Narendra Modi

ನರೇಂದ್ರ ಮೋದಿಯವರ 26 ವಯಸ್ಸಿನ ವಿಡಿಯೋ ಎಂದು ಉತ್ತರಖಂಡದ ಅರ್ಚಕರೊಬ್ಬರ ವಿಡಿಯೋ ಹಂಚಿಕೊಂಡ ಬಿ.ಸಿ ಪಾಟೀಲ್

ಉತ್ತರಾಖಂಡದ ಕೇದಾರನಾಥ ದೇವಾಲಯದ ಹೊರ ಆವರಣದ ಸುತ್ತಲೂ ವ್ಯಕ್ತಿಯೊಬ್ಬ ಕೈಗಳ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 26 ವರ್ಷದವರಾಗಿದ್ದಾಗ ನರೇಂದ್ರ ಮೋದಿಯವರು ಯೋಗ ಮಾಡಿದ್ದ ದೃಶ್ಯ ಇದು ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅವರು ಸಹ “ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು 26 ವರ್ಷ ವಯಸ್ಸಿನವರಾಗಿದ್ದಾಗ ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದ್ದರು,…

Read More

Fact Check | ಜನ್‌ಧನ್‌ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು

” ಹೊಸ ವರ್ಷದ ಶುಭಾಶಯ, 1 ಲಕ್ಷದಿಂದ 30 ಲಕ್ಷದವರೆಗೆ ಸಾಲ, 2% ಬಡ್ಡಿ ದರ, 30% ಸಬ್ಸಿಡಿ, ನಿಮ್ಮ ಮನೆಯಲ್ಲಿ ಜನ್‌ಧನ್‌ ಸಾಲವನ್ನು ತ್ವರಿತವಾಗಿ ಪಡೆಯಿರಿ”ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಈ ಪೋಸ್ಟರ್ ಅನ್ನು ನಿಜವೆಂದು ನಂಬಿ ಸಾಲಕ್ಕಾಗಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ ಹೀಗೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಅದರಲ್ಲಿ ಮಾತನಾಡುವ ವ್ಯಕ್ತಿ ಒಂದಷ್ಟು ವಯಕ್ತಿಕ ದಾಖಲೆಗಳನ್ನು ಕೇಳುತ್ತಾನೆ. ಬಳಿಕ ಎರಡು…

Read More

10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ

ಇಂದಿಗೂ ಭಾರತದ ಗ್ರಾಮೀಣ ಭಾಗಗಳಲ್ಲಿ ತಮ್ಮ ದಿನನಿತ್ಯದ ಅಡುಗೆಗೆ ಸೌದೆಗಳನ್ನು, ಬೆರಣಿಯನ್ನು ಬಳಸುವುದು ರೂಢಿಯಲ್ಲಿದೆ. ಆದರೆ ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಗೃಹ ಮಾಲಿನ್ಯವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಆನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಮಾಣವೇ ಅಧಿಕವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoP&NG) ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು “LPGಯಂತಹ ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ…

Read More

Fact Check | ಇನ್‌ಸ್ಟಾಗ್ರಾಮ್‌ ಸರ್ಕಾರಕ್ಕೆ ಗ್ರೂಪ್‌ ಚಾಟ್‌ಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ

“Instagram ತನ್ನ ಎಲ್ಲಾ ಬಳಕೆದಾರರ ಗ್ರೂಪ್‌ ಚಾಟ್‌ಗಳನ್ನು ನೋಡಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ನೀವು ಯಾವುದಾದರು ಗುಂಪಿನಲ್ಲಿದ್ದರೆ ಸರ್ಕಾರ ನಿಮ್ಮ ಸಂದೇಶಗಳನ್ನು ನೋಡಲು ಸಾಧ್ಯವಾಗುತ್ತದೆ.” ಎಂಬ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇನ್‌ಸ್ಟಾಗ್ರಾಮ್‌ ಅನ್ನು ಡಿಲೀಟ್‌ ಮಾಡಿ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಈ ಸಂದೇಶದ ಕುರಿತು  ನಮ್ಮ ತಂಡ ಫ್ಯಾಕ್ಟ್‌ಚೆಕ್‌ ನಡೆಸಲು ಮುಂದಾದಗ…

Read More

Fact Check | ಪ್ರಧಾನಿ ಮೋದಿ ಖಾಲಿ ಇರುವ ಜಾಗದತ್ತ ಕೈ ಬೀಸಿದ್ದಾರೆ ಎಂಬುದು ಎಡಿಟ್ ಮಾಡಿದ ವಿಡಿಯೋ..!

“ಪ್ರಧಾನಿ ಮೋದಿ ಇತ್ತೀಚೆಗೆ ಹೆಚ್ಚು ಹೆಚ್ಚು ಖಾಲಿ ಜಾಗಗಳತ್ತ ಕೈ ಬೀಸುತ್ತಿದ್ದಾರೆ. ಈ ವಿಡಿಯೋ ನೋಡಿ ಮತ್ತೆ ಪ್ರಧಾನಿ ಅವರು ಜನರೇ ಇರದ ಜಾಗದತ್ತ ಕೈ ಬೀಸುತ್ತಿದ್ದಾರೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವ್ಯಾಪಕವಾದ ಟೀಕೆಯನ್ನು ಕೂಡ ಮಾಡಲಾಗುತ್ತಿದೆ. विश्वफेकू अपनी शक्तियों का ईस्तेमाल करते हुए 🤣🤪😆😛😁😜😝😝#Panauti #BJparty #BJPFailedIndia pic.twitter.com/cC8vyK0c91 — Bhushan (@Bhushan__89) December 7, 2023 ಆದರೆ…

Read More

Fact Check | ಎಲ್ಲರ ಖಾತೆಗೆ 15 ಲಕ್ಷ ರೂ. ಜಮೆಯ ಭರವಸೆಯ ಸುದ್ದಿ ವಿಡಂಬನೆ ಹೊರತು ನಿಜವಲ್ಲ

“2013-14ರ ಹಳೆಯ ನ್ಯೂಸ್‌ ಪೇಪರ್‌ವೊಂದರಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ₹ 15 ಲಕ್ಷ ರೂ. ಜಮಾ ಮಾಡುವುದಾಗಿ ನರೇಂದ್ರ ಮೋದಿ ಅವರ ಚುನಾವಣಾ ಭರವಸೆಯನ್ನು ನೀಡಿದ್ದಾರೆ ಎಂಬ ವರದಿ ಮಾಡಲಾಗಿದೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮೋದಿ ಅವರು 2014ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರ ಕುರಿತು ಇರುವ ಏಕೈಕ ವರದಿ ಇದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಸಾಕಷ್ಟು ಮಂದಿ…

Read More
ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶ ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿಲ್ಲ

ಭಾರತದ ಆರ್ಥಿಕತೆಗೆ, ಜಿಡಿಪಿ ದತ್ತಾಂಶಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ನವೆಂಬರ್ ತಿಂಗಳಲ್ಲಿ ಭಾರತವೂ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ, ಇದರ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂಬ ಸುಳ್ಳು ಸುದ್ದಿಯೊಂದನ್ನು ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರು ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಂಡಿದ್ದರು. ದೇಶದ ಮತ್ತು ರಾಜ್ಯದ ಹಲವು ಮಾಧ್ಯಮಗಳು ಸಹ ಸತ್ಯವನ್ನು ಪರಿಶೀಲಿಸದೆ ತಪ್ಪಾಗಿ…

Read More

Fact Check | ಖಲಿಸ್ತಾನ ಪರ ಚಳುವಳಿಯನ್ನು ರಾಜಸ್ತಾನದ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಬೆಂಬಲಿಸಿಲ್ಲ

“ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿದ್ದರೆ ಮತ್ತು ಪ್ರತಿಭಟನೆಯೊಂದರಲ್ಲಿ ಮಾತನಾಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್‌ ಖಲಿಸ್ತಾನಿಗಳಿಗೆ ಬೆಂಬಲ ಕೊಡುತ್ತಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಮತ್ತೊಂದು ವಿಡಿಯೋ ಕೂಡ ವೈರಲ್‌ ಆಗಿದ್ದು ಅದರಲ್ಲಿ ರಾಜಸ್ತಾನದ ಮಾಜಿ  ಸಿಎಂ ಅಶೋಕ್‌ ಗೆಹ್ಲೋಟ್‌ ಅವರು, “ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದಾಗ, ನಾನು ಖಲಿಸ್ತಾನ್ ಬಗ್ಗೆ ಏಕೆ ಮಾತನಾಡಬಾರದು..” ಎಂದು…

Read More

Fact Check | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 3 ದಿನಗಳ ವಾರಾಂತ್ಯ ಘೋಷಣೆ ಮಾಡಲಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಮುಂಬರುವ ಬೆಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಎಲ್ಲಾ ಕಂಪನಿಗಳಿಗೆ ಮೂರು ದಿನಗಳ ವಾರದ ರಜೆಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿ ಮಾಡಲಿದ್ದಾರೆ.” ಎಂಬ ಪೋಸ್ಟ್‌ನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಈಗ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನೇ ನಿಜವೆಂದು ನಂಬಿಕೊಂಡಿದ್ದು ಕೆಲವರು ಈ ಕುರಿತು ವಿಮರ್ಶೆಯನ್ನು ನಡೆಸಲು ಪ್ರಾರಂಭಿಸಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೇ ರೀತಿಯ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿವೆ. ಅದರಲ್ಲೂ ಮೂರು ದಿನಗಳ ಕಾಲ…

Read More

Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು

“ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣಿಸಿದರು.” ಎಂದು ಸಾಮಜಿಕ ಜಾಲತಾಣದಲ್ಲಿ ವಿಡಿಯೋವೊಂದು ಮತ್ತು ಕೆಲವೊಂದು ಫೋಟೋಗಳು ವೈರಲ್‌ ಆಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಅವರ ನಡೆಗೆ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿಯಾಗಿ ನಡೆದುಕೊಂಡರೆ ಎಂದು ಸತ್ಯ ಶೋಧನೆ…

Read More