Fact Check : ರತನ್ ಟಾಟಾರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದು ಸುಳ್ಳು
ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ ಎಂದು ಪೋಸ್ಟರ್ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್: ಈ ವೈರಲ್ ಪೋಸ್ಟರ್ನ ಕೀವರ್ಡ್ಗಳನ್ನು ಬಳಸಿಕೊಂಡು Googleನಲ್ಲಿ ಹುಡುಕಿದಾಗ, ರತನ್ ಟಾಟಾರವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಹಲವಾರು ಪ್ರಮುಖ ಸುದ್ದಿವಾಹಿನಿಗಳ ವರದಿಗಳು ಲಭಿಸಿವೆ. ಈ ಎಲ್ಲ ವರದಿಗಳಲ್ಲಿ ಹೆಚ್ಚಿನವು ಮಿಡ್-ಡೇ ಪ್ರಕಟಿಸಿದ ಲೇಖನದಿಂದ ಪತ್ತೆಯಾಗಿವೆ. ಇದು ಆಸ್ಪತ್ರೆಯ ಮೂಲಗಳಲ್ಲಿ ರತನ್ ಟಾಟಾರವರು…