Fact Check | ಗುಜರಾತಿನ ಗುಂಡಿಗಳಿಂದ ಕೂಡಿದ ರಸ್ತೆ ಎಂದು AI ಫೋಟೋ ಹಂಚಿಕೆ

” ಈ ರಸ್ತೆಗಳನ್ನು ಒಮ್ಮೆ ನೋಡಿ ಇದು ಬಿಹಾರ ಅಥವಾ ಇನ್ಯಾವುದೋ ವಿಪಕ್ಷಗಳ ಆಡಳಿತ ರಾಜ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್‌ ಮಾಡಲ್‌ ಎಂದು ಅಧಿಕಾರಕ್ಕೆ ಬಂದ ಅದೇ ಗುಜರಾತ್‌ ರಾಜ್ಯದ್ದು, ಇತ್ತೀಚೆಗೆ ಕಾಣಿಸಿಕೊಂಡ ಭೀಕರ ಮಳೆಯಿಂದ, ಗುಜರಾತ್‌ನ ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಅಲ್ಲಿನ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದರು. ಆದರೆ ಈ ಬಗ್ಗೆ ಅಲ್ಲಿನ ಸರ್ಕಾರವಾಗಲಿ, ಸ್ಥಳೀಯ ಆಡಳಿತವಾಗಲಿ ತಲೆ ಕೆಡಿಸಿಕೊಂಡಿಲ್ಲ.” ಎಂಬ ಸುದ್ದಿಯೊಂದು ಫೋಟೋವೊಂದರ ಜೊತೆಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ….

Read More
ಮೋದಿ

Fact Check: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ

ಬಿಜೆಪಿ ರಾಜ್ಯ ಅಥವಾ ಜಿಲ್ಲಾ ಘಟಕಗಳ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಮತ್ತು ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೆಟ್ರೋ-ರೈಲ್ವೆ ಮಾರ್ಗಗಳ ಚಿತ್ರವಿರುವ ಪೋಸ್ಟರ್ ಅನ್ನು ಹಂಚಿಕೊಂಡಿವೆ. ಈ ಪೋಸ್ಟರ್‌ಗಳಲ್ಲಿ ಉದ್ಯೋಗವು ಹೆಚ್ಚಾಗದಿದ್ದರೆ, ಮೆಟ್ರೋ-ರೈಲ್ವೆ ಸೇವೆಗಳು ವಿವಿಧ ಭಾರತೀಯ ನಗರಗಳಿಗೆ ಹೇಗೆ ತಲುಪಿದವು? ಕಾಂಗ್ರೆಸ್ ಮಾತುಕತೆ; ಬಿಜೆಪಿ ಕೆಲಸಗಳು.) ಬಿಜೆಪಿ ಆಡಳಿತದಲ್ಲಿ 20 ನಗರಗಳಲ್ಲಿ ಮೆಟ್ರೋ ಸೇವೆಗಳು ಪ್ರಾರಂಭವಾಗಿದ್ದು, 2014 ಕ್ಕಿಂತಲೂ ಹಿಂದೆ 5 ನಗರಗಳಲ್ಲಿ ಮಾತ್ರ ಮೆಟ್ರೋ ಸೇವೆಗಳು ಇದ್ದವು ಎಂದು ಪೋಸ್ಟರ್…

Read More

Fact Check | ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು

“ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ, ಈ ವೇಳೆ ಐದು ಜನ ಕಾಂಗ್ರೆಸ್‌ ಕಾರ್ಯಕರ್ತರ ಪಂಚೆ(ಲುಂಗಿ)ಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋಗಿದ್ದಾರೆ. ನೋಡಿ ವಾಸ್ತವದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ಕೂಡ ವಿರೋಧಿಗಳಿಗೆ ಪಾಠ ಕಲಿಸುತ್ತಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ” ಎಂದು ವಿಡಿಯೋದೊಂದಿಗೆ ಬರೆದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Lungi of five Congressmen caught fire while burning Modi's effigy…

Read More

Fact Check | ಪ್ರಧಾನಿ ಮೋದಿಯವರಿಗೆ ಕೈಯಿಂದ ಅಶ್ಲೀಲ ಚಿಹ್ನೆ ತೋರಿಸಲಾಗಿದೆ ಎಂಬ ಫೋಟೋ ಎಡಿಟೆಡ್ ಆಗಿದೆ

“ಈ ಫೋಟೋ ನೋಡಿ ಪ್ರಧಾನಿ ಮೋದಿ ಅವರಿಗೆ ವ್ಯಕ್ತಿಯೊಂಬ್ಬ ತನ್ನ ಕೈಯಿಂದ ಅಶ್ಲೀಲ ಚಿಹ್ನೆಯನ್ನು ತೋರಿಸಿದ್ದಾನೆ. ಆ ಮೂಲಕ ಪ್ರಧಾನಿ ಮೋದಿ ಅವರಿಗೆ ಅಗೌರವವನ್ನು ತೋರಿಸಿದ್ದಾನೆ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರಿನಿಂದ ಕೈ ಬೀಸುತ್ತಿರುವುದನ್ನು ನೋಡಬಹುದಾಗಿದೆ. This hand spoke for ALL of us, lol!! 😂🖕 pic.twitter.com/0hIKfCUTd5 — S❄️oirse (@SaoirseAF) April 17, 2024 ಆದರೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಆಕ್ಷೇಪಾರ್ಹ ಸನ್ನೆ…

Read More
Modi

ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ಭಾರತವನ್ನು ಸೇರುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ, ಭಾರತದೊಂದಿಗೆ ಒಂದಾಗುವ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಪ್ರತಿಪಾದಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂದು ಕಾಲದಲ್ಲಿ ಮೂಲಭೂತವಾದಿಗಳು, ಕಲ್ಲುಗಳು ಮತ್ತು ಬಂದೂಕುಗಳ ಬಗ್ಗೆ ಮಾತನಾಡುತ್ತಿದ್ದವರು ಇಂದು 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಭಾರತವನ್ನು ಗೌರವಿಸಲು ಮತ್ತು…

Read More
ಪಾಕಿಸ್ತಾನ

Fact Check: ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಮೋದಿ ಘೋಷಣೆ ಎಂದು ಎಡಿಟೆಟ್ ವಿಡಿಯೋ ಹಂಚಿಕೆ

ಪ್ರಧಾನಿ ನರೇಂದ್ರ ಮೋದಿಯವರನ್ನು ಜಗತ್ತಿನ ಬಲಿಷ್ಠ ನಾಯಕ ಎಂಬಂತೆ ಬಿಂಬಿಸುವ ಸಲುವಾಗಿ ಅನೇಕ ಸುಳ್ಳು ಸುದ್ದಿಗಳನ್ನು, ಹೊಗಳಿಕೆಯ ಬರಹಗಳನ್ನು ಅವರ ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ದಿನನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಸುಳ್ಳೇಷ್ಟು ನಿಜವೆಷ್ಟು ಎಂದು ತಿಳಿಯದೇ ಜನ ಎಲ್ಲವನ್ನೂ ನಂಬಿಕೊಳ್ಳುತ್ತಿದ್ದಾರೆ. ಅದರಂತೆ ಈಗ, “ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಮೋದಿ.. ಮೋದಿ ಘೋಷಣೆ” ಎಂಬ ವಿಡಿಯೋ ತುಣುಕೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಇದು ಎಡಿಟೆಡ್ ವಿಡಿಯೋ ಆಗಿದ್ದು. ಪಾಕಿಸ್ತಾನದ…

Read More

Fact Check : ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪಾಲು ಎಂಬುದು ಸುಳ್ಳು

‘ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಈ ಸಂಗತಿಯನ್ನು ಮರೆತಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ತೆರಿಗೆಯನ್ನಷ್ಟೇ ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತಿದೆ. ಇದರಿಂದಲೇ ಎಲ್‌ಪಿಜಿ ಬೆಲೆ ವಿಪರೀತ ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಾಗಿ ನಾವು ಪಾವತಿಸುವ ಹಣದಲ್ಲಿ ಬಹುಪಾಲು ತೆರಿಗೆರೂಪದಲ್ಲಿ ರಾಜ್ಯ ಸರ್ಕಾರಕ್ಕೇ ಹೋಗುತ್ತದೆ’  ಎಂಬ ಸಂದೇಶವೊಂದು ವೈರಲ್‌ ಆಗುತ್ತಿದೆ. LPG Cylinder Price in 2014: ₹410LPG Cylinder…

Read More

Fact Check | ಬಾಯ್ಕಟ್ ಮಾಲ್ಡೀವ್ಸ್ ಹೆಸರಿನಲ್ಲಿ ಹರಿದಾಡುತ್ತಿವೆ ಸಾಲು ಸಾಲು ಸುಳ್ಳು ಸುದ್ದಿಗಳು

ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಬಾಯ್ಕಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹಲವು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳು ಯಾವುವು ಮತ್ತು ಅವುಗಳ ಹಿಂದಿನ ವಾಸ್ತವವೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಫ್ಯಾಕ್ಟ್‌ಚೆಕ್‌ ಸುಳ್ಳು 1: ಮಾಲ್ಡೀವ್ಸ್‌ನಲ್ಲಿ ಹಲವಾರು ಯುವತಿಯವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ನಡೆದಿದೆ. ಮಾಲ್ಡೀವ್ಸ್ ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದು, ಅಲ್ಲಿಗೆ ಹೋಗಬೇಡಿ. ಸತ್ಯ: ಈ ವಿಡಿಯೋ ಇಂಡೋನೇಷ್ಯಾದ…

Read More

Fact Check | ಮಾಲ್ಡೀವ್ಸ್ ಅಧ್ಯಕ್ಷ ಭಾರತೀಯರ ಕ್ಷಮೆಯಾಚಿಸಿದ್ದಾರೆಂಬ ಟ್ವೀಟ್‌ ಎಡಿಟೆಡ್ ಹೊರತು ನಿಜವಲ್ಲ

“ನನ್ನ ಸಚಿವರು, ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಬೇಜವಾಬ್ದಾರಿ ಹೇಳಿಕೆಯಿಂದಾಗಿ ನನ್ನ ಭಾರತೀಯ ಸ್ನೇಹಿತರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತಿದ್ದೇನೆ. ಭಾರತೀಯ ಸ್ನೇಹಿತರನ್ನು ಸ್ವಾಗತಿಸಲು ಎದುರು ನೋಡುತ್ತೇನೆ ಮತ್ತು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ಪ್ರಯತ್ನಿಸುತ್ತೇನೆ” ಎಂದು ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂಭ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನು ಇದೇ ಫೋಟೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವರು…

Read More
ಹಿಂದುತ್ವ Hindutva

ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ

‘ಹಿಂದುತ್ವ ಚುನಾವಣಾ ಆಟ ಆಡುವ ಕಾರ್ಡ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು 24 ವರ್ಷಗಳ ಹಿಂದೆ ಜೀ ನ್ಯೂಸ್‌ನವರು ನಡೆಸಿದ ನರೇಂದ್ರ ಮೋದಿಯವರ ಸಂದರ್ಶನದ ಹಳೆಯ ವಿಡಿಯೋ ಆಗಿದೆ. ಮೂಲ ಸಂದರ್ಶನದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿ “ಹಿಂದುತ್ವ ಕೇವಲ ಚುನಾವಣಾ ಆಟ ಆಡುವ ಕಾರ್ಡ್ ಅಲ್ಲ” ಎಂದು ಮೋದಿಯವರು ಹೇಳಿದ್ದಾರೆ. ಅವರ ಕೊನೆಯ ಪದ “ಅಲ್ಲ” ಎಂಬುದನ್ನು ತೆಗೆದುಹಾಕಿ, ಎಡಿಟ್…

Read More