Fact Check | ಕಮಲಾ ಹ್ಯಾರಿಸ್‌ ಟ್ರಂಪ್‌ ವಿರುದ್ಧ ಜಾಹಿರಾತು ನೀಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಮುಂಬರಲಿರುವ ಅಮೇರಿಕ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದ ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಒಮ್ಮಿಂದೊಮ್ಮೆಗೆ ಕಣದಿಂದ ಹಿಂದೆ ಸರಿದಿದ್ದಾರೆ, ತನ್ಮೂಲಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನಗೊಳಿಸಿದ್ದಾರೆ. ಇದರ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ “ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಟ್ರಂಪ್‌ ವಿರುದ್ಧ ಜಾಹಿರಾತು ಪ್ರಚಾರವನ್ನು ಆರಂಭಿಸಿದ್ದಾರೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  First official campaign ad…

Read More

Fact Check | ಅಮೆರಿಕ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆಸರಿದ ಬೈಡನ್‌ ಟೀಕಾಕಾರರನ್ನು ನಿಂದಿಸಿದ್ದಾರೆ ಎಂಬ ವಿಡಿಯೋ ಡೀಪ್‌ ಫೇಕ್‌

“2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಿಂದ ಬೈಡೆನ್‌ ಅವರು ಅಧಿಕೃತವಾಗಿ ಹೊರಬಿದ್ದ ನಂತರ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ ಅವರು ಟೀಕಾಕಾರರ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಿ ಟೀಕೆ ಮಾಡಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿಯಲ್ಲಿರುವವರು ಈ ರೀತಿಯ ಕೊಳಕು ಭಾಷೆಯನ್ನು ಬಳಸಿ ಟೀಕೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಮೆರಿಕದ ಜನರು ಡೆಮೊಕ್ರೆಟಿಕ್ಸ್‌ ಪಾರ್ಟಿಗೆ ಬುದ್ದಿ ಕಲಿಸಲಿದ್ದಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.  🚨Breaking Now🚨: President Joe Biden…

Read More

Fact Check | ಟ್ರಂಪ್‌ ಹತ್ಯೆಯನ್ನು ದಿ ಸಿಂಪ್ಸನ್ಸ್‌ ಕಾರ್ಟೂನ್‌ ಮೊದಲೇ ಊಹಿಸಿತ್ತು ಎಂಬುದು ಸುಳ್ಳು

“ಇದು ಅಮೆರಿಕದ ಪ್ರಖ್ಯಾತ ಕರ್ಟೂನ್‌ ಶೋ ದಿ ಸಿಂಪ್ಸನ್ಸ್‌. ಈ ಕಾರ್ಟೂನ್‌ ಭವಿಷ್ಯದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಮೊದಲೇ ಊಹಿಸುತ್ತದೆ. ಹೀಗಾಗಿ ಸಾಕಷ್ಟು ಖ್ಯಾತಿಗಳಿಸಿರುವ ಈ ಕಾರ್ಟೂನ್‌ ಶೋ, ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಯ ಕುರಿತು ಈ ಹಿಂದೆಯೇ ಊಹಿಸಿತ್ತು.” ಎಂದು ಕಾರ್ಟೂನ್‌  ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಾಗುತ್ತಿದೆ. ಇದರಲ್ಲಿ ಟ್ರಂಪ್‌ ರೀತಿಯ ಪಾತ್ರವೊಂದು ಶವದ ಪೆಟ್ಟಿಗೆಯಲ್ಲಿರುವುದನ್ನು ಕೂಡ ಕಾಣಬಹುದಾಗಿದೆ. The Simpsons were wrong about Donald Trump. People…

Read More

Fact Check: 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿಯುತ್ತಾರೆ ಎಂಬ ಹೇಳಿಕೆ ಸುಳ್ಳು

2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯಲು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ ಮತ್ತು ಅವರ ಮಗ ಹಂಟರ್ ಬೈಡನ್ ಅವರನ್ನು ಬದಲಾಯಿಸಲಿದ್ದಾರೆ ಎಂಬ ಹೇಳಿಕೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. “ಬ್ರೇಕಿಂಗ್ ನ್ಯೂಸ್: ಇಂದು ಕುಟುಂಬದೊಳಗೆ ಸುದೀರ್ಘ ಚರ್ಚೆಗಳ ನಂತರ, ಜೋ 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಮತ್ತು ಅವರ ಸ್ಥಾನಕ್ಕೆ ಹಂಟರ್ ಬೈಡನ್ ಅವರನ್ನು ನೇಮಿಸಲಾಗುವುದು. ಹಂಟರ್ ಅವರ ಉಪಾಧ್ಯಕ್ಷರಾಗಿ ಜಿಲ್ ಬೈಡನ್ ಇರಲಿದ್ದಾರೆ.” ಎಂದು ಪ್ರತಿಪಾದಿಸಿ ಎಕ್ಸ್ ಪ್ರೀಮಿಯಂ ಬಳಕೆದಾರರೊಬ್ಬರು ಜುಲೈ 4 ರಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ….

Read More

Fact Check | ಪ್ಯಾಲೆಸ್ಟೈನ್‌ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್‌ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕತ್ತೆಯ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ನಂತರ ಆ ಕತ್ತೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ಯಾಲೆಸ್ಟೈನ್‌ ಜನರನ್ನು ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ. ಇದೇ ಫೋಟೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಈ ವಿಚಾರದ ಕುರಿತು ಅವಲೋಕನ ನಡೆಸದೇ ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ….

Read More