ಸಿಯಾರಾಮ್ ಬಾಬ

Fact Check: 188 ವರ್ಷದ ವ್ಯಕ್ತಿ ಗುಹೆಯಲ್ಲಿ ಪತ್ತೆ ಎಂಬುದು ನಿಜವಲ್ಲ, ಇಲ್ಲಿದೆ ವಿವರ

ಇತ್ತೀಚೆಗೆ ಗುಹೆಯಲ್ಲಿ 188 ವರ್ಷದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ ಎಂಬ ವೀಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು. ಈ ವೀಡಿಯೋದಲ್ಲಿ ಜನರು ವೃದ್ಧರಿಗೆ ನಡೆಯಲು ಸಹಾಯ ಮಾಡುವುದನ್ನು ನೋಡಬಹುದು. ಎಕ್ಸ್‌(ಟ್ವಿಟರ್) ನಲ್ಲಿ ಈ ವಿಡಿಯೋ ತುಣುಕು ಸಾಕಷ್ಟು ವೈರಲ್ ಆಗಿದ್ದು “ಇವರು ಸಂತ ಸಿಯಾರಾಮ್ ಬಾಬಾ, ಹನುಮಾನ್ ಜಿಯ ಮಹಾನ್ ಭಕ್ತ. ಬಾಬಾ ಅವರ ವಯಸ್ಸು 121 ವರ್ಷಗಳು, ಈ ವಯಸ್ಸಿನಲ್ಲೂ ಬಾಬಾ ಕನ್ನಡಕವಿಲ್ಲದೆ 16-18 ಗಂಟೆಗಳ ಕಾಲ ನಿರಂತರವಾಗಿ ರಾಮಾಯಣವನ್ನು ಓದುತ್ತಾರೆ. ಮತ್ತು ತಮ್ಮದೇ ಆದ ಆಹಾರವನ್ನು…

Read More
ದಲಿತ

Fact Check: ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಸಂಬಂಧವಿಲ್ಲದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಜನರು ಹಲವಾರು ನಗ್ನ ಯುವಕರನ್ನು ಹೊಡೆಯುವುದನ್ನು ತೋರಿಸುತ್ತದೆ. ಚಮರ್ ಸಮುದಾಯದ ಸದಸ್ಯರು ಶುದ್ಧೀಕರಣಕ್ಕಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಉತ್ತರ ಪ್ರದೇಶದ ಮನುವಾದಿ ವ್ಯಕ್ತಿಗಳು ಅವರನ್ನು ಬೆತ್ತಲೆಯಾಗಿ ಥಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 12 ಸೆಪ್ಟೆಂಬರ್ 2024 ರಂದು ಪ್ರಕಟವಾದ ಧಮ್ನೋಡ್ ಸಮಾಚಾರ್ ಯೂಟ್ಯೂಬ್ ಚಾನೆಲ್ನಲ್ಲಿನ…

Read More
ಮಧ್ಯಪ್ರದೇಶ

Fact Check : ಮಧ್ಯಪ್ರದೇಶದಲ್ಲಿ ಪ್ರತಿಮೆಯನ್ನು ದ್ವಂಸಗೊಳಿಸಿರುವ ವೀಡಿಯೊವನ್ನು ಕರ್ನಾಟಕದ್ದು ಎಂದು ಹಂಚಿಕೆ

ಟ್ರ್ಯಾಕ್ಟರ್‌ನಿಂದ ಪ್ರತಿಮೆಯನ್ನು ಕೆಡವುತ್ತಿರುವ ವೀಡಿಯೊವನ್ನು, ಕರ್ನಾಟಕದಲ್ಲಿ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ ಟ್ರ್ಯಾಕ್ಟರ್ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸಲಾಗಿದೆ. ಮತ್ತು ಅಲ್ಲಿ ನೆರೆದಿದ್ದ ಜನರು ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಪ್ರತಿಮೆಯನ್ನು ದ್ವಂಸ ಮಾಡುತ್ತಿರುವ ದೃಶ್ಯವು ಕಂಡುಬಂದಿದೆ. ಕೊನೆಯಲ್ಲಿ, ಒಬ್ಬ ವ್ಯಕ್ತಿ ಪ್ರಚೋದನಕಾರಿ ಕೋಮುವಾದಿ ಹೇಳಿಕೆಯನ್ನು ಕೊಡುತ್ತಾನೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಘಟನೆಯ ಸ್ಕ್ರೀನ್‌ಶಾಟ್‌ ಪೋಟೊಗಳನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ ಈ ಘಟನೆ ಕರ್ನಾಟಕದ್ದಲ್ಲ…

Read More
ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More
ಹನುಮಂತ

Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್‌ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೃಹತ್ ಗದೆಯೊಂದು ಪತ್ತೆಯಾಗಿದ್ದು ಇದು ಹನುಮಂತನಿಗೆ ಸೇರಿದ್ದು ಮತ್ತು ಸೀತೆಯನ್ನು ರಕ್ಷಿಸುವಾಗ ಶ್ರೀಲಂಕಾದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅದನ್ನು ಬಿಡಲಾಗಿದೆ” ಎಂದು ಹೇಳಲಾಗುತ್ತಿದೆ. ಈ 2 ಟನ್ ಗದೆಯನ್ನು ಇತ್ತೀಚೆಗೆ ಶ್ರೀಲಂಕಾದಲ್ಲಿ ಉತ್ಖನನದ ಸಮಯದಲ್ಲಿ ಕಂಡುಹಿಡಿಯಲಾಗಿದೆ ಮತ್ತು ಕ್ರೇನ್ ಮೂಲಕ ಟ್ರೈಲರ್ಗೆ ಲೋಡ್ ಮಾಡುತ್ತಿರುವುದನ್ನು ತೋರಿಸಲಾಗಿದೆ ಎಂದು ಪೋಸ್ಟ್ ಹೇಳಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಯೂಟೂಬ್‌ನಲ್ಲಿ ಸಹ ಈ ಪೋಟೋವನ್ನು ಹಂಚಿಕೊಂಡು ಶ್ರೀಲಂಕಾದ ಬೆಟ್ಟಗಳಲ್ಲಿ ಆಂಜನೇಯನ ಗದೆ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More
ಜಾತಿ ದೌರ್ಜನ್ಯ

Fact Check: ಮಧ್ಯಪ್ರದೇಶದಲ್ಲಿ ಮಹಿಳೆಯರನ್ನು ಜೀವಂತ ಸಮಾಧಿ ಮಾಡಿದ ಘಟನೆ ಜಾತಿ ದೌರ್ಜನ್ಯದ ಪ್ರಕರಣವಲ್ಲ

ಮಧ್ಯಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಈ ಪೋಟೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ, ಪ್ರಕರಣದ ಸಂತ್ರಸ್ತರು ಮತ್ತು ಆರೋಪಿಗಳು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಇದು ಜಾತಿ ದೌರ್ಜನ್ಯದ ಪ್ರಕರಣವಲ್ಲ. ಇಬ್ಬರು ಮಹಿಳೆಯರನ್ನು ಮಮತಾ ಪಾಂಡೆ ಮತ್ತು ಆಶಾ…

Read More
ಮಧ್ಯ ಪ್ರದೇಶ

Fact Check: ರೈಲ್ವೆ ನಿಲ್ದಾಣದಲ್ಲಿ ಪೋಲಿಸ್ ಪೇದೆಯೊಬ್ಬರು ವೃದ್ಧನಿಗೆ ತಳಿಸಿರುವ ವೀಡಿಯೋ ಮಧ್ಯಪ್ರದೇಶದ್ದಾಗಿದ್ದು ಉತ್ತರ ಪ್ರದೇಶದ್ದಲ್ಲ

ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ಪೊಲೀಸ್ ಪೇದೆಯೊಬ್ಬರು ವೃದ್ಧೆಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಹಳೆಯ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. “ಉತ್ತರ ಪ್ರದೇಶವು ಜಂಗಲ್ ರಾಜ್‌ನತ್ತ ಸಾಗುತ್ತಿದೆ. ಪೊಲೀಸರು ಮುದುಕನನ್ನು ಹೇಗೆ ನಿರ್ದಯವಾಗಿ ಥಳಿಸುತ್ತಿದ್ದಾರೆ ಎಂಬುದನ್ನು ನೋಡಿ. ಅಮಾಯಕ ಮುಸ್ಲಿಮರ ಮನೆಗಳ ಮೇಲೆ ಗುಂಪು ಹತ್ಯೆ, ಬುಲ್ಡೋಜರ್ ಈಗ ಯುಪಿಯಲ್ಲಿ ಸಾಮಾನ್ಯವಾಗಿದೆ.” ಎಂಬ…

Read More

Fact Check | ಗ್ಯಾರಂಟಿ ಯೋಜನೆಯ ಹಣ ಕೇಳಿದ ಮಹಿಳೆಯನ್ನು ದಿಗ್ವಿಜಯ ಸಿಂಗ್‌ ಓಡಿಸಿದ್ದಾರೆ ಎಂಬುದು ಸುಳ್ಳು

“ಗ್ಯಾರಂಟಿ ಯೋಜನೆಯ ಹಣ ಕೇಳಲು ಬಂದ ಮಹಿಳೆಯೊಬ್ಬರನ್ನು ಕಾಂಗ್ರೆಸ್‌ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರು ನಿಂದಿಸಿ ಕಳುಹಿಸಿದ್ದಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. https://twitter.com/Modified_Hindu9/status/1800441400271704393 ಇನ್ನು ದಿಗ್ವಿಜಯ್ ಸಿಂಗ್‌ ತನ್ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯನ್ನು ಓಡಿಸುವಂತೆ ತನ್ನ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹಾಗೆಯೇ ‘ಈ ಮಹಿಳೆಗೆ…

Read More
ಬಿಜೆಪಿ

Fact Check: ಪ್ರಚಾರದ ವೇಳೆ ಬಿಜೆಪಿ ನಾಯಕರಿಗೆ ಚಪ್ಪಲಿ ಹಾರ ಹಾಕಿರುವುದು ಹಳೆಯ ವಿಡಿಯೋ

ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ಜರುಗಿದೆ. ಆದರೆ ಕಳೆದ ಕೆಲವು ವಾರಗಳಿಂದ ಅನೇಕ ಹಳೆಯ ವಿಡಿಯೋಗಳನ್ನು ಇತ್ತೀಚಿನದು ಎಂದು ಬಿಂಬಿಸಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಣಿಪುರದಲ್ಲಿ ಮತ ಕೇಳಲು ಹೋದ ಬಿಜೆಪಿ ನಾಯಕರನ್ನು ತಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನಲ್ಲಿ ನಡೆದ ಹಳೆಯ ಘಟನೆಯನ್ನು ಹಂಚಿಕೊಳ್ಳಲಾಗುತ್ತಿತ್ತು. ಈಗ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕನಿಗೆ ಜನರು ಚಪ್ಪಲಿ ಹಾರ ಹಾಕಿ ಸ್ವಾಗತಿಸಿದ್ದಾರೆ. ಎಂಬ ವಿಡಿಯೋ ಒಂದು ಎಕ್ಸ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು…

Read More
ಸರ್ಧಾರ್ ವಲ್ಲಭಬಾಯಿ ಪಟೇಲ್

Fact Check: ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಿಲ್ಲ

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಬಿಜೆಪಿಯೇತರ ರಾಜ್ಯಗಳ ಮೇಲೆ ಅದರಲ್ಲೂ ದಕ್ಷಿಣ ರಾಜ್ಯಗಳ ಮೇಲೆ ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಗುಂಪೊಂದು ಟ್ಯಾಕ್ಟ್‌ರ್ ಬಳಸಿ ತೆರವುಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, “ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಲಾಗಿದೆ.” ಎಂದು ಪ್ರತಿಪಾದಿಸಲಾಗುತ್ತಿದೆ.  ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಈ ಘಟನೆ 26 ಜನವರಿ 2024ರಲ್ಲಿ ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಕಾಡೋನ್…

Read More