ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ಹೆಸರಿನಲ್ಲಿ ಓಟು ಕೇಳಿ ಎಂದು ಹೇಳಿಲ್ಲ

ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ತ್ರೀವ್ರವಾದ ಸಂಚಲನ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳ ನಡುವೆ ಕೆಲವು ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರು ತಮ್ಮ ಪಕ್ಷದ ಆಂತರಿಕ ಸಭೆಯಲ್ಲಿ “ಬೆಲೆ ಏರಿಕೆಯಿಂದ, ನಿರುದ್ಯೋಗದಿಂದ ಮಧ್ಯಪ್ರದೇಶದ ಜನ ಬಿಜೆಪಿಯ ಕುರಿತು ಬೇಜಾರಾಗಿದ್ದಾರೆ. ಸರ್ವೆಗಳು ಸಹ ನಮ್ಮ ಪಾರ್ಟಿಯ ಸ್ಥಿತಿ ಚಿಂತಾಜನಕವಾಗಿವೆ ಎಂದು ಹೇಳುತ್ತಿವೆ. ಹಾಗಾಗಿ ನಾನು ಎಲ್ಲರಿಗೂ…

Read More

ವಿದೇಶ ಪ್ರಯಾಣಕ್ಕೆ ಮೋದಿಗಿಂತಲೂ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂಬುದು ಸುಳ್ಳು

ವಿದೇಶ ಪ್ರಯಾಣಕ್ಕೆ ಹಾಲಿ ಪ್ರಧಾನಿ ಮೋದಿಗಿಂತಲೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂದು ವಿವಾದಾತ್ಮಕ ಬಲಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಷಣವೊಂದರಲ್ಲಿ ಹೇಳಿದ್ದಾರೆ. ಆ ವಿಡಿಯೋವನ್ನು ಇತಿಹಾಸ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಭಾಷಣದಲ್ಲಿ More Foreign Trips Than Manmohan Singh Yet Lesser Bill For PM Modi ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದಾರೆ….

Read More

ಪ್ರಧಾನಿ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ವದೋದರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಜ್‌ತಕ್‌ ವರದಿಯ ಕೆಲವು ಸ್ಕ್ರೀನ್‌ಶಾಟ್‌ಗಳು ಟ್ಟಿಟರ್(‍X)ನಲ್ಲಿ ಹರಿದಾಡುತ್ತಿವೆ. ಕೆಲವರು “ಭಕ್ತರೆ, ಇದು ಕಾಂಗ್ರೆಸ್ಸಿನ ಶಕ್ತಿ, ನೀವು ಜಶೋದಾಬೆನ್‌ರವರನ್ನು  ಬೈಕಾಟ್ ಮಾಡಲು ಸಾಧ್ಯವೇ, ಧೈರ್ಯವಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ(ಹಿಂದಿಯಲ್ಲಿ ಮೂಲ ಪಠ್ಯ: अन्धभको देखो ये होती है , कांग्रेस की शक्ति, क्या जशोदाबेन को बायकॉर्ट करोगे…

Read More

ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಸಾವಿರ ಸಾಲ ಕೊಡುತ್ತಾರೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಹಳಷ್ಟು ಜನಪ್ರಿಯವಾಗಿದ್ದು, ಈ ಯೋಜನೆಯ ಲಾಭವನ್ನು ಇಂದಿಗೂ ಹಲವರು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿನೇ ಒಂದಲ್ಲ ಒಂದು ಕಾರಣದಿಂದ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸುದ್ದಿಯಲ್ಲಿದೆ. ಆದರೆ ಈಗ ಇದೇ ಪಿಎಂ ಮುದ್ರಾ ಯೋಜನೆ ಸುಳ್ಳು ಸುದ್ದಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಕುರಿತು ಕೇವಲ ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಈ ವಿಚಾರದ ಕುರಿತು ನೀವು ಎಚ್ಚರಿಕೆಯನ್ನು ತೆಗೆದುಕೊಳ್ಳದೇ ಹೋದರೆ ನೀವು ಸೈಬರ್‌ ವಂಚನೆಗೆ ಒಳಗಾಗುವ…

Read More

ಜಸ್ಟೀಸ್ ದಲ್ವೀರ್ ಭಂಡಾರಿಯವರು ಅಂತರಾಷ್ಟ್ರೀಯ ನ್ಯಾಯಾಲಯದ(ICJ) ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ.

ಭಾರತದ ದೊಡ್ಡ ಗೆಲುವು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಾಣಕ್ಯ ನೀತಿಯಿಂದ ಜಗತ್ತಿನ ಮುಂದೆ ಮಣಿದ ಬ್ರಿಟನ್; ಜಸ್ಟೀಸ್ ದಲ್ವೀರ್ ಭಂಡಾರಿಯವರು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್(ICJ)ನ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ದಲ್ವೀರ್ ಭಂಡಾರಿಯವರು ಎಲ್ಲಾ ದೇಶಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಿಂದ ಒಟ್ಟು 193 ಮತಗಳಲ್ಲಿ 183 ಮತಗಳನ್ನು ಪಡೆದು ಬ್ರಿಟನ್ನಿನ ಜಸ್ಟೀಸ್ ಕ್ರಿಸ್ಟೋಫರ್ ಗ್ರೀನ್‌ಹುಡ್‌ರನ್ನು ಸೋಲಿಸಿದ್ದಾರೆ. ಈ ಮೂಲಕ ಬ್ರಿಟನ್‌ನ 71 ವರ್ಷಗಳ ಅಧಿಪತ್ಯವನ್ನು ಮುರಿದ್ದಾರೆ.   ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ…

Read More