ಮತಾಂತರ

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುತ್ತಾರೆ. ಅಥವಾ ಬಾಂಗ್ಲಾದೇಶದಲ್ಲಿ ಬಲವಂತವಾಗಿ ಹಿಂದೂಗಳ ಕೈಯಲ್ಲಿ ನಮಾಜ್ ಮಾಡಿಸುತ್ತಾ ಇದ್ದಾರೆ ಎಂದು ಆರೋಪಿಸಿ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಮ್ಮ ತಂಡ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು, ಇದು ಜುಲೈ 16, 2024 ರಂದು ಸೊಮೊಯ್ ಟಿವಿ ಬುಲೆಟಿನ್ ಅಪ್ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಉದ್ಯೋಗ ಕೋಟಾಗಳ ವಿರುದ್ಧ…

Read More

Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ

ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲೇನಿದೆ? ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ….

Read More
ನಮಾಜ್‌

Fact Check: ರಸ್ತೆಯಲ್ಲಿ ನಮಾಜ್‌ ಸಲ್ಲಿಸಿದ ಮುಸ್ಲಿಂ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂಬುದು ಸುಳ್ಳು

ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಧರ್ಮಗುರು ಅಥವಾ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಹೀಗಾಗಿಯೇ ಬಾಂಗ್ಲಾದೇಶ ಪೊಲೀಸರು ಮೌಲಾನಾರನ್ನು ಬಂಧಿಸಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಎಲ್ಲ ನಮಾಜಿಗಳನ್ನು ಹೊರಹಾಕಿದರು. ಯಾವುದೇ ಇಸ್ಲಾಮಿಕ್ ರಾಷ್ಟ್ರವು ಅಥವಾ ಸೌದಿಯಲ್ಲಿ ರಸ್ತೆಯಲ್ಲಿ ನಮಾಜ್ ಅನ್ನು ಅನುಮತಿಸುವುದಿಲ್ಲ ಅವರು ರಸ್ತೆಯಲ್ಲಿ ನಮಾಜ್ ಮಾಡುವವರನ್ನು ಬಂಧಿಸಿ ದಂಡ ವಿಧಿಸುತ್ತಾರೆ. ಭಾರತದಲ್ಲಿ ಪ್ರತಿಪಕ್ಷಗಳು ಅಳಲು ಪ್ರಾರಂಭಿಸುತ್ತವೆ.” ಎಂದು ಅದನ್ನು ಭಾರತಕ್ಕೆ ಹೋಲಿಸಿ ಹಂಚಿಕೊಂಡಿದ್ದಾರೆ. pic.twitter.com/KaKT4uwqnb@imMAK02 @khanumarfa @RanaAyyub This…

Read More
ನಮಾಜ್

Fact Check: ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವೈರಲ್ ವಿಡಿಯೋ ರಷ್ಯಾದ್ದೇ ಹೊರತು ಫ್ರಾನ್ಸ್‌ನದ್ದಲ್ಲ

ಜನರು ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ರಾನ್ಸ್ನ ಬೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಿಕೆಗಳು ಸೂಚಿಸುತ್ತವೆ. “ಇದು ಶೀಘ್ರದಲ್ಲೇ ಯುಕೆಯಲ್ಲಿ ಒಂದೇ ಆಗಿರುತ್ತದೆ, ಆರ್‌ಐಪಿ ಫ್ರಾನ್ಸ್‌, #French ತಮ್ಮ ಮತಗಳನ್ನು ಎಡಪಂಥೀಯ ಕಮ್ಯುನಿಸ್ಟರಿಗೆ ನೀಡುವ ಮೂಲಕ ಫ್ರಾನ್ಸ್ ಇಸ್ಲಾಮಿಕ್ ಆಡಳಿತದಲ್ಲಿ ಉಳಿಯುತ್ತದೆ ಎಂದು ನಿರ್ಧರಿಸಿತು. ನಿಮ್ಮ ಅಭಿಪ್ರಾಯವೇನು?” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು. (ಆರ್ಕೈವ್) ಫ್ಯಾಕ್ಟ್ ಚೆಕ್ ಈ ವೀಡಿಯೋವನ್ನು…

Read More

Fact Check: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಸುಳ್ಳು ಪೋಸ್ಟರ್‌ಗಳನ್ನು ಹಂಚಿಕೊಂಡು ಕೆಲವು ರಾಜಕೀಯ ನಾಯಕರ ತೇಜೋವದೆಗೆ ಇಳಿದಿದ್ದಾರೆ. ಈಗ, ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ. – ಪ್ರಿಯಾಂಕಾ ವಾದ್ರಾ” ಎಂಬ ಪೋಸ್ಟರ್‌ ಒಂದನ್ನು ಸುಳ್ಳುಸುದ್ದಿಗಳನ್ನು ಹರಡಲು ಕುಖ್ಯಾತಿ ಪಡೆದಿರುವ ಮಹೇಶ್ ವಿಕ್ರಂ ಹೆಗ್ಡೆ ನೇತೃತ್ವದ ಪೋಸ್ಟ್‌ಕಾರ್ಡ್‌ ಹರಿಬಿಟ್ಟಿದ್ದೆ….

Read More
ನಮಾಜ್

Fact Check: ಶುಕ್ರವಾರ ನಮಾಜ್ ಮಾಡಲೆಂದು SSLC ಪರೀಕ್ಷೆಯನ್ನು ಮಧ್ಯಾಹ್ನ ಇಡಲಾಗಿದೆ ಎಂಬುದು ಸುಳ್ಳು

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎಲ್ಲಾ ನಡೆಗಳನ್ನು ಮುಸ್ಲಿಂ ಓಲೈಕೆಗಾಗಿ ಎಂದು ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಭಾಗವಾಗಿ,  “ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಸಹ ಮುಸ್ಲಿಂ ತುಷ್ಟೀಕರಣ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ, ರಾಜ್ಯ ಶಿಕ್ಷಣ ಇಲಾಖೆ ಬೆಳಿಗ್ಗೆಯ ನಮಾಜ್ ಮಾಡಲು ಅನುಕೂಲ ಮಾಡಿಕೊಡಲು ಉಳಿದೆಲ್ಲ ದಿನದ ವೇಳಾಪಟ್ಟಿಯ ಸಮಯಕ್ಕೆ ಬದಲಾಗಿ ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಸಲು ನಿರ್ಧರಿಸಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ…

Read More
ರೈಲು

ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು

ಪಶ್ಚಿಮ ಬಂಗಾಳದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿರುವ ಮುರಿಶಿದಬಾದ್ ಜಿಲ್ಲೆಯಲ್ಲಿ ನಮಾಜ್ ಮಾಡುವಾಗ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತದೆ ಎಂದು ರೈಲು ಹಳಿಗಳನ್ನು ಕಾನೂನುಬಾಹಿರವಾಗಿ ಕಿತ್ತು ಬಿಸಾಡಿದ್ದಾರೆ, ಇನ್ನು ಮಠ-ಮಂದಿರ ದೇವಸ್ಥಾನಗಳು ಅವರಿಗೆ ಯಾವ ಲೆಕ್ಕ ಎಂದು ಪ್ರತಿಪಾದಿಸಿ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನಮಾಜ್ ಮಾಡಲು ರೈಲಿನ ಶಬ್ದದಿಂದ ತೊಂದರೆ ಆಗುತ್ತದೆ ಎಂದು ರೈಲು ಹಳಿ ಮತ್ತು ರೈಲನ್ನೆ ನಾಶ ಮಾಡಲು ಪ್ರಯತ್ನ ಪಡುತ್ತಿರುವ ಜನ ಎಂದು ಮತ್ತೊಂದು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ಇವುಗಳ ಹಿನ್ನಲೆಯೇನು ಎಂದು…

Read More

ಮುಸ್ಲಿಂ ಸಮುದಾಯದ ಕುರಿತು ಪ್ರೊಪಗಂಡದ ಸುಳ್ಳು ವಿಡಿಯೋ ಹಂಚಿಕೊಂಡ ಪೋಸ್ಟ್‌ಕಾರ್ಡ್

ಜಗತ್ತಿನ ಯಾವುದೇ ರಾಷ್ಟ್ರದಲ್ಲೇ ಆಗಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ಧರ್ಮಗಳ ಮೇಲೆ, ಅಲ್ಲಿನ ಬಹುಸಂಖ್ಯಾತರು ನಿರಂತರವಾಗಿ ಶೋಷಿಸುತ್ತಾರೆ. ಮತ್ತು ಅವರ ಸಂಸ್ಕೃತಿಯನ್ನು ತುಚ್ಚಿಕರಿಸಿ, ಅವರ ಕಥೆಗಳನ್ನು, ಕೊಡುಗೆಗಳನ್ನು ಮರೆವಿಗೆ ಸರಿಸಿ, ಸಾಧ್ಯವಾದಷ್ಟು ಅವರ ಮೇಲೇ ಸಲ್ಲದ ಆರೋಪಗಳನ್ನು ಹೊರಿಸಿ ನಂತರ ಅವರ ಮೇಲೆ ನೇರ ದಾಳಿ ನಡೆಸುತ್ತವೆ. ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಾಭಲ್ಯದ ದೇಶಗಳಲ್ಲಿ ಯಹೂದಿ ಮತ್ತು ಮುಸ್ಲಿಮರನ್ನು ನಡೆಸಿಕೊಂಡಂತೆ, ಮುಸ್ಲಿಂ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಹಿಂದುಗಳನ್ನು ನಡೆಸಿಕೊಂಡಂತೆ, ಬಹುಸಂಖ್ಯಾತ ಹಿಂದು ಸಮಾಜದ ಭಾರತದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನೂ ಹೀಗೆಯೇ…

Read More