Baba Balakanathh

ಬಾಬಾ ಬಾಲಕ್ ನಾಥ್ ರಾಜಸ್ಥಾನದ ನೂತನ ಮುಖ್ಯಮಂತ್ರಿ ಎಂದು ಯೋಗಿ ಆದಿತ್ಯನಾಥ್ ಘೋಷಿಸಿಲ್ಲ

ರಾಜಸ್ತಾನದ ಚುನಾವಣೆ ಮುಗಿದು ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೆ ಕೇಂದ್ರ ವೀಕ್ಷಕರನ್ನು ನೇಮಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜಸ್ಥಾನದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮುಂದಿನ ರಾಜಸ್ತಾನದ ಮುಖ್ಯಮಂತ್ರಿ ಯಾರು ಎಂಬ ಆಯ್ಕೆಯ ಕುರಿತು ಸಾಕಷ್ಟು ಚರ್ಚೆ ಜರುಗುತ್ತಿದೆ. ಇದರ ಬೆನ್ನಲ್ಲೇ,  ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಬಾಬಾ ಬಾಲಕ್ ನಾಥ್ ಅಧಿಕಾರ ವಹಿಸುವರೆಂದು ಆದಿತ್ಯನಾಥ್ ಘೋಷಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

Read More
ರಾಜಸ್ಥಾನ

ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ ಎಂಬುದು ಸುಳ್ಳು

ರಾಜಸ್ಥಾನದ ಚುನಾವಣೆ ಮುಗಿದು ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮುಖ್ಯಮಂತ್ರಿಯ ಆಯ್ಕೆಯ ಕುರಿತು, ಗೆಲುವಿನ ಕುರಿತು ಅನೇಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿವೆ. ಕಳೆದ ಕೆಲವು ದಿನಗಳಿಂದ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ. ಅದು ರಾಜಸ್ಥಾನದ 5 ವರ್ಷದ ಹೊಲಸು ಸ್ವಚ್ಛ ಮಾಡಲು ಜೆಸಿಬಿ ಉಡುಗೊರೆ ನೀಡಿದ್ದಾರೆ. ಎಂದು ಪ್ರತಿಪಾದಿಸಿ ಹಲವಾರು ಜನ ವಿಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಮೆಗ್ ಅಪ್ಡೆಟ್ಸ್‌ ಎಂಬ ಬಲಪಂಥೀಯ ಟಿಟ್ವರ್ ಖಾತೆಯಿಂದ…

Read More

Fact Check : ಕಾಂಗ್ರೆಸ್‌ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು

ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದಿಂದ ಪೊಲೀಸರಿಗೆ ರಕ್ಷಣೆಯೇ ಇಲ್ಲ ಎಂಬ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾರ ಗಜೇಂದ್ರ ಸಿಂಗ್‌ ಎಂಬಾತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ “ಇದು ರಾಜಸ್ಥಾನದ ಕೋಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಿಹಾದಿಗಳಿಂದ ನಡೆದ ಘಟನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನೋಡಿ ಪೊಲೀಸರೇ ಜಿಹಾದಿಗಳಿಂದ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಸಾಮಾನ್ಯ ಹಿಂದುಗಳ ಪರಿಸ್ಥಿತಿ ಏನಾಗಬಹುದು. ಈ ದೃಶ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂದರೆ ಆಶ್ಚರ್ಯವಿಲ್ಲ” ಎಂದು ಉಲ್ಲೇಖಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ….

Read More

ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕನ ವಿಡಿಯೋ ರಾಜಸ್ತಾನದ್ದು, ಕರ್ನಾಟಕದ್ದಲ್ಲ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ವ್ಯಾಪಕವಾಗಿ ಸುಳ್ಳು ಸುದ್ದಿಗಳನ್ನ ಹೆಚ್ಚು ಹೆಚ್ಚು ಹಬ್ಬಿಸಲಾಗುತ್ತಿದೆ.. ಇದೀಗ ಇಂತಹದ್ದೇ ಸುಳ್ಳು ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸದ್ದು ಮಾಡುತ್ತಿದೆ ಆ ಸುಳ್ಳು ಸುದ್ದಿಯಲ್ಲಿ “ಬಡ ರೈತನನ್ನು ಕಾಲಲ್ಲಿ ಒದ್ದ ಕಾಂಗ್ರೆಸ್‌ ಶಾಸಕ, ಕಾಂಗ್ರೆಸ್‌ಗೆ ಓಟು ಹಾಕಿ ಮೋಸ ಹೋದ ಜನ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೇ ರಾಜ್ಯಕ್ಕೆ ಅಪಾಯ” ಎಂಬ ರೀತಿಯ ಹಲವು ತಲೆ ಬರಹಗಳೊಂದಿಗೆ ಒಂದೇ ವಿಡಿಯೋವನ್ನ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ  ಇದು…

Read More

“ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮುಸ್ಲಿಮರ ಬಾಹುಳ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರೆ ಪೆಟ್ಟು ತಿಂದು ಸಾಯಬೇಕಾಗಬಹುದು. ಹೇಗಿದೆ ನಮ್ಮ ದುರಾವಸ್ಥೆ ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಈ ಮೊದಲು ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿತ್ತು, ಆದರೆ ಇದು 2019ರ ರಾಜಸ್ಥಾನದ ಭಿಲ್ವಾರದಲ್ಲಿ ನಡೆದ ಘಟನೆಯಾಗಿದ್ದು, ವೃದ್ಧನಿಗೆ ಹಣದ ವಿಚಾರದಲ್ಲಿ ಜನರನ್ನು ನಿಂದಿಸಿದ್ದಕ್ಕಾಗಿ ಥಳಿಸಲಾಗಿದೆಯೇ ಹೊರತು ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದ್ದಕ್ಕಾಗಿ ಅಲ್ಲ ಎಂದು ಭಿಲ್ವಾರದ…

Read More

ರಾಜಸ್ಥಾನ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಧರ್ಮದ ಆಧಾರದಲ್ಲಿ ತಾರತಮ್ಯವೆಸಗಿಲ್ಲ..!

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲ ದಿನಗಳು ಬಾಕಿ ಇವೆ. ಹೀಗಿರುವ ಅಲ್ಲಿನ ಆಡಳಿತ ಪಕ್ಷದ ವಿರುದ್ದ ಈಗ ಹಲವು ರೀತಿಯಾದ ಸುಳ್ಳು ಸುದ್ದಿಯನ್ನ ಹಬ್ಬಲು ಅಲ್ಲಿನ ಕೆಲ ಡಿಜಿಟಲ್‌ ಮಾಧ್ಯಮಗಳು ಪ್ರಾರಂಭ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಜಸ್ಥಾನ ಸರ್ಕಾರದ ವಿರುದ್ಧ ದಿನಕ್ಕೆ ಒಂದರಂತೆ, ಒಂದೊಂದೇ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿವೆ. ಇದರಿಂದ ಅಲ್ಲಿನ ಸರ್ಕಾರ ಇಕ್ಕಟ್ಟಿಗ ಸಿಲುಕಿಕೊಂಡಿದೆ. ಈಗ ಇಂತಹದ್ದೇ ಒಂದು ಸುಳ್ಳು ಸುದ್ದಿ ಅಲ್ಲಿನ ಸರ್ಕಾರವನ್ನ…

Read More

ಇದು ರಾಜಸ್ತಾನದ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡಿಸುತ್ತಿದೆ, ಅದೂ ಕೂಡ ಪೋಲೀಸರನ್ನು ನಿಯೋಜಿಸಿ, ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ, ಅದಕ್ಕಾಗಿಯೇ ಈ ವೀಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು ಎಂಬ ವೀಡಿಯೋ ಒಂದು ವೈರಲ್ ಆಗುತ್ತಿದೆ. ಸತ್ಯವೇನೆಂದರೆ ರಾಜಸ್ತಾನದ ಜೈಪುರದಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಸಮುಚ್ಚಾಯದಲ್ಲೇ ಸೈಯದ್ ಚಾಂಡಿ ವಾಲೆ ದೇಗುಲವಿದೆ ಇಲ್ಲಿ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವಿದೆ. ಇದನ್ನು 40–50…

Read More