ಜವಹರಲಾಲ್ ನೆಹರು

Fact Check: ಜವಹರಲಾಲ್ ನೆಹರು ಮೂಲತಃ ಮುಸ್ಲಿಂ ಕುಟುಂಬದವರು ಎಂದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ಬೆಂಬಲಿಗರು

ಭಾರತದಲ್ಲಿ ಕಳೆದೊಂದು ದಶಕಗಳಿಂದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಮೊದಲ ಪ್ರಧಾನಿಯಾದ ಜವಹರಲಾಲ್‌ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಮಾಹಿತಿಗಳನ್ನು ಮತ್ತು ಅವರ ಕುರಿತು ದ್ವೇಷವನ್ನು ಬಿತ್ತಲಾಗುತ್ತಿದೆ. ಇಂದಿನ ಹಾಲಿ ಪ್ರಧಾನಿಯಾದ ನರೇಂದ್ರ ಮೋದಿಯವರು ಸಹ ತಮ್ಮ  ಅನೇಕ ಭಾಷಣಗಳಲ್ಲಿ ನೆಹರೂ ಅವರನ್ನು ಎಳೆದು ತಂದು ಇಂದಿನ ಭಾರತದ ಎಲ್ಲಾ ಸಮಸ್ಯೆಗೆ ನೆಹರು ಅವರೇ ಕಾರಣ ಎಂದು ಬಿಂಬಿಸಲು ನೋಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈಗ, “ಪ್ರತಿಯೊಬ್ಬರಿಗೂ ಸತ್ಯ ತಿಳಿದಿರಲಿ. ಪ್ರ 1: ತುಸು ರೆಹಮಾನ್…

Read More
ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More
Indira Gandhi

Fact Check: ಉಳುವವನೇ ಹೊಲದೊಡೆಯ ಕಾನೂನು ಮತ್ತು ಇಂದಿರಾಗಾಂಧಿ ಕುರಿತು ತಪ್ಪು ಮಾಹಿತಿ ಹಂಚಿಕೆ

ಭಾರತದಲ್ಲಿ ಭೂಸುಧಾರಣಾ ಶಾಸನವಾದ “ಉಳುವವನೇ ಹೊಲದೊಡೆಯ” ಕಾಯಿದೆಯೂ ಗೇಣಿ ಪದ್ಧತಿಯ ನಿವಾರಣೆಯ ಮೂಲಕ ಎರಡು ಪ್ರಮುಖ ಪರಿವರ್ತನೆಗಳನ್ನು ತರುವ ಗುರಿ ಹೊಂದಿತ್ತು. ಅವುಗಳಲ್ಲಿ ಒಂದು ಸಾಮಾಜಿಕ ಸಮಾನತೆ ಮತ್ತು ಇನ್ನೊಂದು ಕೃಷಿಯ ಅಭಿವೃದ್ಧಿ. ಸಾಮಾಜಿಕ ಸಮಾನತೆಗಾಗಿ ಗ್ರಾಮೀಣ ವಲಯದಲ್ಲಿ ಬಲಿಷ್ಠ ಭೂಮಾಲಿಕರ ಕಪಿಮುಷ್ಟಿಯಿಂದ ಶೋಷಿತ ಗೇಣಿದಾರರನ್ನು ಬಿಡುಗಡೆಗೊಳಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕ ವರ್ಗದವರಿಗೆ ಸೂಕ್ತ ಸಂಬಳ ಕೊಡಿಸುವ ಮೂಲಕ ಬಡತನದ ನಿವಾರಣೆಯನ್ನು ಮಾಡಬೇಕಾಗಿತ್ತು. ಉಳುವವನಿಗೇ ಭೂಮಿಯ ಒಡೆತನ ದೊರಕಿದಾಗ ಸಹಜವಾಗಿ ಆತ ಹೆಚ್ಚಿನ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿ ಉತ್ಪಾದನೆಯಲ್ಲಿ…

Read More
ಮುಸ್ಲಿಂ

Fact Check: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು

ಕಳೆದೊಂದು ದಶಕಗಳಿಂದ ಪಂಡಿತ್ ಜವಹರಲಾಲ್ ನೆಹರು ಅವರ ಕುಟುಂಬದ ಮೇಲೆ ಸುಳ್ಳು ಆಪಾದನೆಗಳಿಂದ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ನೆಹರೂ ಅವರ ಕುಟುಂಬ ಕಾಶ್ಮೀರಿ ಪಂಡಿತರಾಗಿರದೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರತಿಪಾದಿಸಿ ಪ್ರತಿದಿನ ಹಲವಾರು ಸುಳ್ಳುಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬಿಜೆಪಿ ಬೆಂಬಲಿಗರು ಮತ್ತು ಬಲಪಂಥಿಯರು ಈ ಸುಳ್ಳನ್ನೇ ಜನರ ನಡುವೆ ಹರಿಬಿಡುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ, “ಬುರ್ಖಾ ಮತ್ತು ಹಿಜಾಬ್‌ನಲ್ಲಿ ಇಂದಿರಾ ಖಾನ್ ಮತ್ತು ಮುಸಲ್ಮಾನರ ಕ್ಯಾಪ್ ಧರಿಸಿರುವ ರಾಹುಲ್ ಖಾನ್ . ಇವರು ಇಡೀ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ”…

Read More

ರಾಹುಲ್ ಗಾಂಧಿ ಹೆಸರು ರೌಲ್ ವಿನ್ಸಿ ಮತ್ತು ಪ್ರಿಯಂಕಾ ಗಾಂಧಿಯ ಮೂಲ ಹೆಸರು ಬಿಯಾಂ ಕಾ ವಾದ್ರಾ ಎಂಬುದು ಸುಳ್ಳು

ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ನೆಹರು ರವರ ಕುಟುಂಬವನ್ನು ಕೇಂದ್ರವಾಗಿರಿಸಿಕೊಂಡು ಕಳೆದೊಂದು ದಶಕಗಳಿಂದ ಸಾಕಷ್ಟು ಸುಳ್ಳು ಆಪಾಧನೆಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಆಡಳಿತರೂಡ ಸರ್ಕಾರಗಳು ಸಹ ಇಂತಹ ಅಪಪ್ರಚಾರ ಮಾಡುವವರ ಬೆನ್ನಿಗೆ ನಿಂತು ಬೆಂಬಲಿಸುತ್ತಿದೆ ಮತ್ತು ಈ ಕುಟುಂಬದ ಸದಸ್ಯರ ಮೇಲೆ ಜನರಲ್ಲಿ ದ್ವೇಷ ಬೆಳೆಯುವಂತೆ ನೋಡಿಕೊಳ್ಳುತ್ತಿವೆ. ಇತ್ತೀಚೆಗೆ ನೆಹರೂ ಕುಟುಂಬದವರು ಮೂಲತಃ ಮುಸ್ಲಿಂ ಸಮುದಾಯದವರು ಎಂಬ ಸುದ್ದಿಯನ್ನು ಎಲ್ಲೆಡೆ ಪ್ರಚಾರ ಪಡಿಸಲಾಗುತ್ತಿದೆ. “ನೆಹರು ಅಜ್ಜ ಒಬ್ಬ ಪಾರ್ಸಿ ಜನಾಂಗದ ಖಾನ್. ಬ್ರಿಟಿಷರ ಧಾಳಿಯಿಂದ ತಪ್ಪಿಸಿಕೊಳ್ಳಲು ಗಂಗಾಧರ್ ನೆಹರು…

Read More

Fact Check: 5000 ಹಿಂದೂ ಸಾಧು-ಸಂತರನ್ನು, ಇಂದಿರಾಗಾಂಧಿ ಗುಂಡಿಕ್ಕಿ ಹತ್ಯೆಗೈಸಿದ್ದರು ಎಂಬುದು ಸುಳ್ಳು

7 ನವೆಂಬರ್ 1966ರಂದು ಗೋಹತ್ಯೆ ನಿಷೇಧದ ಕಾನೂನಿಗಾಗಿ ಸಂಸತ್ ಭವನಕ್ಕೆ ನುಗ್ಗುತ್ತಿದ್ದ 5000 ಹಿಂದೂ ಸಾಧು-ಸಂತರನ್ನು, ಇಂದಿರಾಗಾಂಧಿ ಮುಸ್ಲಿಮರನ್ನು ಮೆಚ್ಚಿಸಲಿಕ್ಕಾಗಿ ಗುಂಡಿಕ್ಕಿ ಹತ್ಯೆಗೈದಿದ್ದರು. ನಿಮಗೆ ಗೊತ್ತೆ!? ನಮಗೆ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಕಥೆಯನ್ನು ಕಲಿಸಲಾಗುತ್ತದೆ ಹೊರತು ಇಂತಹ ಘಟನೆಯನ್ನಲ್ಲ! ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ರೀತಿಯ ಇನ್ನೊಂದು ಸುದ್ದಿಯೊಂದು ಹರಿದಾಡುತ್ತಿದ್ದು, 1996, ಗೋಪಾಷ್ಟಮಿ ( ಗೋವುಗಳನ್ನು ಪೂಜಿಸುವ ಹಬ್ಬ ) ತಿಥಿಯಂದು, 3-7 ಲಕ್ಷ ಸಾಧುಗಳು ಗೋಹತ್ಯೆ ನಿಲ್ಲಿಸುವ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ…

Read More