ಇಸ್ರೇಲ್ ಅಧಿಕೃತ ಟ್ವಿಟರ್ ಖಾತೆಗಳಿಂದ ಫೆಲೆಸ್ತೀನಿಯರು ಸಾವುಗಳೆಂದು ನಟಿಸುತ್ತಿದ್ದಾರೆ ಎಂಬ ಸುಳ್ಳು ಹಂಚಿಕೆ

ಹಮಾಸ್‌ನವರಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಅಶ್ರು ದಾಳಿ ನಡೆಸಿದೆ.  ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ, ಗಾಯಗೊಂಡ ಪ್ಯಾಲಸ್ಟೈನಿಗರ ಅನೇಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಆದರೆ ಇವುಗಳನ್ನು ಅಲ್ಲಗೆಳೆದಿರುವ ಇಸ್ರೇಲ್ ಸತ್ತ ಮಗು ಎಂದು ತೋರಿಸುತ್ತಿರುವುದು ಬೊಂಬೆ, ಯುದ್ದದ ಗಾಯಾಳುಗಳು ಎಂದು ಮೇಕಪ್ ಮಾಡಿಕೊಂಡು ನಾಟಕವಾಡುತ್ತಿದ್ದಾರೆ, ಮೃತದೇಹ ಎಂದು ಮಲಗಿಸಿರುವ ಹೆಣಗಳು ಚಲಿಸುತ್ತಿವೆ ಹೀಗೆ ವಾಸ್ತವವನ್ನು ತಿರುಚಲು ನಾನಾ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ.  ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಇಂತಹ ಅನೇಕ ಸುಳ್ಳುಗಳು…

Read More

ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್‌ ಬೆಂಬಲದೊಂದಿಗೆ ಭಯೋತ್ಪಾದಕರಾದ ಹಮಾಸರನ್ನು ಬೆಂಬಲಿಸಿ ಕೇರಳದಲ್ಲಿ ಬೃಹತ್ ರ್ಯಾಲಿಯೊಂದು ನಡೆದಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲೋ, ಪ್ಯಾಲೆಸ್ಟೈನ್‌ನಲ್ಲೋ ಅಲ್ಲ ದೇವರ ನಾಡು ಕೇರಳದಲ್ಲಿ.  ಎಂಬ ತಲೆಬರಹದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಕ್ಟೋಬರ್ 26ರಂದು ಕೇರಳದ ಕೋಜಿಕೊಡೆ ತೀರದಲ್ಲಿ ನಡೆದ ಪ್ಯಾಲಸ್ಟೈನ್ ಪರವಾಗಿ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಶಶಿ ತರೂರ್ ಹಮಾಸ್‌ ಮತ್ತು ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದ್ದಾರೆ. ಇಬ್ಬರ ನಡೆಗಳು ಕೂಡ ನೂರಾರು ನಾಗರೀಕರನ್ನು ಬಲಿ ತೆಗೆದುಕೊಳ್ಳುತ್ತದೆ…

Read More

Fact Check : ಇಸ್ರೇಲಿ ಕಂಪನಿ ಪೆಪ್ಸಿ ಹಮಾಸ್‌ಗೆ ಬೆಂಬಲ ನೀಡಲು ತನ್ನ ಡಿಸೈನ್‌ ಬದಲಿಸಿಕೊಂಡಿದೆ ಎಂಬುದು ಸುಳ್ಳು

ಹಮಾಸ್‌ ಇಸ್ರೇಲ್‌ ನಡುವಿನ ಯುದ್ದ ಹಲವು ಸುಳ್ಳು ಸುದ್ದಿಗೆ ಸಾಕ್ಷಿಯಾಗಿದೆ. ಈ ಯುದ್ಧದಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆಯೂ ಕೂಡ ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿದೆ. ಆ ಸುಳ್ಳು ಸುದ್ದಿಗಳಿಂದಾಗಿ ಹಲವು ಬಹು ರಾಷ್ಟ್ರೀಯ ಕಂಪನಿಗಳು ಕೂಡ ಈಗ ಹೊಸ ಹೊಸ ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿವೆ. ಈಗ ಹೀಗೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸರಣಿ ಜಾಗತಿಕ ಮನ್ನಣೆ ಗಳಿಸಿರುವ ಹಾಗೂ ತನ್ನ ತಂಪು ಪಾನಿಯ ಉತ್ಪನ್ನಗಳ ಮೂಲಕ ಹೆಸರುವಾಸಿಯಾಗಿರುವ ಪೆಪ್ಸಿಕೊ ಕಂಪನಿಯದ್ದು. ಕಳೆದ ಎರಡು ಮೂರು ದಿನಗಳಿಂದ ಪೆಪ್ಸಿ…

Read More

Fact Check : ಹಮಾಸ್‌ನಲ್ಲಿನ ಮೃತದೇಹಗಳು ಅಲುಗಾಡುತ್ತಿವೆ ಎನ್ನಲಾಗುತ್ತಿರುವ ವಿಡಿಯೋ ಈಜಿಪ್ಟ್‌ನದ್ದು

ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಆರಂಭವಾದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಇತ್ತೀಚೆಗೆ ಹಮಾಸ್‌ ವಿಶ್ವದ ಬೆಂಬಲವನ್ನು ಗಳಿಸಲು ಜಗತ್ತಿನ ಮುಂದೆ ಸಂತ್ರಸ್ತ ರಾಷ್ಟ್ರದಂತೆ ನಾಟಕವಾಡುತ್ತಿದೆ ಎಂದು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್ ದಾಳಿಯ ನಂತರ ಪ್ಯಾಲೆಸ್ತೀನಿಯರು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ನಕಲಿ ಹೆಣಗಳನ್ನ ಪ್ರದರ್ಶಿಸಿದ್ದಾರೆ. ಆ ಮೂಲಕ ವಿಶ್ವದ ಮುಂದೆ ಸಿಂಪಥಿ ಗಿಟ್ಟಿಸಿಕೊಂಡು ತಾವೇ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಯನ್ನು…

Read More

ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು

“ದಕ್ಷಿಣ ಇಸ್ರೇಲ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳ ಪತ್ತೆ ಮಾಡಿದ ಹಮಾಸ್ ಭಯೋತ್ಪಾದಕರು  ಆಕೆಯ ದೇಹವನ್ನು ಸೀಳಿ ಅವರ ಹೊಕ್ಕುಳ ಬಳ್ಳಿಯಿಂದ ಭ್ರೂಣವನ್ನು ಹೊರತೆಗೆದು, ಹುಟ್ಟಲಿರುವ ಮಗು ತನ್ನ ತಾಯಿಯ ಗರ್ಭದಿಂದ ನಿಧಾನವಾಗಿ ಸಾಯುವಂತೆ ಮಾಡಿದ್ದಾರೆ. ಅಮಾನವೀಯ ಅನಾಗರಿಕರಾದ ಹಮಾಸ್ ಜನರಿಗೆ ಮಾಡುತ್ತಿರುವುದು ಇದನ್ನೇ” ಎಂದು ಆದಿತ್ಯ ರಾಜ್ ಕೌಲ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ಸುದ್ದಿಯನ್ನು ಹಲವರು ಹಂಚಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: 10 ಆಕ್ಟೋಬರ್ 2023ರಂದು 9ಟಿವಿ ನೆಟ್ವರ್ಕ್‌ನ ಸುದ್ದಿ…

Read More

Fact Check : ಹಮಾಸ್‌ ಶಾಲಾ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುತ್ತಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಶಾಲಾ-ವಯಸ್ಸಿನ ಮಕ್ಕಳಿಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವ್ಯಾಯಾಮಗಳಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.. ಆದರೆ ಈ ವಿಡಿಯೋ ಸತ್ಯಾಸತ್ಯತೆಯನ್ನು ಪರಶೀಲಿಸಿದಾಗ ಸಿಕ್ಕ ಉತ್ತರವೇ ಬೇರೆಯದ್ದಾಗಿತ್ತು. ಕಳೆದ ಒಂದು ಎರಡು ವಾರಗಳಿಂದ “ಹಮಾಸ್‌ ಬಂಡುಕೋರಾರು ಇಸ್ರೇಲ್‌ ವಿರುದ್ಧ ಹೋರಾಟವನ್ನು ಮುಂದುವರೆಸಲು ಶಾಲಾ ಮಕ್ಕಳಿಗೆ ಸೈನಿಕ ತರಬೇತಿಯನ್ನು ನೀಡುತ್ತಿದೆ. ಯುದ್ಧದಲ್ಲಿ ಹೋರಾಡಲು ಮಕ್ಕಳನ್ನ ಮುಂದಕ್ಕೆ ಬಿಟ್ಟು ಹಮಾಸ್‌ ಬಂಡುಕೋರರು ತಪ್ಪಿಸಿಕೊಳ್ಳಲು ರಣತಂತ್ರವನ್ನು ಹೂಡುತ್ತಿದ್ದಾರೆ…

Read More

Fact Check :ಈ ಫೋಟೋ ಇಸ್ರೇಲ್‌ನ ಸೇನೆಗೆ ಸಂಬಂಧಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಆರಂಭವಾಗುತ್ತಿದ್ದಂತೆ ಈ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಕೆಲವೊಂದು ಸುದ್ದಿಗಳಿಗೆ ಹಳೆಯ ಫೋಟೋಗಳನ್ನು ಬಳಸಿಕೊಂಡು ಅದು ಇತ್ತೀಚಿನ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಫೋಟೋವಾಗಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಯೋಧೆಯೊಬ್ಬಳು ಸೈನಿಕರ ರೀತಿ ಬಟ್ಟೆ ಧರಿಸಿ ಒಂದು ಕೈಯಲ್ಲಿ ಗನ್‌ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿರುವ ಫೋಟೋ ಸಾಮಾಜಿಕ…

Read More
ಗಾಜಾ

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು. 33 ಸೆಕೆಂಡುಗಳ ಈ ವಿಡಿಯೋದಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಏಸು ಶಿಲುಬೆಯನ್ನು ನೆಲದ ಮೇಲೆ ಎಸೆದು ನಂತರ ಅದನ್ನು ನಾಶಪಡಿಸುವುದನ್ನು ತೋರಿಸಲಾಗಿದೆ. ಬಂದೂಕುಧಾರಿಗಳು ಇತರ ಕ್ರಿಶ್ಚಿಯನ್ ಪ್ರತಿಮೆಗಳನ್ನು ನಾಶಪಡಿಸುವುದನ್ನು ಸಹ ಕ್ಲಿಪ್ ನಲ್ಲಿ ನೋಡಬಹುದಾಗಿದೆ.  ಅಮಿತಾಭ್ ಚೌಧರಿ (@MithilaWaala) ಮತ್ತು ಅನಿಲ್ ಕೌಹ್ಲಿ ಎಂಬುವವರು ಈ ವಿಡಿಯೋವನ್ನು  ತಮ್ಮ ಎಕ್ಸ್(X) ಖಾತೆಯಲ್ಲಿ ” ಗಾಜಾ ನಗರದ ಬ್ಯಾಪ್ಟಿಸ್ಟ್ ಚರ್ಚ್ ಅನ್ನು…

Read More

Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ

ಹಮಾಸ್ ನವರು ಇಸ್ರೇಲ್ ದಾಳಿಯಿಂದ ಸತ್ತ ಪ್ಯಾಲೆಸ್ಟೈನ್ ಮಗು ಎಂದು ಹರಿಬಿಟ್ಟ ವಿಡಿಯೋದಲ್ಲಿರುವುದು ಬೊಂಬೆ. ಮಗುವಿನ ಗೊಂಬೆ! ನಿಜವಾದ ಮಗುವಿನ ಮೃತದೇಹವಲ್ಲ ಎಂದು ಪ್ರತಿಪಾದಿಸಿ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್‌: ಅಕ್ಟೋಬರ್ 12, 2023ರಂದು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆರನೇ ದಿನ, ಇಸ್ರೇಲ್ ಗಾಜಾ ನಗರದ ಮೇಲೆ ವೈಮಾನಿಕ ದಾಳಿಯನ್ನು(ಏರ್ ಸ್ರೈಕ್) ನಡೆಸಿತು. ಇದೇ ಸಂದರ್ಭದಲ್ಲಿ ಬಲಿಯಾದ ಸಂತ್ರಸ್ತರ ಅಂತ್ಯಕ್ರಿಯೆಯ ಸಮಯದಲ್ಲಿ…

Read More

Fact Check: ನಾನು ಪ್ಯಾಲೆಸ್ಟೈನ್‌ ಬೆಂಬಲಿಸುತ್ತೇನೆ ಎಂದು ನಟ ಅಕ್ಷಯ್‌ ಕುಮಾರ್‌ ಹೇಳಿಲ್ಲ..!

ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಯುದ್ಧ ಆರಂಭವಾದಗಿನಿಂದ ಹಲವು ಗಣ್ಯರ ಹೆಸರಿನಲ್ಲಿ ವಿವಿಧ ರೀತಿಯಾದ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭವಾಗಿದೆ, ಇದೀಗ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ ಕುಮಾರ್‌ ಅವರು ಕೂಡ ಪ್ಯಾಲೆಸ್ಟೈನ್‌ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಪೋಸ್ಟ್‌ ಒಂದು ವೈರಲ್‌ ಆಗಿದೆ. ಆ ವೈರಲ್‌ ಪೋಸ್ಟ್‌ನಲ್ಲಿ “ಪ್ಯಾಲೆಸ್ಟೈನ್‌ ದೇಶವನ್ನು ಬೆಂಬಲಿಸಿದ್ದಕ್ಕಾಗಿ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ವಿಡಿಯೋವೊಂದರಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಾನು ಪ್ಯಾಲೆಸ್ಟೈನ್‌ ಅನ್ನು ಪ್ರೀತಿಸುತ್ತೇನೆ,…

Read More