ ಖರೀದಿಗೆ ಬಳಸುತ್ತಿದೆ ಎಂಬುದು ಸುಳ್ಳು

“ಭಾರತೀಯ ಸೇನೆy AFBCWF ಬ್ಯಾಂಕ್ ಖಾತೆಗೆ ನೀಡಿದ ದೇಣಿಗೆಯನ್ನು ಭಾರತೀಯ ಸೇನೆಯು ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಿಕೊಳ್ಳಲಾಗುತ್ತಿದೆ” ಎಂಬ ಸುದ್ದಿಯೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಇದನ್ನೇ ನಿಜವೆಂದು ಹಲವಾರು ಮಂದಿ ನಂಬಿದ್ದಾರೆ. ಇನ್ನು ಇದೇ ಸುದ್ದಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಸುದ್ದಿಯ ಕುರಿತು ಹಲವಾರು ಸುದ್ದಿ ಸಂಸ್ಥೆಗಳು ಈ ಹಿಂದೆಯೇ…

Read More
Baba Balakanathh

ಬಾಬಾ ಬಾಲಕ್ ನಾಥ್ ರಾಜಸ್ಥಾನದ ನೂತನ ಮುಖ್ಯಮಂತ್ರಿ ಎಂದು ಯೋಗಿ ಆದಿತ್ಯನಾಥ್ ಘೋಷಿಸಿಲ್ಲ

ರಾಜಸ್ತಾನದ ಚುನಾವಣೆ ಮುಗಿದು ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೆ ಕೇಂದ್ರ ವೀಕ್ಷಕರನ್ನು ನೇಮಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮುಂದಿನ ರಾಜಸ್ತಾನದ ಮುಖ್ಯಮಂತ್ರಿ ಯಾರು ಎಂಬ ಆಯ್ಕೆಯ ಕುರಿತು ಸಾಕಷ್ಟು ಚರ್ಚೆ ಜರುಗುತ್ತಿದೆ. ಇದರ ಬೆನ್ನಲ್ಲೇ,  ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಬಾಬಾ ಬಾಲಕ್ ನಾಥ್ ಅಧಿಕಾರ ವಹಿಸುವರೆಂದು ಆದಿತ್ಯನಾಥ್ ಘೋಷಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

Read More