ಖರ್ಗೆ

ಖರ್ಗೆಯವರು ಭಾಷಣ ಮಾಡುವಾಗ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ

AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ದೇಶಾದ್ಯಂತ ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖರ್ಗೆಯವರು  ಭಾಷಣ ಮಾಡುವಾಗ ಪ್ರೇಕ್ಷಕರು ಮೋದಿ ಮೋದಿ ಎಂಬ ಘೋಷಣೆ ಕೂಗಿ, ಹಿಂಸೆ ನೀಡಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ವೈರಲ್ ಮಾಡಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರೆ ಖರ್ಗೆಯವರಿಗೆ ಗೌರವ ಕೊಡದೇ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್ ವೈರಲ್ ವಿಡಿಯೋದ…

Read More

Fact Check | ನರೇಗಾ ಯೋಜನೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ವೆಬ್‌ಸೈಟ್‌ ಲಿಂಕ್‌

“ನೀವು ಕೇವಲ ದ್ವಿತಿಯ ಪಿಯುಸಿ ಪಾಸ್‌ ಆಗಿದ್ದರೆ ಸಾಕು ನಿಮಗಾಗಿ ಉದ್ಯೋಗ ಕಾಯುತ್ತಿದೆ. ಸರ್ಕಾರದ ನರೇಗಾ ಯೋಜನೆಯ ಫಲಾನುಭವಿಗಳಾಗಿ. rojgarsevak.org ವೆಬ್‌ಸೈಟ್‌ನಲ್ಲಿ ಹಲವು ಉದ್ಯೋಗಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈಗಲೆ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕ ಪಾವತಿಸಿ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಉದ್ಯೋಗ ಮಾಹಿತಿಯ ಜೊತೆಗೆ ಕೆಲ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಕೂಡ ಕೇಳಲಾಗುತ್ತಿದೆ. ಈ ವೆಬ್‌ಸೈಟ್‌ ಕೂಡ ನೋಡಲು ಅಧಕೃತವಾದ ಸರ್ಕಾರಿ ವೆಬ್‌ಸೈಟ್‌ ಮಾದರಿಯಲ್ಲಿದ್ದು ಬಹುತೇಕರು ಇದು ಸರ್ಕಾರಿ ವೆಬ್‌ಸೈಟ್‌…

Read More

Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್‌ ಡೊನಾಲ್ಡ್‌ ಅನಾವರಣಗೊಳಿಸಿಲ್ಲ

“ಈ ಫೋಟೋ ನೋಡಿ ಮೆಕ್ ಡೊನಾಲ್ಡ್ ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಅನಾವರಣಗೊಳಿಸಿದೆ, ಹೀಗಾಗಿ ಮೆಕ್‌ ಡೊನನಾಲ್ಡ್ಸ್‌ನ ಎಲ್ಲಾಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು” ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವು ತಿಂಗಳುಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದು, ಮೆಕ್‌ ಡೊನಾಲ್ಡ್ಸ್‌ ವಿರುದ್ಧದ ಈ ಸುದ್ದಿ ಬಹಳ ವೈರಲ್‌ ಕೂ ಆಗುತ್ತಿದೆ. ಫ್ಯಾಕ್ಟ್‌ಚೆಕ್‌  ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ನಮ್ಮ ತಂಡ ಮೊದಲು ಮೆಕ್‌…

Read More

Fact Check | ನಾಟಕೀಯ ವಿಡಿಯೋವನ್ನ ಫ್ಲೈಟ್‌ನಲ್ಲಿ ನಡೆದ ನಿಜವಾದ ಗಲಾಟೆ ಎಂದು ತಪ್ಪಾಗಿ ಹಂಚಿಕೆ

“ತನ್ನ ಮಗಳಿಗೆ ಸಂಸ್ಕಾರ ಕಲಿಸಿಕೊಡಲಾಗದ ಅಪ್ಪನೊಬ್ಬ ಹಿರಿಯ ನಾಗರಿಕನೊಂದಿಗೆ ಎಷ್ಟು ಅಸಭ್ಯವಾಗಿ ಮಾತನಾಡುತ್ತಾ, ಜಗಳವಾಡುತ್ತಿದ್ದಾನೆ ನೋಡಿ.. ಭಾರತೀಯ ಏರ್‌ಲೈನ್ಸ್ ನಿಧಾ‌ನವಾಗಿ ಭಾರತೀಯ ರೈಲ್ವೇಯಾಗಿ ಬದಲಾಗುತ್ತಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. https://twitter.com/TheFake_Ascetic/status/1730545363096908119 ಈ ಕುರಿತು ಪರಿಶೀಲನೆ ನಡೆಸದೇ ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದು, ಹಲವು ಮಂದಿ ವಿವಿಧ ರೀತಿಯಾದ ತಲೆಬರಹದೊಂದಿಗೆ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಮಂದಿ ಇದು ಭಾರತೀಯ ಏರ್‌ಲೈನ್ಸ್‌ ಆಗಿರಲು ಸಾಧ್ಯವಿಲ್ಲ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದಾರೆ. ಈ…

Read More

Fact Check | ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ  “ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.” ಎಂಬ ಸುದ್ದಿ ವೈರಲ್‌ ಆಗಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವೈರಲ್‌ ಆಗಿರುವ ಫೋಟೋ ಹಾಗೂ ಈ ಕುರಿತು ಹಬ್ಬಿರುವ ಸುಳ್ಳು ಸುದ್ದಿ ಬಟಾ ಬಯಲಾಗಿದೆ. ಆದರೆ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನೇ ಬಹುತೇಕರು ನಂಬಿದ್ದು ಈ ವಿಚಾರವನ್ನು ಪರಿಶೀಲನೆ ನಡೆಸದೆ ಬಹುತೇಕರು ಶೇರ್‌ ಮಾಡಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ರೀತಿ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಬಹಳ…

Read More

Fact Check | 10 ನಿಮಿಷದಲ್ಲಿ ಸಕ್ಕರೆ ಖಾಯಿಲೆ ಗುಣಪಡಿಸಲು ಸಾಧ್ಯವಿಲ್ಲ, ಆ ಔಷಧಿಯ ಕುರಿತು ಟಿವಿ ಪ್ರಚಾರ ಸುಳ್ಳು

ಇತ್ತೀಚಿನ ದಿನಗಳಲ್ಲಿ ಸುಳ್ಳು ಜಾಹಿರಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಇದನ್ನೇ ನಂಬಿ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ ಇದೀಗ ಇಂತಹದ್ದೇ ಒಂದು ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲಿ ಖ್ಯಾತ ಸುದ್ದಿ ನಿರೂಪಕರಾದ ಅರ್ನಬ್‌ ಗೋಸ್ವಾಮಿ, ಸೇರಿದಂತೆ ದೇಶದ ಪ್ರಖ್ಯಾತ ಸುದ್ದಿ ವಾಹಿನಿಗಳ ನಿರೂಪಕರು 10 ನಿಮಿಷದಲ್ಲಿ ಮಧುಮೇಹ ಗುಣಪಡಿಸುವ ಔಷಧಿಯ ಕುರಿತು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದಾರೆ. ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಔಷಧಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಈ…

Read More

Fact Check | ಅರಿಶಿನ ಕಷಾಯ ಸೇವಿಸುವುದರಿಂದ ರಕ್ತ ಹೀನತೆ ತಡೆಯಬಹದು ಎಂಬುದು ಸುಳ್ಳು

“ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಅರಿಶಿನದಿಂದ ಹಲವು ಪ್ರಯೋಜನಗಳಿವೆ. ಅದೇ ರೀತಿ ಅರಿಶಿನದ ಕಷಾಯವನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹದು” ಎಂಬಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಜೊತೆಗೆ ಈ ಪೋಸ್ಟ್‌ನ್ನು ನಂಬಿ ಸಾಕಷ್ಟು ಮಂದಿ ತಮ್ಮ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅರಿಶಿನವನ್ನು ಭಾರತ ಸೇರಿದಂತೆ ಸಾಕಷ್ಟು ರಾಷ್ಟ್ರಗಳಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಉದ್ದೇಶಕ್ಕೆ ಬಳಸಲಾಗುತ್ತದೆ. ಆದರೆ ಅರಶಿನದಿಂದ ರಕ್ತಹೀನತೆಯನ್ನು ತಡೆಬಹುದು ಎಂಬ ವಿಚಾರದ ಕುರಿತು ಫ್ಯಾಕ್ಟ್‌ಚೆಕ್‌…

Read More

Fact Check | ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ಎಂಬ ವಿಡಿಯೋ ಉತ್ತರ ಪ್ರದೇಶದ್ದು..!

ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.. ಈ ವಿಡಿಯೋವನ್ನು ಶೇರ್‌ ಮಾಡಿ ಎಂಬ ತಲೆ ಬರಹದೊಂದಿದೆ ವೈರಲ್‌ ಆಗಿರುವ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಹೀಗೆ ತಲೆ ಬರಹದೊಂದಿಗೆ ವೈರಲ್‌ ಆಗಿರುವ ವಿಡಿಯೋ 14 ಫೆಬ್ರುವರಿ 2022ರದ್ದಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ಸರ್ಕಾರಿ ರಾಝಾ ಪಿಜಿ ಕಾಲೇಜಿನಲ್ಲಿರುವ ಬೂತ್‌ನಲ್ಲಿ ಈ ಇಬ್ಬರು ಮಹಿಳೆಯರು ನಕಲಿ ಮತ ಚಲಾಯಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ನಕಲಿ…

Read More

Fact Check | ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸೋಲಿಸಲು ಬಿಜೆಪಿ ಬೆಂಬಲಿಸುತ್ತೇನೆಂದು ಮಾಯಾವತಿ ಹೇಳಿಲ್ಲ

“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಬಿಜೆಪಿ ಸೇರಿದಂತೆ ನಾನು ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲವನ್ನು ನೀಡುತ್ತೇನೆ ಎಂದು ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಅವರು ಹೇಳಿಕೆ ನೀಡಿದ್ದಾರೆ” ಎಂಬ ಮಾಯಾವತಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ಬಿಎಸ್‌ಪಿ ಮಾಯಾವತಿಯವರು ಬಿಜೆಪಿಯ ಪರವಾಗಿ ಈ ಚುನಾವಣೆಯಲ್ಲಿ ಪರೋಕ್ಷವಾಗಿ ವಾಲಿಕೊಂಡಿದ್ದಾರೆ ಎಂಬ ತಲೆ ಬರಹದೊಂದಿಗೆ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ…

Read More

Fact Check : ಅಸಾದುದ್ದೀನ್ ಓವೈಸಿ ಜೊತೆ ಪ್ರಧಾನಿ ಮೋದಿ ಅವರು ಕುಳಿತಿರುವ ಫೋಟೋ ನಕಲಿ..!

“ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗೆ ತಯಾರಿ ನಡೆಸಲು ಅಸಾದುದ್ದೀನ್ ಓವೈಸಿಗೆ ತರಬೇತಿ ನೀಡುತ್ತಿರುವಾಗ ದೇಶದ ಯುವಜನತೆ ಜಾಗರೂಕರಾಗಿರಿ, ಅಧಿಕಾರಕ್ಕಾಗಿ ಏನು ಬೇಕಾದರು ಆಗ ಬಹುದು” ಎಂಬ ಬರಹವೊಂದು ಪ್ರಧಾನಿ ಮೋದಿ ಅವರು ಓವೈಸಿ ಅವರೊಂದಿಗೆ ಇರುವ ರೀತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರುತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಫೋಟೋದ ನಿಜ ರಹಸ್ಯ ಬಯಲಾಗಿದೆ. ಅಸಲಿಗೆ ಈ ವೈರಲ್‌ ಪೋಟೋಗಳು ಬೇರೆ ಬೇರೆಯದ್ದಾಗಿದ್ದು ಎರಡನ್ನೂ ಡಿಜಿಟಲ್‌ ಮಾದರಿಯಲ್ಲಿ ಒಂದೇ…

Read More