ಮುಸ್ಲಿಂ

Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ತುಣುಕೊಂದು(ರೀಲ್‌) ಹರಿದಾಡುತ್ತಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ದಂಪತಿಗಳ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ತನ್ನ ಅಂಗಿಯನ್ನು ತೆಗೆದು ಸ್ನಾಯುಗಳನ್ನು ಪ್ರದರ್ಶಿಸುತ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಅರೆಬೆತ್ತಲಾದ ಪುರುಷನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ, ಅವನನ್ನು ಬಹುತೇಕ ಓಡಿಸುತ್ತಾಳೆ. ಈ ವೀಡಿಯೊವನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಹಂಚಿಕೊಳ್ಳುವವರು ಅಂಗಿ ಇಲ್ಲದ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಎಂದು ಪ್ರತಿಪಾದಿಸಲಾಗುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡು “ಅಬ್ದುಲ್” ತನ್ನ…

Read More

Fact Check : ಆಹಾರದಲ್ಲಿ ಮೂತ್ರ ಬೆರೆಸಿದ ಮನೆಕೆಲಸದಾಕೆ ಮುಸ್ಲಿಂ ಸಮುದಾಯಕ್ಕೆ ಸೇರಿದವಳು ಎಂಬುದು ಸುಳ್ಳು

“ಉಗುಳಿನ ಬಳಿಕ ಈಗ ಮೂತ್ರ ಜಿಹಾದ್‌ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮನೆಕೆಲಸದಾಕೆಯೊಬ್ಬಳು ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ. गाजियाबाद में रसोई के बर्तन में पेशाब करने का Video देखिए, बताइए इस महिला के जेहन में क्या है घरेलू…

Read More

Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ

ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲೇನಿದೆ? ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ….

Read More
ರಿಷಿಕೇಶ

Fact Check: ರಿಷಿಕೇಶದಲ್ಲಿ ರಾಫ್ಟಿಂಗ್ ಸಮಯದಲ್ಲಿ ನಡೆದಿರುವ ಗಲಾಟೆಗೆ ಯಾವುದೇ ಕೋಮು ಆಯಾಮವಿಲ್ಲ

ರಿಷಿಕೇಶದ ಗಂಗಾನದಿಯ ದಡದಲ್ಲಿ ಪ್ರವಾಸಿಗರು ಮತ್ತು ರಾಫ್ಟಿಂಗ್ ಮಾರ್ಗದರ್ಶಕರ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಪ್ರವಾಸಿಗರು ಮತ್ತು ರಾಫ್ಟಿಂಗ್ ಗೈಡ್‌ಗಳ ನಡುವಿನ ಘರ್ಷಣೆಯನ್ನು ಚಿತ್ರಿಸುವ ವೀಡಿಯೊ ಕೋಮುವಾದದ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮುಸ್ಲಿಂ ರಾಫ್ಟಿಂಗ್ ಮಾರ್ಗದರ್ಶಕರು ಹಿಂದೂಗಳ ಮೇಲೆ (ಇಲ್ಲಿ ಮತ್ತು ಇಲ್ಲಿ) ಹಲ್ಲೆ ನಡೆಸಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗುತ್ತಿದೆ. ऋषिकेश:- जेहादी हिंदुओ के हर पवित्र पर्यटन स्थल पर पहुंच रहे हैं, और वहां का सारा…

Read More
ಜೂಲಿಯಾ ಗಿಲ್ಲಾರ್ಡ್

Fact Check: ಆಸ್ಟ್ರೇಲಿಯ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಮುಸ್ಲೀಮರು ದೇಶ ತೊರೆಯಿರಿ ಎಂದು ತಾಕೀತು ಮಾಡಿದ್ದರು ಎಂಬುದು ಸುಳ್ಳು

ಆಸ್ಟ್ರೇಲಿಯದ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ಮುಸ್ಲಿಮರನ್ನು ದೇಶವನ್ನು ತೊರೆಯುವಂತೆ ತಾಕೀತು ಮಾಡಿದ್ದಾರೆ ಎನ್ನಲಾದ ಸಂದೇಶವೊಂದು ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. “ಷರಿಯಾ ಕಾನೂನನ್ನು ಒತ್ತಾಯಿಸುತ್ತಿರುವ ಮುಸ್ಲಿಮರು ಬುಧವಾರದೊಳಗೆ ಆಸ್ಟ್ರೇಲಿಯಾವನ್ನು ತೊರೆಯುವಂತೆ ಕೇಳಿಕೊಳ್ಳಲಾಗಿದೆ. ಏಕೆಂದರೆ ಆಸ್ಟ್ರೇಲಿಯಾವು ಮತಾಂಧ ಮುಸ್ಲಿಮರನ್ನು ಭಯೋತ್ಪಾದಕರು ಎಂದು ಪರಿಗಣಿಸುತ್ತದೆ. ಪ್ರತಿಯೊಂದು ಮಸೀದಿಯನ್ನು ಹುಡುಕಲಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಮುಸ್ಲಿಮರು ನಮ್ಮೊಂದಿಗೆ ಸಹಕರಿಸಬೇಕು.” ಎಂದು 2010 ರಿಂದ 2013 ರವರೆಗೆ ಆಸ್ಟ್ರೇಲಿಯಾದ 27 ನೇ ಪ್ರಧಾನಮಂತ್ರಿಯಾಗಿದ್ದ ಗಿಲ್ಲಾರ್ಡ್ ಅವರು ಹೇಳಲಾದ ಭಾಷಣದ ಒಂದು…

Read More
ISIS

Fact Check: ಸಿರಿಯಾ, ಪ್ಯಾಲೆಸ್ಟೈನ್ ಮುಸ್ಲಿಮರು, ಮುಸ್ಲಿಮೇತರರನ್ನು ಕೊಲ್ಲುತ್ತಿದ್ದಾರೆ ಎಂದು ISIS ಉಗ್ರರ ನರಮೇಧದ ವಿಡಿಯೋ ಹಂಚಿಕೆ

ಅನೇಕ ದಿನಗಳಿಂದ ISIS ಉಗ್ರರು ಅನೇಕ ಜನರ ತಲೆ ಕತ್ತರಿಸುವ ನರಮೇಧದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ” ಇದು ಸಿರಿಯಾದಲ್ಲಿ, ಪ್ಯಾಲೆಸ್ಟೈನ್ ನಲ್ಲಿ ಮುಸ್ಲಿಮರು ಮುಸ್ಲಿಂಯೇತರರನ್ನು ಕೊಲ್ಲುತ್ತಿರುವುದು.. ನಮ್ಮ ದೇಶದಲ್ಲೂ ಈ ರೀತಿಯ ಘಟನೆಗಳು ಈಗಾಗಲೇ ದೇಶ ವಿಭಜನೆಯ ಸಂದರ್ಭದಲ್ಲಿ, ಕಾಶ್ಮೀರದಲ್ಲಿ, ಹೈದರಾಬಾದಿನಲ್ಲಿ, ಕೊಲ್ಕತ್ತಾದಲ್ಲಿ ಮತ್ತು ದೇಶದ ಇನ್ನಿತರ ಭಾಗಗಳಲ್ಲಿ ಈಗಾಗಲೇ ನಡೆದಿದೆ.. ಈ ರಾಕ್ಷಸರು ಕಾಂಗ್ರೆಸ್ ಸಮರ್ಥಕರು, ಎಚ್ಚೆತ್ತುಕೊಳ್ಳಿ ಜಿಹಾದಿ ಮುಸ್ಲಿಮರ ಎಲ್ಲಾ ವ್ಯಾಪಾರಗಳನ್ನು ಬಹಿಷ್ಕರಿಸಿ.. ಇದನ್ನು ವೈರಲ್ ಮಾಡಿ..” ಎಂಬ ಸಂದೇಶದೊಂದಿಗೆ…

Read More
ಹಿಂದು

Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಜನರಲ್ಲಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಬಿತ್ತುವ ಸಲುವಾಗಿ ಅನೇಕ ಪ್ರಯತ್ನಗಳನ್ನು ನಮ್ಮ ದೇಶದಲ್ಲಿ ನಡೆಸಲಾಗುತ್ತಿದೆ. ಎಲ್ಲಿಯೇ ಜಗಳಗಳು, ಕೊಲೆ, ಹಲ್ಲೆಗಳು ನಡೆದರೂ ಅದಕ್ಕೆ ಧರ್ಮದ ಬಣ್ಣ ಹಚ್ಚುವುದು, ಆರೋಪಿ ಮುಸ್ಲಿಂ ಆಗಿದ್ದರೆ ಅದನ್ನು ದೊಡ್ಡ ಸಂಗತಿ ಮಾಡಿ ರಾಜಕೀಯವಾಗಿ ಬದಲಾಯಿಸಲು ಹುನ್ನಾರಗಳು ನಡೆಯುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಕುರಿತು ಇತರೆ ಜನರಲ್ಲಿ ಭಯ ಹುಟ್ಟಿಸಿ ನಾವು ನಿಮ್ಮ ರಕ್ಷಿಸುತ್ತೇವೆ ಎಂಬ ಸುಳ್ಳು ಭರವಸೆಗಳ ನೀಡಿ ಮತ ಪಡೆಯಲಷ್ಟೇ ಇಂತಹ ದ್ವೇಷದ ರಾಜಕಾರಣವನ್ನು ಹುಟ್ಟು…

Read More

Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ

ದೇಶದಲ್ಲಿ ಲೋಕಸಭಾ ಚುನಾವಣಾ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ನಡೆದಿದೆ. ಒಟ್ಟು ಏಳು ಹಂತದಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ನೆನ್ನೆಯಷ್ಟೇ ರಾಜಸ್ತಾನದ ಬನ್ಸವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಕೋಮುವಾದಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಭಾರತ ದೇಶದ ಪ್ರಧಾನ ಮಂತ್ರಿಗಳು ಧರ್ಮದ ಆಧಾರದ ಮೇಲೆ ಇಲ್ಲಿನ ಜನರನ್ನು ವಿಭಜಿಸಿ ಮಾತನಾಡುವುದು ಅಸಂವಿಧಾನಿಕ ನಡೆಯಾಗುತ್ತದೆ . ನಮ್ಮ ಸಂವಿಧಾನ ಭಾರತದ ಎಲ್ಲಾ ಧರ್ಮ, ಜಾತಿ, ಭಾಷಿಗರನ್ನು ಸಹ…

Read More
Yoga

ಯೋಗ ತರಬೇತುದಾರ ಸುಹೇಲ್ ಅನ್ಸಾರಿ 5 ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ ಎಂಬುದಕ್ಕೆ ಆಧಾರಗಳಿಲ್ಲ

ಇತ್ತೀಚೆಗೆ ಮುಸ್ಲೀಮರಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಕೋಮುದ್ವೇಷ ಹರಡುವ ಸಲುವಾಗಿ ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಮುಸ್ಲಿಂ ಪ್ರತಿಭೆಗಳನ್ನು ಕೇಂದ್ರವಾಗಿರಿಸಿಕೊಂಡು ಸುಳ್ಳು ಆರೋಪಗಳೊಂದಿಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ,”ಇವನ ಹೆಸರು ಸುಹೇಲ್ ಅನ್ಸಾರಿ.. ಇವನು ಯೋಗ ತರಬೇತುದಾರ. ಯೋಗ ಕಲಿಸುವ ರೀತಿ ನೋಡಿ, ಅಷ್ಟೇ ಅಲ್ಲ ಇವನು ಐದು ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ.” ಎಂಬ ಯೋಗ ತರಬೇತಿದಾರರೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್‌: ಸುಹೇಲ್ ಅನ್ಸಾರಿ ಅಡ್ವಾನ್ಸ್ಡ್‌ ಯೋಗ ತರಬೇತಿ…

Read More

Fact Check: ತುಮಕೂರಿನಲ್ಲಿ ರಥ ಸುಟ್ಟ ಆರೋಪಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಇತ್ತೀಚೆಗೆ ಭಾರತದಲ್ಲಿ ಯಾವ ದುರ್ಘಟನೆ ಸಂಭವಿಸಿದರೂ ಪೂರ್ವಾಗ್ರಹಪೀಡಿತರಾಗಿ ಅದನ್ನು ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವ ಚಾಳಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಸಹ ಇದಕ್ಕೆ ಬೆಂಬಲವಿತ್ತು ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ, “ತುಮಕೂರು ಜಿಲ್ಲೆಯ ನಿಟ್ಟೂರಿನ 800 ವರ್ಷಗಳ ಇತಿಹಾಸ ಇರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಿಂದುಗಳು ಮೌನವಾದಷ್ಟು ಅವರ ಅಟ್ಟಹಾಸ ಜಾಸ್ತಿಯಾಗುತ್ತದೆ.” ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹರಿಬಿಡಲಾಗಿದೆ….

Read More