Fact Check: 2011ರ ಜಾಹೀರಾತಿನ ಚಿತ್ರವನ್ನು ಕೇರಳದ ಕಾಲೇಜು ಭಾರತೀಯ ಸಂಸ್ಕೃತಿಯನ್ನು ಅಣಕಿಸುತ್ತಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ

ಕೇರಳದ ಕಾಲೇಜೊಂದರಲ್ಲಿ ಭಾರತೀಯ ಮತ್ತು ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಘಾಗ್ರಾ ಚೋಲಿ ಎಂಬುದು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಉದ್ದನೆಯ ಸ್ಕರ್ಟ್ ಮತ್ತು ರವಿಕೆಯಾಗಿದೆ. ಫೋಟೋವು ಘಾಗ್ರಾ ಚೋಲಿಯ ರಾಜಸ್ಥಾನಿ ಶೈಲಿಯನ್ನು ಚಿತ್ರಿಸುತ್ತದೆ ಆದರೆ ಅದನ್ನು ಕತ್ತರಿಸಿ ಮಿನಿ ಸ್ಕರ್ಟ್ ಆಗಿ ತಯಾರಿಸಲಾಗಿದೆ ಎಂದು ತೋರಿಸುತ್ತದೆ. ಕೇರಳದಲ್ಲಿ ನಡೆದ ಕಾಲೇಜು ಸ್ಪರ್ಧೆಯಲ್ಲಿ ಈ ತಂಡವು ಮೂರನೇ ಸ್ಥಾನವನ್ನು ಗೆದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಎಕ್ಸ್ ಮತ್ತು…

Read More

Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಸರಬರಾಜು ಆಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂದು ಆರೋಪಿಸಿ ವಿವಾದಿತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳು ಕೆಎಸ್‌ಆರ್‌(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉದ್ದನೆಯ ಬಾಲ ಇರುವ ಕುರಿ ಮಾಂಸ ಕಂಡು ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಇದರ ನಂತರ ಅಲ್ಲಿಗೆ ಆಗಮಿಸಿದ ಪೋಲಿಸರು ಮತ್ತು ಆಹಾರ…

Read More

Fact Check: ಯುವಕನನ್ನು ಸಾರ್ವಜನಿಕವಾಗಿ ನೇಣುಹಾಕಿರುವ ಕುರಿತು ಇತ್ತೀಚಿನ ಯಾವುದೇ ವರದಿಗಳಿಲ್ಲ

ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿ ಇದೆ ಎನ್ನುವಾಗ, ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನನ್ನು ನೇಣು ಹಾಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರು ತಮ್ಮ ಖಾತೆಯಲ್ಲಿ ಇದನ್ನು ಹಂಚಿಕೊಂಡು “ಕಲ್ಕತ್ತಾದಲ್ಲಿ, ತಾಲಿಬಾನಿ ಐಸಿಸ್ ಶೈಲಿಯಲ್ಲಿ ಬಹಿರಂಗವಾಗಿ ಹಿಂದೂ ಬಿಜೆಪಿ ಕಾರ್ಯಕರ್ತನನ್ನು ಗೊಂಡರು ನೇಣು ಹಾಕಿದ ಘಟನೆ ನಡೆದಿದೆ. ಮನೆಯಲ್ಲಿ ಕೂತಿರಿ, ಇಲ್ಲಿ ಸಹ ಅದೇ ಚಿತ್ರ ಪುನರಾವರ್ತನೆ ಆಗುತ್ತದೆ, ಜೂನ್ 4ರ ನಂತರ ನೋಡುತ್ತೀರಿ ಓಟಕ್ಕೆ ಮೈದಾನ ತಯಾರಾಗಿದ್ದನ್ನು, ಈಗಲಾದರೂ ಎಚ್ಚೆತ್ತು”…

Read More

Fact Check: ಮೋದಿಜಿ ರ್ಯಾಲಿಯಲ್ಲಿ ಜನಸ್ತೋಮ ಎಂದು 2019ರ ಕಾಂಗ್ರೆಸ್‌ ಸಮಾವೇಶದ ವಿಡಿಯೋ ಹಂಚಿಕೆ

ಲೋಕಸಭಾ ಚುನಾವಣೆಯ ಬಿಜೆಪಿಯ ರಾಜಕೀಯ ಪ್ರಚಾರದ ಭಾಗವಾಗಿ ಭಾನುವಾರ ರಾಜಸ್ಥಾನದ ಜಲೋರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ, ಅನೇಕ ಸಾಮಾಜಿಕ ಮಾಧ್ಯಮದ ಬಳಕೆದಾರರು ರಸ್ತೆಯೊಂದರಲ್ಲಿ ಭಾರಿ ಜನಸಮೂಹ ಸೇರಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದನ್ನು ಜಲೋರ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. “ಇದು ರಾಜಸ್ಥಾನದ ಜಲೋರ್‌ನಲ್ಲಿ ಮೋದಿಜಿ ರ್ಯಾಲಿಗೂ ಮುನ್ನ ದೃಶ್ಯವಾಗಿದೆ. ಅಶೋಕ್ ಗೆಹ್ಲೋಟ್ ಅವರ ಪುತ್ರ ಜಲೋರ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಬಿಜೆಪಿ 400 ದಾಟಲಿದೆ.”…

Read More
ಹಿಂದು

Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಜನರಲ್ಲಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಬಿತ್ತುವ ಸಲುವಾಗಿ ಅನೇಕ ಪ್ರಯತ್ನಗಳನ್ನು ನಮ್ಮ ದೇಶದಲ್ಲಿ ನಡೆಸಲಾಗುತ್ತಿದೆ. ಎಲ್ಲಿಯೇ ಜಗಳಗಳು, ಕೊಲೆ, ಹಲ್ಲೆಗಳು ನಡೆದರೂ ಅದಕ್ಕೆ ಧರ್ಮದ ಬಣ್ಣ ಹಚ್ಚುವುದು, ಆರೋಪಿ ಮುಸ್ಲಿಂ ಆಗಿದ್ದರೆ ಅದನ್ನು ದೊಡ್ಡ ಸಂಗತಿ ಮಾಡಿ ರಾಜಕೀಯವಾಗಿ ಬದಲಾಯಿಸಲು ಹುನ್ನಾರಗಳು ನಡೆಯುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಕುರಿತು ಇತರೆ ಜನರಲ್ಲಿ ಭಯ ಹುಟ್ಟಿಸಿ ನಾವು ನಿಮ್ಮ ರಕ್ಷಿಸುತ್ತೇವೆ ಎಂಬ ಸುಳ್ಳು ಭರವಸೆಗಳ ನೀಡಿ ಮತ ಪಡೆಯಲಷ್ಟೇ ಇಂತಹ ದ್ವೇಷದ ರಾಜಕಾರಣವನ್ನು ಹುಟ್ಟು…

Read More

Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ

ದೇಶದಲ್ಲಿ ಲೋಕಸಭಾ ಚುನಾವಣಾ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ನಡೆದಿದೆ. ಒಟ್ಟು ಏಳು ಹಂತದಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ನೆನ್ನೆಯಷ್ಟೇ ರಾಜಸ್ತಾನದ ಬನ್ಸವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಕೋಮುವಾದಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಭಾರತ ದೇಶದ ಪ್ರಧಾನ ಮಂತ್ರಿಗಳು ಧರ್ಮದ ಆಧಾರದ ಮೇಲೆ ಇಲ್ಲಿನ ಜನರನ್ನು ವಿಭಜಿಸಿ ಮಾತನಾಡುವುದು ಅಸಂವಿಧಾನಿಕ ನಡೆಯಾಗುತ್ತದೆ . ನಮ್ಮ ಸಂವಿಧಾನ ಭಾರತದ ಎಲ್ಲಾ ಧರ್ಮ, ಜಾತಿ, ಭಾಷಿಗರನ್ನು ಸಹ…

Read More
ರಾಜಸ್ಥಾನ

ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ

ಭಾರತ ಸರ್ಕಾರ ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ ವರ್ಷ ನರೇಂದ್ರ ಮೋದಿಯವರು ಉಚಿತ ಪಡಿತರ ಯೋಜನೆ 2028ರವರೆಗೆ ವಿಸ್ತರಣೆ ಮಾಡಲಾಗುವುದು ಎಂದಿದ್ದರು. ಆದರೆ ಈಗ ಈ ಯೋಜನೆಯ ಜಾಹಿರಾತಿಗೆ ಅತಿ…

Read More

ರಾಜಸ್ಥಾನದ ಆಳ್ವರ್ ನಲ್ಲಿ ಮುಸ್ಲೀಮರು ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಭಾರತದಲ್ಲಿ ಎಲ್ಲಿಯೇ ಜಗಳಗಳು, ಗುಂಪು ಸಂಘರ್ಷಗಳು ನಡೆದರೆ ಅವುಗಳಿಗೆ ಕೋಮುಬಣ್ಣವನ್ನು ನೀಡಲಾಗುತ್ತಿದೆ. ಹಿಂದು-ಮುಸ್ಲಿಂ ಕಲಹ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಮೂಲಕ ಹಿಂದು-ಮುಸ್ಲಿಂ ಸಾಮರಸ್ಯವನ್ನು ಕದಡುವ ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ, “ರಾಜಸ್ಥಾನದ ಆಳ್ವರ್ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕಾಗಿ ನಡೆದ ಜಗಳದಲ್ಲಿ ಮುಸ್ಲೀಮರು ಹಿಂದುಗಳ ಮನೆಗಳಿಗೆ ನುಗ್ಗಿ ಥಳಿಸಿದ್ದಾರೆ.” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಥಾನಾಗಾಜಿ ಪಟ್ಟಣದ ಬಳಿಯ ಖಕಾಸ್ಯ ಕಿ ಧಾನಿ ಗ್ರಾಮದಲ್ಲಿ ಈ…

Read More

Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಇದೇ ಜನವರಿ 22 ರಂದು ಜರುಗಲಿದ್ದು, ಇಡೀ ಭಾರತವೇ ರಾಮ ಮಂದಿರದ ಕುರಿತು, ರಾಮಾಯಣದ ಕುರಿತು ಮತ್ತೆ ಮತ್ತೆ ಚರ್ಚಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ “ಶ್ರೀರಾಮನ ವಂಶಜರು ಈಗಲೂ ಭಾರತದಲ್ಲಿದ್ದಾರೆ, ಕುಶನ 307 ನೆ ಸಂತತಿ ಇದು, ಸಾಕ್ಷಿ ಬಿಡುಗಡೆ ಮಾಡಿದ ಕುಟುಂಬ.” ಎಂಬ ಬಿಗ್‌ನ್ಯೂಸ್ 2023ರಲ್ಲಿ ಮಾಡಿರುವ ವರದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸುದ್ದಿಯಲ್ಲಿ ಮೊದಲಿಗೆ ರಾಜಸ್ಥಾನದ ಜೈಪುರ್‌ನಲ್ಲಿರುವ ರಾಜಮನೆತನದ ಆಗರ್ಭ ಶ್ರೀಮಂತ ಹಾಗೂ ಮಾಡೆಲ್ ಪದ್ಮನಾಭ್ ಸಿಂಗ್ ಎಂಬುವವರ ಬಗ್ಗೆ…

Read More

Fact Check | ಖಲಿಸ್ತಾನ ಪರ ಚಳುವಳಿಯನ್ನು ರಾಜಸ್ತಾನದ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಬೆಂಬಲಿಸಿಲ್ಲ

“ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿದ್ದರೆ ಮತ್ತು ಪ್ರತಿಭಟನೆಯೊಂದರಲ್ಲಿ ಮಾತನಾಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್‌ ಖಲಿಸ್ತಾನಿಗಳಿಗೆ ಬೆಂಬಲ ಕೊಡುತ್ತಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಮತ್ತೊಂದು ವಿಡಿಯೋ ಕೂಡ ವೈರಲ್‌ ಆಗಿದ್ದು ಅದರಲ್ಲಿ ರಾಜಸ್ತಾನದ ಮಾಜಿ  ಸಿಎಂ ಅಶೋಕ್‌ ಗೆಹ್ಲೋಟ್‌ ಅವರು, “ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದಾಗ, ನಾನು ಖಲಿಸ್ತಾನ್ ಬಗ್ಗೆ ಏಕೆ ಮಾತನಾಡಬಾರದು..” ಎಂದು…

Read More