ಮುಸ್ಲಿಂ

Fact Check : ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ರಹಸ್ಯ ಸಭೆ ನಡೆದು ಹಿಂದೂಗಳ ಬಳಿ ವ್ಯಾಪಾರ ಬಹಿಷ್ಕರಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಸಾಮರಸ್ಯವನ್ನು ಕದಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಸ್ಲಿಂ ಮತ್ತು ಹಿಂದೂ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಹಿಂದೂ ಮುಸ್ಲಿಂ ವ್ಯಾಪರ ವಿಚಾರಕ್ಕೆ ಸಂಬಂಧ ಪಟ್ಟಂತೆ ದ್ವೇಷ ಹರಡುವ ಕೆಲಸಗಳು ಕೂಡ ನಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಗಂಭೀರವಾದ ಆರೋಪವನ್ನು ಹರಿಬಿಡಲು ಯತ್ನಿಸಲಾಗಿದೆ. ಇದಕ್ಕೆ…

Read More
ತೆಲಂಗಾಣ

ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುತ್ತಿಲ್ಲ, ಹಲವು ಸಮುದಾಯಗಳಿಗೆ ಈ ಸೌಲಭ್ಯವಿದೆ

ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುವ ಯೋಜನೆ ಜಾರಿಗೆ ತಂದಿದೆ. ನಮ್ಮ ತೆರಿಗೆ ಹಣವನ್ನು ಮುಸ್ಲಿಮರ ತುಷ್ಟೀಕರಣ ಮಾಡಲು ಬಳಸುತ್ತಿದೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಶಿವಮೊಗ್ಗ ಪೇಜ್‌ನಲ್ಲಿ ಅದನ್ನು ಹಂಚಿಕೊಂಡು ಮುಸ್ಲಿಮರ ವಿರುದ್ಧ ಕಿಡಿಕಾರಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.   ತೆಲಂಗಾಣ ರಾಜ್ಯ ಸರ್ಕಾರವು ಚಾಲಕರ ಸಬಲೀಕರಣ ಕಾರ್ಯಕ್ರಮದ ಭಾಗವಾಗಿ ಅಲ್ಪಸಂಖ್ಯಾತರ ಹಣಕಾಸು ಕಾರ್ಪೊರೇಶನ್‌ನಿಂದ ಅರ್ಹ ಅಲ್ಪಸಂಖ್ಯಾತ ಚಾಲಕರಿಗೆ  ಡ್ರೈವರ್ ಕಮ್ ಓನರ್ ಯೋಜನೆಯಡಿ ಕಾರು ತೆಗೆದುಕೊಳ್ಳಲು ಸಹಾಯಧನ ಒದಗಿಸುತ್ತಿದೆ….

Read More
ಮುಸ್ಲಿಂ

Fact Check: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಮದುವೆಯಾಗಿದ್ದಾನೆ ಎಂಬುದು ಸುಳ್ಳು

ಇದು ಇಸ್ಲಾಂನ ಸೌಂದರ್ಯ. ಇಲ್ಲಿ ಹೆಂಡತಿಯಾಗಲು ವಯಸ್ಸು ಮುಖ್ಯವಲ್ಲ. ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳಾದ ಪುಟ್ಟ ಬಾಲಕಿಯನ್ನೇ ಮದುವೆಯಾಗಿದ್ದಾನೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇಟಲಿಯ ಕ್ಯಾಥೋಲಿಕ್ ಕುಟುಂಬವೊಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತಮ್ಮ ಮಗಳ ಮೊದಲ ಕಮುನಿಯನ್(communion ceremony) ಆಚರಣೆಯನ್ನು ನಡೆಸುತ್ತಿರುವ ವಿಡಿಯೋ ಇದಾಗಿದೆ. ಹುಡುಗಿಯ ತಂದೆ ಜಿನೊ ಕೊಪ್ಪೊಲಾ ಅಕ್ಟೋಬರ್ 23ರಂದು ತಮ್ಮ ಇಂಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದಾರೆ. ಮಾರನೆ ದಿನವೂ ಸಹ ತನ್ನ ಹೆಂಡತಿ ಜೊತೆಗೆ ಮಗಳಿಗೆ…

Read More

“ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮುಸ್ಲಿಮರ ಬಾಹುಳ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರೆ ಪೆಟ್ಟು ತಿಂದು ಸಾಯಬೇಕಾಗಬಹುದು. ಹೇಗಿದೆ ನಮ್ಮ ದುರಾವಸ್ಥೆ ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಈ ಮೊದಲು ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿತ್ತು, ಆದರೆ ಇದು 2019ರ ರಾಜಸ್ಥಾನದ ಭಿಲ್ವಾರದಲ್ಲಿ ನಡೆದ ಘಟನೆಯಾಗಿದ್ದು, ವೃದ್ಧನಿಗೆ ಹಣದ ವಿಚಾರದಲ್ಲಿ ಜನರನ್ನು ನಿಂದಿಸಿದ್ದಕ್ಕಾಗಿ ಥಳಿಸಲಾಗಿದೆಯೇ ಹೊರತು ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದ್ದಕ್ಕಾಗಿ ಅಲ್ಲ ಎಂದು ಭಿಲ್ವಾರದ…

Read More

ಕೇರಳದಲ್ಲಿ ಪಾಕಿಸ್ತಾನ ಧ್ವಜಗಳೊಂದಿಗೆ ಮುಸ್ಲಿಮರು ಮೆರವಣಿಗೆ ನಡೆಸಿಲ್ಲ

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಬಿಯವರ ಹುಟ್ಟುಹಬ್ಬದ ಪ್ರಯುಕ್ತ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ಸಮವಸ್ತ್ರ ಧರಿಸಿ ಮೆರವಣಿಗೆ ನಡೆಸಲಾಗಿದೆ. ಇದು ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲದೊಂದಿಗೆ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಕೇರಳದ ಕಾಸರಗೋಡಿನ ಕನ್ಹನ್ಗಡ್‌ನ ಬಲ್ಲಾ ಬೀಚ್‌ನಲ್ಲಿ 28 ಸೆಪ್ಟೆಂಬರ್ 2023ರಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಯುವಕರು ಮೆರವಣಿಗೆ ಮತ್ತು ಪರೇಡ್ ನಡೆಸಿದ್ದಾರೆ. ಈ ಕಾರ್ಯಕ್ರಮವನ್ನು ಸಮಸ್ತ ಕೇರಳ ಜೆಮ್-ಇಯಾತುಲ್ ಉಲ್ಮ ಇಸ್ಲಾಮಿಕ್ ಸಂಘಟನೆಯು ಆಯೋಜಿಸಿತ್ತು. ಅಲ್ಲಿ…

Read More
ಇಸ್ಲಾಂ

2030ಕ್ಕೆ ಭಾರತ ಇಸ್ಲಾಂ ದೇಶವಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು: ಇಲ್ಲಿದೆ ಪೂರ್ಣ ವಿವರ

“2030ಕ್ಕೆ ಭಾರತ ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ..!” ಎಂಬ ಶೀರ್ಷಿಕೆಯುಳ್ಳ, ಶ್ರೀಪಮ ಎಂಬುವವರು ಬರೆದ ಪತ್ರಿಕಾ ವರದಿಯಂತೆ ಕಾಣುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದುಗಳೇ.. ದುಡ್ಡು ಮಾಡುತ್ತೀರಿ, ನಿದ್ದೆ ಮಾಡುತ್ತೀರಿ.. ಎಂಬ ವ್ಯಂಗ್ಯದಿಂದ ಶುರುವಾಗುವ ಬರಹದಲ್ಲಿ, “ದಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮೋಗ್ರಫಿಕ್ ರಿಸರ್ಚ್” ಎಂಬ ಅಮೇರಿಕಾದ ಒಂದು ಸಂಸ್ಥೆ, ಭಾರತದ ಭವಿಷ್ಯ ಏನಾಗಬಹುದು? ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದೆ. ಈ ಸಂಸ್ಥೆ ಭಾರತವು 2041ರಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗುತ್ತದೆ, ಎಂಬುದನ್ನು ಸಾರುತ್ತದೆ. ಈ ಸಂಸ್ಥೆ…

Read More