Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ

ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲೇನಿದೆ? ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ….

Read More

Fact Check | ಇರಾನಿನ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ವೆಬ್ ಸಿರೀಸ್ ವಿಡಿಯೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” “ಮುಹಮ್ಮದ್ ಮೊಯಿನ್ ಅಲ್-ದಿನ್, 86 ವರ್ಷ. ಗದ್ದೆಯೊಂದರಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದು ಇಸ್ಲಾಮಿಕ್ ಸಂಸ್ಕೃತಿ, ಮತ್ತು ಇಸ್ಲಾಂನ ಪ್ರವಾದಿ ಮುಹಮ್ಮದ್ ಅವರು 6 ವರ್ಷದವಳಾದ ಆಯಿಷಾಳನ್ನು ವಿವಾಹವಾಗಿದ್ದರು. ಈ ಸಂಸ್ಕೃತಿಯನ್ನು ನಂಬುವ ಜನರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರು ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದಾರೆ.” ಎಂದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಿಸುತ್ತಾ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Be very careful lefties what…

Read More