ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More
ಹನುಮಂತ

Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್‌ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೃಹತ್ ಗದೆಯೊಂದು ಪತ್ತೆಯಾಗಿದ್ದು ಇದು ಹನುಮಂತನಿಗೆ ಸೇರಿದ್ದು ಮತ್ತು ಸೀತೆಯನ್ನು ರಕ್ಷಿಸುವಾಗ ಶ್ರೀಲಂಕಾದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅದನ್ನು ಬಿಡಲಾಗಿದೆ” ಎಂದು ಹೇಳಲಾಗುತ್ತಿದೆ. ಈ 2 ಟನ್ ಗದೆಯನ್ನು ಇತ್ತೀಚೆಗೆ ಶ್ರೀಲಂಕಾದಲ್ಲಿ ಉತ್ಖನನದ ಸಮಯದಲ್ಲಿ ಕಂಡುಹಿಡಿಯಲಾಗಿದೆ ಮತ್ತು ಕ್ರೇನ್ ಮೂಲಕ ಟ್ರೈಲರ್ಗೆ ಲೋಡ್ ಮಾಡುತ್ತಿರುವುದನ್ನು ತೋರಿಸಲಾಗಿದೆ ಎಂದು ಪೋಸ್ಟ್ ಹೇಳಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಯೂಟೂಬ್‌ನಲ್ಲಿ ಸಹ ಈ ಪೋಟೋವನ್ನು ಹಂಚಿಕೊಂಡು ಶ್ರೀಲಂಕಾದ ಬೆಟ್ಟಗಳಲ್ಲಿ ಆಂಜನೇಯನ ಗದೆ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More
ಜಾತಿ ದೌರ್ಜನ್ಯ

Fact Check: ಮಧ್ಯಪ್ರದೇಶದಲ್ಲಿ ಮಹಿಳೆಯರನ್ನು ಜೀವಂತ ಸಮಾಧಿ ಮಾಡಿದ ಘಟನೆ ಜಾತಿ ದೌರ್ಜನ್ಯದ ಪ್ರಕರಣವಲ್ಲ

ಮಧ್ಯಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಈ ಪೋಟೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ, ಪ್ರಕರಣದ ಸಂತ್ರಸ್ತರು ಮತ್ತು ಆರೋಪಿಗಳು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಇದು ಜಾತಿ ದೌರ್ಜನ್ಯದ ಪ್ರಕರಣವಲ್ಲ. ಇಬ್ಬರು ಮಹಿಳೆಯರನ್ನು ಮಮತಾ ಪಾಂಡೆ ಮತ್ತು ಆಶಾ…

Read More

Fact Check: ಕಮಲ್‌ ನಾಥ್ ಅವರ ಡೀಪ್‌ಫೆಕ್ ವಿಡಿಯೋವನ್ನು ಸುಳ್ಳು ಹರಡಲು ಬಳಸಲಾಗುತ್ತಿದೆ

ಲೋಕಸಭಾ ಚುನಾವಣೆಗಳು ಜರುಗುತ್ತಿರುವ ಈ ಸಂದರ್ಭದಲ್ಲಿ “ಕಾಂಗ್ರೆಸ್‌ ಮುಸ್ಲಿಂ ಓಲೈಕೆ ನಡೆಸುತ್ತಿದ್ದು ಹಿಂದುಗಳನ್ನು ಅವಮಾನಿಸುತ್ತಿದೆ” ಎಂದು ಹಿಂದುತ್ವ ಮತ್ತು ಹಿಂದು ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಎದುರಾಳಿಯನ್ನಾಗಿಸಿ ಬಿಜೆಪಿ ಪಕ್ಷವು ಮತ ಪಡೆಯಲು ಭಾರತದಾದ್ಯಂತ ಪ್ರಯತ್ನಸುತ್ತಿದೆ. ಇದರ ಭಾಗವಾಗಿ ಪ್ರತೀದಿನವೂ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸುಳ್ಳು ಹೇಳಿಕೆಗಳನ್ನು, ಆರೋಪಗಳನ್ನು ಹಂಚಿಕೊಂಡು ಧರ್ಮಾಧಾರಿತ ರಾಜಕಾರಣವನ್ನು ಬಳಸಿಕೊಂಡು ಸಾಕಷ್ಟು ದ್ವೇಷ ಹರಡುವುದರಲ್ಲಿ ನಿರತವಾಗಿದೆ. ಈಗ, “ನಿನ್ನೊಂದಿಗೆ ಮಾತನಾಡಬೇಕು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಆದರೆ ಈ ವಿಷಯ ಕೋಣೆದಾಟಿ ಹೋಗಬಾರದು…

Read More
ಬಿಜೆಪಿ

Fact Check: ಪ್ರಚಾರದ ವೇಳೆ ಬಿಜೆಪಿ ನಾಯಕರಿಗೆ ಚಪ್ಪಲಿ ಹಾರ ಹಾಕಿರುವುದು ಹಳೆಯ ವಿಡಿಯೋ

ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ಜರುಗಿದೆ. ಆದರೆ ಕಳೆದ ಕೆಲವು ವಾರಗಳಿಂದ ಅನೇಕ ಹಳೆಯ ವಿಡಿಯೋಗಳನ್ನು ಇತ್ತೀಚಿನದು ಎಂದು ಬಿಂಬಿಸಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಣಿಪುರದಲ್ಲಿ ಮತ ಕೇಳಲು ಹೋದ ಬಿಜೆಪಿ ನಾಯಕರನ್ನು ತಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನಲ್ಲಿ ನಡೆದ ಹಳೆಯ ಘಟನೆಯನ್ನು ಹಂಚಿಕೊಳ್ಳಲಾಗುತ್ತಿತ್ತು. ಈಗ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕನಿಗೆ ಜನರು ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ. ಎಂಬ ವಿಡಿಯೋ ಒಂದು ಎಕ್ಸ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು…

Read More
ಸರ್ಧಾರ್ ವಲ್ಲಭಬಾಯಿ ಪಟೇಲ್

Fact Check: ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಿಲ್ಲ

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಬಿಜೆಪಿಯೇತರ ರಾಜ್ಯಗಳ ಮೇಲೆ ಅದರಲ್ಲೂ ದಕ್ಷಿಣ ರಾಜ್ಯಗಳ ಮೇಲೆ ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಗುಂಪೊಂದು ಟ್ಯಾಕ್ಟ್‌ರ್ ಬಳಸಿ ತೆರವುಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, “ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಲಾಗಿದೆ.” ಎಂದು ಪ್ರತಿಪಾದಿಸಲಾಗುತ್ತಿದೆ.  ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಈ ಘಟನೆ 26 ಜನವರಿ 2024ರಲ್ಲಿ ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಕಾಡೋನ್…

Read More

Fact Check : ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಬಿಜೆಪಿ ಸರ್ಕಾರದ ಯೋಜನೆ ನಿಲ್ಲಿಸುತ್ತೇನೆ ಎಂದು ಹೇಳಿಲ್ಲ

ದೇಶದ ಕೆಲವು ರಾಜ್ಯಗಳು ವಿಧಾನಸಭೆ ಚುನಾವಣೆಗೆ ತಯಾರಿಯನ್ನ ನಡೆಸುತ್ತಿವೆ. ಈ ನಡುವೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇದು ಹಲವು ರಾಜಕೀಯ ನಾಯಕರ ವೈಯಕ್ತತಿಕ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಹೀಗಾಗಿ ಹಲವು ನಾಯಕರು ಮುಜುಗರ ಅನುಭವಿಸು ಹಾಗಾಗಿದೆ. ಇದೇ ರೀತಿಯಾದ ಮುಜುಗರ ಮತ್ತು ಸುಳ್ಳು ಸುದ್ದಿಯಿಂದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಎದುರಿಸುತ್ತಿದ್ದಾರೆ. ಈಗ ಅವರ ವಿರುದ್ಧ ಸುಳ್ಳು ಸುದ್ದಿ ಹರಡಲು ಪ್ರಾರಂಭ ಮಾಡಿರುವ ಮಧ್ಯ ಪ್ರದೇಶದ…

Read More