Fact Check | ಪಾಕಿಸ್ತಾನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳು

ಪಾಕಿಸ್ತಾನದ ಸೈನಿಕರು ಹಿಂದೂ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಈ ವಿಡಿಯೋದ ಜೊತೆಗೆ “ಇಸ್ಲಾಂ ಎಂದರೆ ಹೀಗೆನೇ. ಇದನ್ನೆ ಕಾಂಗ್ರೆಸ್ ಜಾತ್ಯಾತೀತತೆ ಎಂದು ಹೇಳುತ್ತದೆ. ಇಸ್ಲಾಮಿಕ್ ಮದರಸಾ ಜಿಹಾದ್ ಭಯೋತ್ಪಾದನೆಯು ಬಲೂಚ್ ಹಿಂದೂ ಮಗುವನ್ನು ಸರಪಳಿಯಲ್ಲಿ ಕಟ್ಟಿ ಹೇಗೆ ಚಿತ್ರಹಿಂಸೆ ನೀಡುತ್ತಿದೆ ನೋಡಿ. ಅಂತಹ ಭಾರತವನ್ನು ನಿರ್ಮಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಮೈತ್ರಿಯು ಹವಣಿಸುತ್ತಿದೆ. ಯಾರೂ ಮೋಸ ಹೋಗಬೇಡಿ” ಎಂಬ ಬರಹದೊಂದಿಗೆ ಮಗುವಿನ ಕುತ್ತಿಗೆಗೆ ಸರಪಳಿ ಸುತ್ತಿ ನೇತುಹಾಕಿ…

Read More

Fact Check | ಶ್ರೀನಗರದಲ್ಲಿ ಉಗ್ರಗಾಮಿ ಬಂಧನ ಎಂದು ಬ್ರೆಜಿಲ್ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಭಾರತೀಯ ಸೇನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನೊಬ್ಬನನ್ನು ಸೆರೆಹಿಡಿದ ಪರಿ. ಈ ಉಗ್ರ ಸೈನಿಕರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ದೇಶದ ಸೈನಿಕರು ಇವನನ್ನು ಬೆಂಬಿಡದೆ ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಆ ಮೂಲಕ ದೇಶದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ ಇನ್ನೂ ಕೆಲವರು ಈ ವಿಡಿಯೋದಲ್ಲಿ “ಮೋದಿ ಸರ್ಕಾರದಿಂದಲೇ ಈ ಉಗ್ರನನ್ನ ಬಂಧಿಸಲಾಗಿದೆ ಇದರ ಸಂಪೂರ್ಣ ಶ್ರೇಯ ಮೋದಿಯವರಿಗೆ ಸಲ್ಲಬೇಕು” ಎಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ…

Read More

Fact Check | ಬೌದ್ಧ ಸನ್ಯಾಸಿ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬೌದ್ಧ ಸನ್ಯಾಸಿಯೊಬ್ಬ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಯಿಂದ ಹಣವನ್ನು ಕದಿಯುತ್ತಿದ್ದಾನೆ. ಕಾಣಿಕೆ ಡಬ್ಬಿಯಿಂದ ಹಣವನ್ನು ತೆಗೆದು ಎಣಿಸಿದ ಬಳಿಕ, ಗೌತಮ ಬುದ್ಧನ ಪ್ರತಿಮೆಯ ಕಾಲಿಗೆ ನಮಸ್ಕರಿಸುತ್ತಾನೆ. ಇಂತಹ ನಾಚಿಗೆಗೇಡಿನ ಸಂಗತಿಯ ಬಗ್ಗೆ ಯಾಕೆ ಕ್ರಮ ಆಗಿಲ್ಲ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡು ತಮ್ಮ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಇಲ್ಲಿ ದುರಂತವೆಂದರೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೂಡ ಈ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ…

Read More

Fact Check | ಬಿಜೆಪಿ ನಾಯಕನ ಮೇಲೆ ಡಿಎಂಕೆ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬಿಜೆಪಿ ಮುಖಂಡ ರಾಜೇಶ್ ಬಿಜು ಅವರನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ. ಇದು ತಮಿಳುನಾಡು ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕೆಲವು ಮಂದಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೇ ವೇಳೆಯಲ್ಲಿ ಈ ವಿಡಿಯೋ ಕೇವಲ…

Read More

Fact Check | ದೆಹಲಿಯ ರೈತರ ಪ್ರತಿಭಟನೆಯಲ್ಲಿ ಗ್ಲಾಸ್‌ನಿಂದ ಆವೃತವಾದ ಟ್ರ್ಯಾಕ್ಟರ್‌ಗಳನ್ನು ರೈತರು ಬಳಸಿಲ್ಲ..!

“13 ಫೆಬ್ರವರಿ 2024 ರಂದು ದೆಹಲಿಯಲ್ಲಿ ನಡೆದ ‘ದೆಹಲಿ ಚಲೋ’ ರೈತರ ಪ್ರತಿಭಟನಾ ರ್ಯಾಲಿಯಲ್ಲಿ ಪೊಲೀಸರನ್ನು ಎದುರಿಸಲು ರೈತರು ಗ್ಲಾಸ್‌ನಿಂದ ಆವೃತವಾದ ಮತ್ತು ಪೊಲೀಸರೇ ನಿರ್ಮಿಸಿದ ತಡೆಗೋಡೆಗಳನ್ನು ಒಡೆಯಲು ಸಮರ್ಥವಾದ ಟ್ರ್ಯಾಕ್ಟರ್‌ಗಳನ್ನು ತರುತ್ತಿದ್ದಾರೆ.” ಎಂಬ ಸುದ್ದಿಯೊಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. Modified tractors to lead farmers' protest march, intelligence agencies alert police not sure if true all farmers to be taken into custody and u/s…

Read More

ಅಪರಿಚಿತರು ಏಡ್ಸ್ ಇಂಜೆಕ್ಷನ್ ಚುಚ್ಚುತ್ತಾರೆ ಎಂಬ ಗದಗ ಪೊಲೀಸ್ ಹೆಸರಿನ ಪೋಸ್ಟರ್ ನಕಲಿ

ಗದಗ ಜಿಲ್ಲಾ ಪೊಲೀಸ್ ಪ್ರಕಟಣೆಯ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ. ‘ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್‌, ವಿಟಮಿನ್‌ ಇಂಜೆಕ್ಷನ್‌ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್‌ ಮಾಡಿಸಿಕೊಳ್ಳದಿರಿ. ಜಿಹಾದಿ, ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್‌ ಇಂಜೆಕ್ಷನ್‌ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‌ಗಳಿಗೆ ಕಳಿಸಿ, ಅಮಾಯಕರ ಪ್ರಾಣ ಉಳಿಸಿ’. ಇಂತಿ ನಿಮ್ಮ ಸೋಮೇಶ್ ಗೆಜ್ಜೆ.(SI) ಜಿಲ್ಲಾ ಪೊಲೀಸ್…

Read More