Fact Check | ಕಿರಣ್‌ ದೇವಿ ಬಳಿ ಅಕ್ಬರ್‌ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ

ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಸಲುವಾಗಿ ಕೆಲವೊಂದು ಕಟ್ಟುಕತೆಯ ಪೋಸ್ಟ್‌ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಇಂತಹದ್ದೆ ಒಂದು ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಸಿ ಸುಳ್ಳಿನೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಿರಣ್ ದೇವಿ ಮಹಾರಾಣ ಪ್ರತಾಪ್ ನ ಸಹೋದರ, ಶಕ್ತಿಸಿಂಗ್‌ನ ಮಗಳು ಮತ್ತು ಭಿಕನೇರ್‌ನ ರಾಜ ಪೃಥ್ವಿರಾಜ್‌ ರಾಥೋರ್‌ನ ಮಡದಿ ಮೀನಾಬಜಾರ್ ನಲ್ಲಿ ಹೋಗತ್ತಿದ್ದಾಗ ಎದುರಿನಿಂದ ಬಂದ ಅಕ್ಬರ್ ತನ್ನ ಸೈನಿಕರಿಗೆ ಕಿರಣ್ ದೇವಿಯನ್ನು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಮಾಡಿದ, ಸೈನಿಕರು ಬರುವುದಕ್ಕೆ…

Read More

Fact Check | ಆಫ್ರಿಕನ್ ರಾಷ್ಟ್ರ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಎಂಬುದು ಸುಳ್ಳು

“ಆಫ್ರಿಕನ್ ರಾಷ್ಟ್ರವಾದ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಮತ್ತು ಅಲ್ಲಿರುವ ಮಸೀದಿಗಳನ್ನು ನಾಶಮಾಡುತ್ತಿದೆ. ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯಾದ ಬೆಳವಣಿಗೆ ನಡೆಯುತ್ತಿದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪತ್ರಿಕೆಗಳು ಹಾಗೂ ಮಸೀದಿಗಳನ್ನು ಧ್ವಂಸಗೊಳಿಸುವ  ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ರೀತಿಯ ಸುದ್ದಿಯನ್ನ ಕಳೆದ 10 ವರ್ಷಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. 2013ರಿಂದ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋಗಳಲ್ಲಿ ಮಸೀದಿಗಳನ್ನ ಧ್ವಂಸ ಮಾಡುತ್ತಿರುವುದನ್ನ ಕಾಣಬಹುದಾಗಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ…

Read More

Fact Check : ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳು

“ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಅಂದಭಕ್ತರ ವಿಶ್ವಗುರು ಈಗ ಭ್ರಷ್ಟಗುರು ಸತ್ಯ ತಡವಾಗುತ್ತೆ ಆದರೆ ಸತ್ಯ ಸಾಯಲ್ಲ” ಎಂಬ ಪೋಸ್ಟ್‌ವೊಂದು ಪೇಪರ್‌ ಕಟಿಂಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಇಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಫಾಕ್ಸ್ ನ್ಯೂಸ್ ಪಾಯಿಂಟ್‌ಗೂ ಮತ್ತು ಯುಎಸ್ ಮೂಲದ…

Read More