Fact Check | ಉತ್ತರ ಪ್ರದೇಶದಲ್ಲಿ ಕೋಮು ದ್ವೇಷಕ್ಕೆ ಮುಸ್ಲಿಂ ಮುಖಂಡರ ಹತ್ಯೆಯಾಗುತ್ತಿದೆ ಎಂಬುದು ಸುಳ್ಳು
ನೆಲದ ಮೇಲೆ ಬಿದ್ದಿರುವ ಮೃತದೇಹವೊಂದನ್ನು ತೋರಿಸುವ ವೀಡಿಯೊ ಕ್ಲಿಪ್ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ, ಫಜ್ಲುರ್ ರೆಹಮಾನ್ ಎಂಬ ಮುಸ್ಲಿಂ ಮುಖಂಡನನ್ನು ಹಿಂದೂಗಳು ಹತ್ಯೆಗೈದರು ಮತ್ತು ಶಿರಚ್ಛೇದನ ಮಾಡಿದರು, ಈ ವಿಡಿಯೋದಲ್ಲಿರುವಂತೆ ಇನ್ನೂ ಇಬ್ಬರು ಮುಸ್ಲಿಂ ಮುಖಂಡರನ್ನು ಉತ್ತರ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ” ಎಂಬಂತಹ ಬರಹಗಳು ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋ ಮತ್ತು ಬರಹಗಳನ್ನು ನೋಡಿದ ಹಲವರು ಇದರ…