ಪ್ರಧಾನಿ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ವದೋದರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಜ್‌ತಕ್‌ ವರದಿಯ ಕೆಲವು ಸ್ಕ್ರೀನ್‌ಶಾಟ್‌ಗಳು ಟ್ಟಿಟರ್(‍X)ನಲ್ಲಿ ಹರಿದಾಡುತ್ತಿವೆ. ಕೆಲವರು “ಭಕ್ತರೆ, ಇದು ಕಾಂಗ್ರೆಸ್ಸಿನ ಶಕ್ತಿ, ನೀವು ಜಶೋದಾಬೆನ್‌ರವರನ್ನು  ಬೈಕಾಟ್ ಮಾಡಲು ಸಾಧ್ಯವೇ, ಧೈರ್ಯವಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ(ಹಿಂದಿಯಲ್ಲಿ ಮೂಲ ಪಠ್ಯ: अन्धभको देखो ये होती है , कांग्रेस की शक्ति, क्या जशोदाबेन को बायकॉर्ट करोगे…

Read More
ಸಾಲ

ಮೋದಿ ಪ್ರಧಾನಿಯಾದ ನಂತರ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು

70 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮೋದಿಯವರು ಪ್ರಧಾನಿಯಾದ ನಂತರ ಮೂರು ವರ್ಷಗಳಲ್ಲಿ ಭಾರತ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿಲ್ಲ ಲೆಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೇ ರೀತಿಯಾಗಿ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಎಲ್ಲಾ ಸಾಲವನ್ನು ತೀರಿಸಿಬಿಟ್ಟಿದ್ದಾರೆ. ಈ ರೀತಿ ಸಾಲ ತೀರಿಸಿರುವ 35 ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಮತ್ತೊಂದು ಪೇಪರ್ ಕಟಿಂಗ್ ಒಳಗೊಂಡಿರುವ ಪೋಸ್ಟರ್ ಸಹ ವೈರಲ್ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಪರಿಶೀಲಿಸುವಂತೆ ಕನ್ನಡ ಫ್ಯಾಕ್ಟ್ ಚೆಕ್ ತಂಡಕ್ಕೆ ಮನವಿಗಳು…

Read More

ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು

ನೇಪಾಳದ ಸಂಸದರೊಬ್ಬರು ತಮ್ಮ ಸಂಸತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿ, ವಿದೇಶಿ ಪ್ರವಾಸ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ ಎಂಬ ವಿಡಿಯೋವೊಂದು ಟ್ವಿಟರ್(X), ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾನಗಲಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ.    ಫ್ಯಾಕ್ಟ್‌ಚೆಕ್: ಈ ವಿಡಿಯೋ ನೇಪಾಳದ್ದಲ್ಲ. ಬದಲಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು ಮಾರ್ಚ್ 15, 2021ರಲ್ಲಿ ನಡೆದ ತಮ್ಮ ರಾಜ್ಯದ ಬಜೆಟ್ ಮಂಡನೆಯ ಕಲಾಪದಲ್ಲಿ ಮಂಡಿಸಿದ ಭಾಷಣವಾಗಿದೆ. ಇದನ್ನು ಮಾರ್ಚ್ 21, 2021ರಲ್ಲಿ…

Read More

ನರೇಂದ್ರ ಮೋದಿ ಭಾರತದ ಮೊದಲ ಒಬಿಸಿ ಪ್ರಧಾನಿ ಎಂಬುದು ಸುಳ್ಳು

ಬಿಜೆಪಿಯು ಭಾರತಕ್ಕೆ ಮೊದಲ ಒಬಿಸಿ (ಇತರ ಹಿಂದುಳಿದ ವರ್ಗ) ಪ್ರಧಾನಿಯನ್ನು ನೀಡಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪ್ರತಿಪಾದಿಸಿದ್ದಾರೆ. ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಸಂವಿಧಾನದ 128ನೇ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. "भारत को पहला OBC प्रधानमंत्री भाजपा (NDA) ने दिया" ◆ संसद में भाजपा अध्यक्ष जेपी नड्डा का बयान@JPNadda | #OBC | #WomenReservationBill2023 pic.twitter.com/bMRRYcbs1q — News24…

Read More

ಮಲ್ಲಿಕಾರ್ಜುನ್ ಖರ್ಗೆ 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದು ಸುಳ್ಳು

ಸಂಸತ್ತಿನಲ್ಲಿ ಮೋದಿಜಿಯವರು ಖರ್ಗೆಯವರ ಆಸ್ತಿ ವಿವರಗಳನ್ನು ಬಯಲು ಮಾಡಿದ್ದಾರೆ ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು ನೀವೇ ದಲಿತರಲ್ಲವೇ? ನಿಮ್ಮ ಆಸ್ತಿ ವಿವರಗಳನ್ನು ನಾನು ಹೇಳಲೆ ಎಂದು “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ…

Read More
ಚಿನ್ನ

ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ

ನಾನೊಂದು ಮೆಷಿನ್‌ ಸ್ಥಾಪಿಸುತ್ತೇನೆ. ಈ ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ 20 ಸೆಕೆಂಡ್‌ಗಳ ವಿಡಿಯೋವೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್ ಚೆಕ್: ವಾಸ್ತವ ಏನೆಂದರೆ 2017ರ ಗುಜರಾತ್ ಚುನಾವಣೆಗೆ ಮುಂಚೆ ಪಠಾಣ್ ಎಂಬಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಿಂದ ಈ 20 ಸೆಕೆಂಡ್‌ಗಳ ಕ್ಲಿಪ್ ಅನ್ನು ಕಟ್ ಮಾಡಿ ತೆಗೆದುಕೊಳ್ಳಲಾಗಿದೆ. ಪೂರ್ಣ ಭಾಷಣದಲ್ಲಿ “ಮೋದಿಯವರು ಗುಜರಾತಿನ ರೈತರಿಗೆ ಹಲವು ಭರವಸೆಗಳನ್ನು ಕೊಟ್ಟಿದ್ದರು, ಆದರೆ…

Read More