Fact Check: ಕರ್ನಾಟಕದಲ್ಲಿ ಮುಸ್ಲಿಂ ವ್ಯಕ್ತಿಗೆ ಚೂರಿಯಿಂದ ಇರಿದ ಹಳೆಯ ಪ್ರಕರಣವನ್ನು ಇತ್ತೀಚೆಗೆ ಹರಿಯಾಣದಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ

ತೀವ್ರವಾಗಿ ಗಾಯಗೊಂಡ ವ್ಯಕ್ತಿಯು ನೆಲದ ಮೇಲೆ ಮಲಗಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋವನ್ನು ಹಿಂದೂ ದೇವತೆ ಸೀತೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹರಿಯಾಣದ ಮೇವಾತ್‌ನ ಮುಸ್ಲಿಂ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹಂಚಿಕೊಳ್ಳುವವರು ಹೇಳಿದ್ದಾರೆ.  ಪೋಸ್ಟ್ ಹಿಂಸಾತ್ಮಕ ಸ್ವರೂಪದಿಂದ ಇರುವುದರಿಂದ ನಾವು ಅದರ ಆರ್ಕೈವ್ ಅನ್ನು ಸೇರಿಸುವುದನ್ನು ತಪ್ಪಿಸಿದ್ದೇವೆ. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆ ಸುಳ್ಳಾಗಿದ್ದು, ಈ ಘಟನೆ 2022 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿಯನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು…

Read More

Fact Check| ಕೆಪಿಎಸ್‌ಸಿ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ

ಕರ್ನಾಟಕದಲ್ಲಿ ಆಗಸ್ಟ್ 27ರಂದು ನಡೆಯಲಿರುವ ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಣ್ಣ  ಗುಂಪೊಂದು ಆಗಸ್ಟ್ 24ರಂದು ಪ್ರತಿಭಟನೆ ನಡೆಸಿದ್ದು, ಇದರ ಫೋಟೋ ಬಳಸಿಕೊಂಡು “ಕರ್ನಾಟಕದಲ್ಲಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ, ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ‌. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಆಗುತ್ತಿರುವ ಹಗರಣಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಶೂಗಳನ್ನು ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ….

Read More

Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಕರ್ನಾಟಕದ ಸರ್ಕಾರಿ ಶಾಲೆಯೊಂದಕ್ಕೆ ಪ್ರಾಂಶುಪಾಲರಾಗಿ ಹಿಂದೂ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ, ಆದರೆ ಶಾಲೆಯ ಕ್ರಿಶ್ಚಿಯನ್ ಸಿಬ್ಬಂದಿ ಅವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ಬದಲಿಗೆ ಕ್ರೈಸ್ತ ಮಹಿಳೆಯನ್ನು ಆಕೆಯ ಜಾಗದಲ್ಲಿ ಕೂರಿಸಲಾಯಿತು. ವೀಡಿಯೋದಲ್ಲಿ, ಪಕ್ಕದಲ್ಲಿ ನಿಂತಿದ್ದ ಕೆಲವರು ಮಹಿಳೆಯನ್ನು ಬಲವಂತವಾಗಿ ಕುರ್ಚಿಯಿಂದ ಮೇಲಕ್ಕೆತ್ತುವುದನ್ನು ನಾವು ನೋಡಬಹುದು, ನಂತರ ಇನ್ನೊಬ್ಬ ಕ್ರಿಶ್ಚಿಯನ್‌ ಮಹಿಳೆಯನ್ನು ಪ್ರಾಂಶುಪಾಲೆಯ ಕುರ್ಚಿಯ ಮೇಲೆ ಕೂರಿಸಿ ಚಪ್ಪಾಳೆ ಹೊಡೆಯಲು ಇವರು ಪ್ರಾರಂಭಿಸಿದರು.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌…

Read More

Fact Check: ಕರ್ನಾಟಕದಲ್ಲಿ ಜೈನ ಮುನಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡಿದ್ದ ಸುಳ್ಳು ಮತ್ತೆ ವೈರಲ್ 

ಇತ್ತೀಚೆಗೆ, ಕರ್ನಾಟಕದಲ್ಲಿ ಜೈನ ಸನ್ಯಾಸಿಯೊಬ್ಬರ ಮೇಲೆ ಮುಸ್ಲಿಮರಿಂದ ಹಲ್ಲೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಕೈಗೆ ಗಾಯವಾಗಿರುವ ವ್ಯಕ್ತಿಯ ಫೋಟೋ ಒಂದು ಹರಿದಾಡುತ್ತಿದೆ. ಜೈನ ಮುನಿಯ ಮೇಲಿನ ದಾಳಿಕೋರರು ‘ಕಾಂಗ್ರೆಸ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಪ್ರತಿಪಾದಿಸಲಾಗುತ್ತಿದೆ. “ಇದು ಕಾಂಗ್ರೆಸ್‌ಗೆ ಮತ ಹಾಕುವ ಹಿಂದೂಗಳ ಭವಿಷ್ಯ” ಎಂದು ಸಂದೇಶದೊಂದಿಗೆ ಈ ಪೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಪೋಟೋವನ್ನು ಮೊದಲು ಹರಿಬಿಟ್ಟವರು ಸುಳ್ಳು ಸುದ್ಧಿ ಹರಡಲು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಕುಖ್ಯಾತಿ ಪಡೆದಿರುವ ಪೋಸ್ಟ್‌ ಕಾರ್ಡ್‌…

Read More

Fact Check | ಯಾದಗಿರಿಯಲ್ಲಿ ರೈತನೊಬ್ಬನ ಜಮೀನನ್ನು ವಕ್ಪ್ ಬೋರ್ಡ್ ವಶಪಡಿಸಿಕೊಂಡಿದೆ ಎಂಬುದು ಸುಳ್ಳು..!

“ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನು ದರ್ಗಾಕ್ಕೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ಹೇಳಿಕೊಂಡಿದೆ. ಇದೀಗ ಆ ಬಡ ರೈತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ವಕ್ಫ್‌ ಬೋರ್ಡ್‌ ಅಲ್ಲಿ ಈಗ ದರ್ಗಾ ನಿರ್ಮಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Another case of #LandJihaad Karnataka farmer is asking to give his land back. In Karnataka, Yadagiri DT, shabaad village, a farmer…

Read More

ಗದಗದಲ್ಲಿ 200 ಯುನಿಟ್‌ಗಿಂತ ಹೆಚ್ಚು ಕರೆಂಟ್‌ ಬಳಸಿರುವ ಕಾರಣಕ್ಕಾಗಿ ಹೆಚ್ಚಿನ ಬಿಲ್‌ ಬಂದಿದೆಯೇ ಹೊರತು, ಗೃಹಜ್ಯೋತಿ ಯೋಜನೆಯಿಂದಲ್ಲ

ನೆನ್ನೆ 16 ಮೇ 2024 ರಂದು ನ್ಯೂಸ್‌ 18 ಸುದ್ದಿ ಮಾಧ್ಯಮದವರು ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಕುರಿತಂತೆ ಲೇಖನವೊಂದನ್ನು ಪ್ರಕಟಿಸಿದ್ದು ಇದರಲ್ಲಿ “Gruha Jyothi: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕ್! 80-90 ರೂ ಬದಲಿಗೆ 400-500 ಕರೆಂಟ್ ಬಿಲ್​! ಸರ್ಕಾರದ ವಿರುದ್ಧ ಆಕ್ರೋಶ” ಎಂಬ ಶೀರ್ಷಿಕೆಯೊಂದಿಗೆ ಲೇಖನವೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ “ಗದಗ ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್ ಬರುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ ಕೇವಲ…

Read More
ಸಿದ್ದರಾಮಯ್ಯ

Fact Check: 2018ರಲ್ಲಿ ಸಿದ್ದರಾಮಯ್ಯನವರು 8 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿದ್ದಾರೆ ಎಂಬುದು ಸುಳ್ಳು

ಕಳೆದ ಫೆಬ್ರವರಿ ತಿಂಗಳಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ಕಾನೂನು ಹೊರಡಿಸಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈಗ ಇದನ್ನೇ ಹಿನ್ನಲೆಯಾಗಿಟ್ಟುಕೊಂಡು “ಇನ್ಮುಂದೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಇಲ್ವಂತೆ ! ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ನೀವು ಕನ್ನಡ ರಾಮಯ್ಯ ಅಲ್ಲ ಕನ್ನಡ ದ್ರೋಹಿ ರಾಮಯ್ಯ” ಎಂದು ಆರೋಪಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಇಲ್ಲ, ಕನ್ನಡ ಭಾವುಟವನ್ನು ರಾಜ್ಯದ ಅಧಿಕೃತ ಭಾವುಟವನ್ನಾಗಿ ಮಾಡುತ್ತೇವೆ ಎಂದಿದ್ದರು…

Read More

Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು

ಸಿಎಂ ಸಿದ್ದರಾಮಯ್ಯ ಅವರು ಲಂಡನ್‌ನಲ್ಲಿ ನಿರ್ಮಾಣವಾದ ಬಸವಣ್ಣನವರ ಪುತ್ಥಳಿಗೆ ಯಾವುದೇ ಅನುದಾನವನ್ನು ನೀಡಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ  ಅಂದಿನ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಅವರು ನೀಡಿದ್ದ ಅನುದಾನವನ್ನು ಕಡಿತಗೊಳಿಸಿದ್ದರು ಎಂಬ ವಿಡಿಯೋವನ್ನು  ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇನ್ನು ಇದೇ ವಿಡಿಯೋದಲ್ಲಿ ಹಲವು ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ಪುತ್ತಳಿಯ ಉದ್ಘಾಟನೆಯ ಸಂದರ್ಭದಲ್ಲಿ ಬಂದಿದ್ದರು ಎಂಬ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಅಂದು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಬರಲಿಲ್ಲ. ಆದರೆ ಇಂದು ಲಂಡನಿಗೆ…

Read More
ದುಬೈ

ದುಬೈನ ಸುನ್ನಿ ಮುಸ್ಲಿಮರ ಸಂಘ ಕರ್ನಾಟಕಕ್ಕೆ ಬರಲು ಮುಸ್ಲಿಮರಿಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ ಎಂಬುದು ಸಂಪೂರ್ಣ ಸುಳ್ಳು

ಇತ್ತೀಚೆಗೆ “ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲಿಸಲು ದುಬೈನಿಂದ ಮುಸ್ಲಿಮರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ” ಎಂದು ಸುಳ್ಳು ಹರಿಬಿಡಲಾಗಿತ್ತು. ಆದರೆ ದುಬೈನಲ್ಲಿ ಪ್ರವಾಹದ ಪರಿಸ್ಥಿತಿ ಇದ್ದ ಕಾರಣ ಎಲ್ಲಾ ವಿಮಾನ ಹಾರಾಟಗಳು ಸ್ಥಗಿತವಾಗಿದ್ದವು. ಮತದಾನಕ್ಕೆ ಆಗಮಿಸಲು ಸಹ ಕಷ್ಟಪಡುವಂತಿತ್ತು. ಈ ಕಾರಣಕ್ಕಾಗಿ ಕೇರಳದ ಕೆಲವು ಮುಸ್ಲಿಂ ಸಂಘಟನೆಗಳು ಸರ್ಕಾರದೊಟ್ಟಿಗೆ ಮಾತನಾಡಿ ಎರಡು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದರು. ಈಗ, “ದುಬೈನಲ್ಲಿರುವ ಸುನ್ನಿ ಮುಸ್ಲಿಮರ ಸಂಘ, ಚುನಾವಣೆಯಲ್ಲಿ ‘ಫ್ಯಾಸಿಸ್ಟ್ ಶಕ್ತಿ’ಗಳನ್ನು ಸೋಲಿಸಲು ಮತ್ತು ಕಾಂಗ್ರೆಸ್…

Read More

Fact Check | ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು

“ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ, ಈ ವೇಳೆ ಐದು ಜನ ಕಾಂಗ್ರೆಸ್‌ ಕಾರ್ಯಕರ್ತರ ಪಂಚೆ(ಲುಂಗಿ)ಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋಗಿದ್ದಾರೆ. ನೋಡಿ ವಾಸ್ತವದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ಕೂಡ ವಿರೋಧಿಗಳಿಗೆ ಪಾಠ ಕಲಿಸುತ್ತಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ” ಎಂದು ವಿಡಿಯೋದೊಂದಿಗೆ ಬರೆದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Lungi of five Congressmen caught fire while burning Modi's effigy…

Read More