Fact Check | ಪಾಕಿಸ್ತಾನದಲ್ಲಿನ ಪ್ರವಾಹದ ವಿಡಿಯೋವನ್ನು ಆಂಧ್ರಪ್ರದೇಶದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಆಂಧ್ರಪ್ರದೇಶದಲ್ಲಿನ ವಿಜಯವಾಡದ ಪರಿಸ್ಥಿತಿ. ಅಲ್ಲಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು ಪರದಾಡುವಂತಾಗಿದೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರವಾಹ ಪೀಡಿತ ನೀರು ತುಂಬಿದ ಸ್ಥಳದಲ್ಲಿಯೇ ಜನರು ನಡೆದುಕೊಂಡು ಹೋಗುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಜನರು ನೀರಿನ ಮಧ್ಯೆ ಇರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಹಂಚಿಕೊಂಡು, ಆಂಧ್ರಪ್ರದೇಶದಲ್ಲಿ ಭೀಕರವಾದ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ….

Read More

Fact Check| ರೈಲ್ವೆ ಹಳಿಗಳಲ್ಲಿ ಮುಸ್ಲಿಮ್ ಹುಡುಗರು ಕಳ್ಳತನ ಮಾಡುತ್ತಿದ್ದಾರೆ ಎಂದು ಸುರೇಶ್ ಚವ್ಹಾಂಕೆ ಹಂಚಿಕೊಂಡ ವಿಡಿಯೋ ಪಾಕಿಸ್ತಾನದ್ದು!

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಸದಾ ದ್ವೇಷ ಹರಡಲು ಯತ್ನಿಸುವ ಸುದರ್ಶನ್ ಟಿವಿ ಸಂಸ್ಥಾಪಕ ಸುರೇಶ್ ಚವ್ಹಾಂಕೆ ಮತ್ತೊಮ್ಮೆ ಅಂತಹುದ್ದೇ ವಿಡಿಯೋವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಮತ್ತೊಮ್ಮೆ ಪಾಠ ಹೇಳಿಸಿಕೊಂಡಿದ್ದಾರೆ. ಚಿಕ್ಕ ಹುಡುಗರು ರೈಲು ಹಳಿಯನ್ನು ಧ್ವಂಸಗೊಳಿಸುವ/ ಕಳ್ಳತನ ಮಾಡಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಚವ್ಹಾಂಕೆ, “ಈ ವಯಸ್ಸಿನಲ್ಲಿ ಇವರು ರೈಲ್ವೆ ಹಳಿಗಳನ್ನು ಅಗೆಯುತ್ತಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಇವರು ಏನು ಮಾಡಬಹುದೆಂದು ಯೋಚಿಸಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು…

Read More
ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More

Fact Check | ಇದು ಐಸಿಸ್‌ ಉಗ್ರರ ಅಟ್ಟಹಾಸವೇ ಹೊರತು ಅತ್ಯಾಚಾರಿಗಳನ್ನು ಹತ್ಯೆ ಮಾಡುವ ವಿಡಿಯೋ ಅಲ್ಲ

” 7 ಪಾಕಿಸ್ತಾನಿಗಳು  ಸೌದಿ ಅರೇಬಿಯಾದಲ್ಲಿ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾರೆ. ಮರುದಿನ ಅವರನ್ನು ಹಿಡಿಯಲಾಯಿತು ಮತ್ತು ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಶಿಕ್ಷೆಯ ವೀಡಿಯೋ ತೆಗೆದು ಇತರರಿಗೆ ಜಾಗೃತಿ ಮೂಡಿಸಲು ಪ್ರಸಾರ ಮಾಡಲಾಗಿತ್ತು. ಇದು ನ್ಯಾಯ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ರೀತಿಯಾದ ಶಿಕ್ಷೆಗಳು ಭಾರತದಲ್ಲಿ ಕೂಡ ಜಾರಿಯಾಗಬೇಕು ಎಂದು ಕೂಡ ಆಗ್ರಹಿಸುತ್ತಿದ್ದಾರೆ. *सऊदी अरब में सात पाकिस्तानी ने एक 16 वर्षीय लड़की…

Read More
ಪಾಕಿಸ್ತಾನ

Fact Check: ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರು ಗಜ್ವಾ-ಎ-ಹಿಂದ್ ಎಂಬ ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವುದು ನಿಜ

ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರು ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಅನೇಕರು ಹಂಚಿಕೊಂಡು ಪಾಕಿಸ್ತಾನ ನಮ್ಮ ದೇಶದ ಮೇಲೆ ಯುದ್ದ ಮಾಡಲು ನಿರ್ಧರಿಸಿದೆ ಹಾಗೂ ಇದಕ್ಕೆ ಹಿಂದುಗಳು ಮತ್ತು ಭಾರತ ತಯಾರಾಗಿದೆಯೇ ಎಂದು ಕೇಳಿದ್ದಾರೆ ಎನ್ನಲಾಗುತ್ತಿದೆ. ವೈರಲ್ ಪೋಸ್ಟ್‌ಗಳನ್ನು “ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರ ಪ್ರಚೋದನಕಾರಿ ಹೇಳಿಕೆ. ‘ಗಜ್ವಾ-ಎ-ಹಿಂದ್‌ನ ಭೀಕರ ಯುದ್ಧವು ಹಲವು ವರ್ಷಗಳವರೆಗೆ ಮುಂದುವರಿಯಲಿದೆ!’ ಈ ಯುದ್ದಕ್ಕೆ ಹಿಂದೂಗಳು ಮತ್ತು…

Read More

Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ನಿಮಗೆ ಸಾಮಾನ್ಯ ವಿಡಿಯೋದಂತೆ ಭಾಸವಾಗಬಹುದು. ಇಲ್ಲಿ ಕಾಲುಗಳಿಲ್ಲದ ಯುವಕನೊಬ್ಬ ಮಹಿಳೆಯೊಂದಿಗೆ ಡಾನ್ಸ್ ಮಾಡುತ್ತಿದ್ದಾನೆ ಎಂಬುದು ನಿಮಗೆ ಮೊದಲಿಗೆ ಕಾಣಿಸುತ್ತದೆ. ಆದರೆ ಹೀಗೆ ಕಾಲುಗಳಿಲ್ಲದೆ ನೃತ್ಯ ಮಾಡುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಇವರು ದೇಶಕ್ಕಾಗಿ ಅದರಲ್ಲೂ ಪ್ರಮುಖವಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ಮೇಜರ್ ವಿಕ್ರಂ. ಇವರು ತಮ್ಮ ಪತ್ನಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇವರ ಮಡದಿಗೊಂದು ಬಿಗ್ ಸೆಲ್ಯೂಟ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. They are…

Read More

Fact Check | ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಅತ್ಯಾಚಾರ ಎಂದು ಮತ್ತೊಂದು ಪ್ರಕರಣದ‌ ಫೋಟೋ ಹಂಚಿಕೆ

“ಈ ಬೆಲ್ಜಿಯಂ ಮಹಿಳೆ ಪಾಕಿಸ್ತಾನಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಪಾಕಿಸ್ತಾನಿ ಮುಸ್ಲಿಮರು ಅವರನ್ನು ಅಪಹರಿಸಿ 5 ದಿನಗಳ ಕಾಲ ಅತ್ಯಾಚಾರ ಮಾಡಿ, ನಂತರ ಅವರ ಕೈಗಳನ್ನು ಕಟ್ಟಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಓಡಿಹೋದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ದೇಶವನ್ನು ಲೆಕ್ಕಿಸದೆ, ರಾಕ್ಷಸರು ಒಂದೇ ಆಲೋಚನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರೆಲ್ಲರೂ ಒಂದೇ ಸಿದ್ಧಾಂತವನ್ನು ನಂಬುತ್ತಾರೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನೋಡಿದ ಹಲವರು ಇದು ನಿಜವಾದ ಘಟನೆ ಎಂದು…

Read More
ಜಮ್ಮು ಮತ್ತು ಕಾಶ್ಮೀರ

Fact Check: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನದ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಹಾರಿಸಿದ್ದಾರೆ ಎಂದು ಹಳೆಯ ಪೋಟೋ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವ್ಯಕ್ತಿಯೊಬ್ಬ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋವೊಂದು ಹರಿದಾಡುತ್ತಿದೆ. ಇದನ್ನು ಅನೇಕರು “ಬ್ರೇಕಿಂಗ್:” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮತ್ತು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ನೀವು ಇಲ್ಲಿ ವೀಕ್ಷಿಸಬಹುದು. ಈ ಚಿತ್ರವನ್ನು ಎಕ್ಸ್ ಮತ್ತು ಫೇಸ್ ಬುಕ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಪೋಸ್ಟ್ ಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಫ್ಯಾಕ್ಟ್‌ ಚೆಕ್: ಈ ಚಿತ್ರವನ್ನು ಜೂನ್ 2019 ರ  ಹಳೆಯ…

Read More

Fact Check: ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂಬಂಧವಿಲ್ಲದ ಮಹಿಳೆಯ ಪೋಟೋ ವೈರಲ್

ಬೆಲ್ಜಿಯಂ ಮಹಿಳೆಯನ್ನು ಪಾಕಿಸ್ತಾನಿ ಜಿಹಾದಿಗಳು ಕಟ್ಟಿಹಾಕಿ ಐದು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯೊಬ್ಬರ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್‌(ಟ್ವಿಟರ್)ನಲ್ಲಿ ಈ ಪೋಟೋ ವೈರಲ್ ಆಗಿದ್ದು  ಅನೇಕರು ಇದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಮ್ಮ ತಂಡ ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು “ಬೆಲ್ಜಿಯಂ ಮಹಿಳೆ ಪಾಕಿಸ್ತಾನ” ಗಾಗಿ ಕೀವರ್ಡ್ ಹುಡುಕಾಟವನ್ನು ನಡೆಸಿತು, ಇದು ಬೆಲ್ಜಿಯಂ ಮಹಿಳೆಯನ್ನು ಐದು ದಿನಗಳ ಕಾಲ ಅತ್ಯಾಚಾರ ಮಾಡಿ ಪಾಕಿಸ್ತಾನದ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಪ್ರತಿಭಟನಾಕಾರರು ಪಾಕಿಸ್ತಾನ ಪರವಿದ್ದಾರೆ ಎಂದು ಬಿಂಬಿಸಲು ಕೆನಡಾದ ವೀಡಿಯೊವನ್ನು ಎಡಿಟ್ ಮಾಡಲಾಗಿದೆ

ಶೇಖ್ ಹಸೀನಾ ತಪ್ಪಿಸಿಕೊಂಡ ನಂತರ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವಾಗ, ಬಾಂಗ್ಲಾದೇಶದಿಂದ ಬಂದಿದೆ ಎಂದು ಹೇಳಲಾದ ವೀಡಿಯೊವನ್ನು ಜನರು ಪಾಕಿಸ್ತಾನದ ಧ್ವಜಗಳನ್ನು ಹಿಡಿದಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬಾಂಗ್ಲಾದೇಶದ ಮುಸ್ಲಿಮರು ಪಾಕಿಸ್ತಾನದ ಧ್ವಜಗಳನ್ನು ಎತ್ತುವುದು ಮತ್ತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವುದನ್ನು ಇದು ತೋರಿಸುತ್ತದೆ. ಎಕ್ಸ್ ಬಳಕೆದಾರರೊಬ್ಬರು ವೀಡಿಯೊವನ್ನು ಹಂಚಿಕೊಳ್ಳುವಾಗ, “ಪಾಕಿಸ್ತಾನದ ಧ್ವಜವನ್ನು ಹೊಂದಿರುವ ಬಾಂಗ್ಲಾದೇಶಿ ಮುಸ್ಲಿಮರು ಹಿಂದೂಗಳ ಮೇಲೆ ‘ನೇರ ಕ್ರಮ’ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾವು ಅವರಿಗೆ ಅವರ ದೇಶವಾದ ಬಾಂಗ್ಲಾದೇಶವನ್ನು ವಿಭಜಿಸಲು ಸಹಾಯ ಮಾಡಿದ್ದೇವೆ…

Read More