Fact Check | ಬಾಂಗ್ಲಾದಲ್ಲಿ ಪರಿಹಾರ ನೀಡುವ ನೆಪದಲ್ಲಿ ಹಿಂದೂ ಬಾಲಕನ ತಾಯತ ತೆಗೆಯಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಇಲ್ಲಿ ಹಿಂದೂ ಬಾಲಕನೊಬ್ಬನ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿದ್ದಾನೆ. ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟಿದ್ದಾನೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Bangladesh: Islamist Tears Down Hindu kid's Sacred Thread in Exchange for…

Read More

Fact Check | ಬ್ರಿಟನ್‌ನ ಚುನಾವಣಾ ಫಲಿತಾಂಶದ ನಂತರ ಅಲ್ಲಿನ ಮುಸ್ಲಿಮರು ಟ್ರಾಫಿಕ್‌ ವಾರ್ಡನ್‌ಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಯುಕೆಯಲ್ಲಿ 2024 ರ ಚುನಾವಣೆಯಲ್ಲಿ ಲೇಬರ್ ಪಕ್ಷವು ಗೆದ್ದ ನಂತರ ಟ್ರಾಫಿಕ್ ವಾರ್ಡನ್ ಅನ್ನು ಮುಸ್ಲಿಂ ಪುರುಷರ ಗುಂಪು ಟಿಕೇಟ್‌ ನೀಡುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಅಲ್ಲಿನ ಕನ್ಸರ್ವೇಟಿವ್ ಪಕ್ಷದ ಸೋಲು ಮುಸ್ಲಿಮರಿಗೆ ಬಹಳ ಆನಂದವನ್ನು ಉಂಟು ಮಾಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಟ್ರಾಫಿಕ್‌ ವಾರ್ಡನ್‌ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ವೈರಲ್‌ ವಿಡಿಯೋವನ್ನು ಮುಸ್ಲಿಮರ ವಿರುದ್ಧ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು…

Read More

Fact Check | ಅಹ್ಮದ್‌ನಗರದಲ್ಲಿ ಜನರು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಮುಸ್ಲಿಂ ಕಾರ್ಮಿಕರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ” ಎಂದು ಹೇಳುವ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಮುಸಲ್ಮಾನರ ವಿರುದ್ಧ ದ್ವೇಷ ಹರಡುವಂತಹ ಕಮೆಂಟ್‌ಗಳು ಹಾಗೂ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. श्रीरामपूरच्या वार्ड क्रमांक २ म्हणजे वेस्टन चौक भागात महाविकास आघाडीचा जल्लोष साजरा करतांना मुस्लिम समाजकंटकांनी पाकिस्तानचा झेंडा फिरवला…#Loksabha_Election2024 #Result pic.twitter.com/HZ4XJSLM35 — Phir Ek Baar Devendra…

Read More

Fact Check | ರಾಜಸ್ಥಾನದಲ್ಲಿ ಮುಸ್ಲಿಮರಿಂದ ದಲಿತನ ಹತ್ಯೆ ಎಂಬುದು ಸುಳ್ಳು

ಇತ್ತೀಚೆಗೆ ರಾಜಸ್ತಾನದಲ್ಲಿನ ಲಿಕ್ಕರ್‌ ಮಾಫಿಯಾ ದಲಿತ ವ್ಯಕ್ತಿಯೊಬ್ಬ ಬೇರೊಂದು ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ, ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ  ಸಾಕಷ್ಟು ಮಂದಿ “ರಾಜಸ್ತಾನದಲ್ಲಿ ಮುಸಲ್ಮಾನರು ದಲಿತ ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈ ವಿಡಿಯೋವನ್ನು ಶೇರ್‌ ಮಾಡಿ.” ಎಂದು ಹಂಚಿಕೊಳ್ಳುತ್ತಿದ್ದಾರೆ. https://twitter.com/Modified_Hindu9/status/1797571851666980877 ಈ ವಿಡಿಯೋ ನೋಡಿದ ಸಾಕಷ್ಟು ಮಂದಿಗೆ ವಿಡಿಯೋದಲ್ಲಿನ ಕೊಲೆಗಡುಕರ ವಿಕೃತಿ ಎಂಥಹದ್ದು ಎಂಬುದು…

Read More

Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ

“ಹಿಂದೂ ಯುವತಿಯೊಬ್ಬಳು ಬುರ್ಖಾ ಧರಿಸಿಲ್ಲವೆಂದು ಆಕೆಗೆ ಬಸ್‌ನಲ್ಲಿದ್ದ ಯುವಕರು ಕಿರುಕುಳ ನೀಡಿದ್ದಾರೆ. ಈಕೆ ಅದನ್ನು ಕಂಡಕ್ಟರ್ ಬಳಿ ಪ್ರಶ್ನಿಸಿದಾಗ, ಆತನು ಕೂಡ ಈಕೆ ಬುರ್ಖಾ ಹಾಕಿಲ್ಲವೆಂದು ಬಸ್‌ನಿಂದ ಇಳಿಸಿದ್ದಾನೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. So now Hindus are being forced to wear Burqa ? In #Bangladesh, during the month of #Ramadan, unveiled Hindu women who do not…

Read More

Fact Check | ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹಾಕಿದ ಹಣ ಮುಸ್ಲಿಮರ ಪಾಲು ಎಂಬುದು ಸುಳ್ಳು

“ನಮ್ಮ ಹಿಂದೂಗಳು ಶಿರಡಿ ಸಾಯಿಬಾಬಾನಿಗೆ ಹಾಕಿದ ಹಣ ಎಲ್ಲಿಗೆ ಹೋಗುತ್ತೆ ಅಂತಾ ನೋಡಿ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಿ.. ಮುಸ್ಲಿಂ ಮುಖಂಡು ಈ ಹಣವನ್ನು ಸಂಗ್ರಹಿಸಿಕೊಳ್ಳುತ್ತಿರುವ ವಿಡಿಯೋ ನೋಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಇದನ್ನೇ ನಿಜವಾದ ಸುದ್ದಿ ಎಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕೆಲವು ಮುಸಲ್ಮಾನ ವ್ಯಕ್ತಿಗಳು ರಾಶಿ ರಾಶಿ ಹಣವನ್ನು ಚೀಲವೊಂದಕ್ಕೆ ತುಂಬಿಸುತ್ತಿರುವುದನ್ನು ಕಾಣ ಬಹುದಾಗಿದೆ. ಆದರೇ ಈ ಹಣ ಯಾವ ದೇಶಕ್ಕೆ ಸಂಬಂಧಿಸಿದ್ದು,…

Read More

Fact Check : ನನ್ನ ಪೂರ್ವಜರು ಮುಸ್ಲಿಮರು ಎಂದು ರಾಹುಲ್‌ ಗಾಂಧಿ ಹೇಳಿಲ್ಲ

“ನನ್ನ ಪೂರ್ವಜರು ಮುಸ್ಲಿಮರು,ಹಾಗಾಗಿ ನಾನೊಬ್ಬ ಅಪ್ಪಟ ಮುಸಲ್ಮಾನ, ನಾನೊಬ್ಬ ಮುಸಲ್ಮಾನ ಆಗಿರುವುದರಿಂದ ನಾನು ಪಾಕಿಸ್ತಾನಕ್ಕೆ ಸಹಾಯ  ಮಾಡುವುದು ಅಗತ್ಯವಿದೆ! ನಾನು ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಸಹಾಯ ಪ್ರಥಮವಾಗಿ ಮಾಡೇ ಮಾಡುತ್ತೇನೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನಕ್ಕೆ 8 ಸಾವಿರ ಕೋಟಿಗಳನ್ನು ಬಡ್ಡಿರಹಿತ ಸಾಲವಾಗಿ 50 ವರ್ಷಗಳಿಗೆ ನೀಡಲಿದ್ದೇವೆ” ಎಂಬ ಸಂದೇಶವೊಂದು ವೈರಲ್‌ ಆಗಿದೆ. राहुल गांधी जी ने कबूल किया के मैं मुसलमान हूं। चलो देर आए दरुस्त आए 🙏…

Read More