Fact Check | ಪಾಕಿಸ್ತಾನದಲ್ಲಿನ ಪ್ರವಾಹದ ವಿಡಿಯೋವನ್ನು ಆಂಧ್ರಪ್ರದೇಶದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಆಂಧ್ರಪ್ರದೇಶದಲ್ಲಿನ ವಿಜಯವಾಡದ ಪರಿಸ್ಥಿತಿ. ಅಲ್ಲಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು ಪರದಾಡುವಂತಾಗಿದೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರವಾಹ ಪೀಡಿತ ನೀರು ತುಂಬಿದ ಸ್ಥಳದಲ್ಲಿಯೇ ಜನರು ನಡೆದುಕೊಂಡು ಹೋಗುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಜನರು ನೀರಿನ ಮಧ್ಯೆ ಇರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಹಂಚಿಕೊಂಡು, ಆಂಧ್ರಪ್ರದೇಶದಲ್ಲಿ ಭೀಕರವಾದ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ….

Read More

Fact Check | ಹರಿಯಾಣದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ ಎಂಬ ಗ್ರಾಫಿಕ್‌ ಚಿತ್ರ ನಕಲಿಯಾಗಿದೆ

“ಹರಿಯಾಣದಲ್ಲಿ ಅಕ್ಟೋಬರ್ 5, 2024 ರಂದು 90 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಬರಲಿದೆ. ಬಹುಮತಕ್ಕೆ 46 ಸ್ಥಾನಗಳು ಬೇಕಾಗುತ್ತವೆ. ಈ ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 35-40 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರುವ ರಿಪಬ್ಲಿಕ್ ಟಿವಿ ಮತ್ತು ಪೋಲಿಂಗ್ ಏಜೆನ್ಸಿ ಮ್ಯಾಟ್ರಿಜ್ ನಡೆಸಿದ ಅಭಿಪ್ರಾಯ ಸಂಗ್ರಹವನ್ನು ತೋರಿಸುವ ಒಂದು ಗ್ರಾಫಿಕ್ ಪ್ಲೇಟ್‌ ಇಲ್ಲಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿ ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ” ಎಂದು…

Read More

Fact Check | ಇನ್‌ಸ್ಟಾಗ್ರಾಂ ಬಂದ್‌ ಆಗಲಿದೆ ಎಂಬುದು ಸುಳ್ಳು

“ಇದೇ ಸೆಪ್ಟೆಂಬರ್ 10 ರಂದು ಇನ್‌ಸ್ಟಾಗ್ರಾಂ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೇಶಾದ್ಯಂತ Instagram ಬ್ಯಾನ್ ಆಗಲಿದೆ. ಈ ವಿಚಾರವನ್ನು ಎಲ್ಲರಿಗೂ ಹಂಚಿಕೊಳ್ಳಿ.” ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವೊಂದು ಬರಹಗಳಲ್ಲಿ ಅತಿ ಶೀಘ್ರದಲ್ಲಿ ಟೆಲಿಗ್ರಾಂ ಬಂದ್ ಆಗುವ ಹಿನ್ನಲೆಯಲ್ಲಿ ಇನ್‌ಸ್ಟಾಗ್ರಾಂ ಕೂಡ ಬಂದ್ ಆಗಲಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಪೋಸ್ಟ್‌ಗಳನ್ನು ಗಮನಿಸಿದ ಜನಸಾಮಾನ್ಯರು ಕೂಡ ಇದು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ…

Read More

Fact Check | ಬಾಂಗ್ಲಾದಲ್ಲಿ ಪರಿಹಾರ ನೀಡುವ ನೆಪದಲ್ಲಿ ಹಿಂದೂ ಬಾಲಕನ ತಾಯತ ತೆಗೆಯಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಇಲ್ಲಿ ಹಿಂದೂ ಬಾಲಕನೊಬ್ಬನ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿದ್ದಾನೆ. ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟಿದ್ದಾನೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Bangladesh: Islamist Tears Down Hindu kid's Sacred Thread in Exchange for…

Read More

Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ

“ಇದು ಸೆಲ್ಜಾ ಅವರ ಹೇಳಿಕೆ ಹಿಂದೂ ದೇವರಾದ ರಾಮನ ಮೇಲೆ ಕಾಂಗ್ರೇಸ್‌ನವರ ದ್ವೇಷ ಎಂತಹದ್ದು ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ನವರು ಯಾವಾಗಲೂ ಭಗವಾನ್ ಶ್ರೀ ರಾಮನನ್ನು ಅವಮಾನಿಸುತ್ತಾರೆ. ರಾಮನ ಬಗ್ಗೆ ಇಂತಹ ಹೇಳಿಕೆಗಳನ್ನು, ಇಂತಹ ಭಾಷೆಯನ್ನು ಬಳಸಿರುವುದು ಹಿಂದುಗಳ ನಂಬಿಕೆಗೆ ಅಪಮಾನ ಮಾತ್ರವಲ್ಲ, ಎಲ್ಲಾ ಶ್ರೀರಾಮನ ಭಕ್ತರಿಗೂ ಮಾಡಿದ ಅವಮಾನವಾಗಿದೆ.” ಎಂದು ಸೆಲ್ಜಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಹರಿಯಾಣ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ. कांग्रेस ने हमेशा प्रभु श्रीराम जी का अपमान किया…

Read More

Fact Check | ಗಾಂಧಿಜೀ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಶಿಸಿದ್ದಾರೆ ಎಂಬ ಫೋಟೋ ಎಡಿಟೆಡ್‌ ಆಗಿದೆ

ಈ ಫೋಟೋ ನೋಡಿ.. ಇದೊಂದು ಅಪರೂಪದ ಫೋಟೋ, ಇದರಲ್ಲಿ ಮಹಾತ್ಮ ಗಾಂಧಿ ಅವರು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪಾದಗಳನ್ನು ಸ್ಪರ್ಷಿಸಿ ಅವರಿಂದ ಆಶಿರ್ವಾದಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ ಫೋಟೋಗಳನ್ನು ಸರ್ಕಾರ ನಮ್ಮಿಂದ ಮುಚ್ಚಿಟ್ಟಿದ್ದು ಯಾಕೆ? ಈ ಫೋಟೋವನ್ನು ಆದಷ್ಟು ಎಲ್ಲರಿಗೂ ಹಂಚಿಕೊಳ್ಳಿ ಎಂದು” ವೈರಲ್‌ ಫೋಟೋದೊಂದಿಗೆ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಫೋಟೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ಫೋಟೋ ಇರಬೇಕು ಎಂದು ಭಾವಿಸಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ…

Read More

Fact Check | ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ.. ಇದು ಪ್ರತಿಭಟನೆಯ ಸಂದರ್ಭದಲ್ಲಿ ತೆಗೆದಂತಹ ದೃಶ್ಯಾವಳಿಗಳು. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರೆಲ್ಲರೂ ಕೂಡ ಹಿಂದೂಗಳು. ಹೀಗೆ ಯಾವುದೋ ಒಂದು ವಿಚಾರದ ವಿರುದ್ಧವಾಗಿ ಪ್ರತಿಭಟಿಸುವ ಇವರು ಏಕಾಏಕಿ ಉದ್ರಿಕ್ತರಾಗಿ ಕಲ್ಲು ತೂರಾಟವನ್ನು ನಡೆಸಲು ಪ್ರಾರಂಭಿಸಿದರು. ಆದರೆ ಇದುವರೆಗೂ ಇವರ ಮನೆಗಳನ್ನು ಯಾವ ಕಾನೂನಿಂದಲೂ ಕೆಡವಲಾಗಿಲ್ಲ. ಇದು ಇಂದಿನ ಸರ್ಕಾರದ ಇಬ್ಬಗೆಯ ನೀತಿಯಲ್ಲದೆ ಮತ್ತಿನ್ನೇನು?” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ किया कपड़े देख कर अब पत्थर बाजो की पहचान हो रही हैं….

Read More

Fact Check | ಡೋನಾಲ್ಡ್‌ ಟ್ರಂಪ್‌ ಇತ್ತೀಚೆಗೆ “ನಾನು ಹಿಂದೂ ಮತ್ತು ಭಾರತದ ದೊಡ್ಡ ಅಭಿಮಾನಿ” ಎಂದು ಹೇಳಿಲ್ಲ

“ನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿ; ಅಧ್ಯಕ್ಷರಾಗಿ ಆಯ್ಕೆಯಾದರೆ, ಭಾರತೀಯ ಸಮುದಾಯವು ಶ್ವೇತಭವನದಲ್ಲಿ ನಿಜವಾದ ಸ್ನೇಹಿತನನ್ನು ಹೊಂದಿರುತ್ತದೆ ಎಂದು ಡೋನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ 2024ರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಈ ಬಾರಿ ಅಮೆರಿಕದಲ್ಲಿರುವ ಎಲ್ಲಾ ಅನಿವಾಸಿ ಭಾರತೀಯರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಮತ ಚಲಾಯಿಸಬೇಕು, ಆ ಮೂಲಕ ಭಾರತ ಮತ್ತು ಅಮೆರಿಕದ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನೆರವಾಗಬೇಕು” ಎಂದು ವಿಡಿಯೋವೊಂದರ ಜೊತೆ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ.  Donald Trump is big…

Read More

Fact Check | ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿಲ್ಲ

“ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ನಿಂದನೆ ಕಾರಣಗಳಿಂದ ಪ್ಯಾರಿಸ್‌ನಲ್ಲಿ ಬಂಧಿಸಲಾಯಿತು. ಹೀಗಾಗಿ ಈಗ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಷನ್ ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ  ಆಪಾದಿತ ಪಾತ್ರದ ಕಾರಣದಿಂದ ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ಈ ಸಂದರ್ಭದಲ್ಲಿ ಟೆಲಿಗ್ರಾಮ್‌ ಭಾರತದಲ್ಲಿ ಬ್ಯಾನ್‌ ಆಗುವ ಸಾಧ್ಯತೆ ಇದೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ, ಆದರೆ ಇದು ನಿಜವಲ್ಲ. ಭಾರತದಲ್ಲಿ ಟೆಲಿಗ್ರಾಮ್ ನಿಷೇಧದ ಸುದ್ದಿಯನ್ನು ಖಂಡಿಸಿ ಮತ್ತು ಟೆಲಿಗ್ರಾಮ್ ಅನ್ನು ನಿಷೇಧಿಸುವುದಿಲ್ಲ…

Read More

Fact Check | ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ದೇವರ ಫೋಟೋದೊಂದಿಗೆ ಶುಭಾಶಯ ಕೋರಿಲ್ಲ ಎಂಬುದು ಸುಳ್ಳು

“ಈ ಫೋಟೋಗಳನ್ನು ಗಮನಿಸಿ ಇದು ಯಾವುದೋ ಮುಸಲ್ಮಾನ ನಾಯಕ ಹಾಕಿದ ಶುಭಾಶಯಗಳ ಫೋಟೋವಲ್ಲ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ಶುಭಾಶಯ ತಿಳಿಸುವಾಗ ಹಾಕಿದ ಫೋಟೋ. ಈ ಯಾವ ಪೋಸ್ಟ್‌ಗಳಲ್ಲಿ ಕೂಡ ಹಿಂದೂ ದೇವರುಗಳ ಫೋಟೋ ಇಲ್ಲ. ರಾಹುಲ್‌ ಗಾಂಧಿ ಅವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದೂ ದೇವರುಗಳ ಫೋಟೋಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರು ಎಂದಿಗೂ ಹಿಂದೂ ದೇವರುಗಳ ಫೋಟೋವನ್ನು ಗೌರವಿಸಿಯೇ ಇಲ್ಲ” ಎಂಬ ರೀತಿಯಲ್ಲಿ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌…

Read More