Fact Check | ಬಾಂಗ್ಲಾ ಬೌಲರ್‌ ಹಸನ್‌ ಮಹಮದ್‌ಗೆ ರೋಹಿತ್‌ ಶರ್ಮಾ ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳು

“ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ್ದ.. ಆದರೆ ದುರದೃಷ್ಟವಶಾತ್ ರೋಹಿತ್ ಶರ್ಮಾ ಅವನನ್ನು ಒದ್ದು ನಿಕಾಲ್,,, ಚಲ್ ಹಟ್ ಎಂದು ಹೇಳಿದ್ರು, ರೋಹಿತ್ ಅವರ ಈ ವರ್ತನೆ ವಿರುದ್ಧ ವಾರ್ತಾ ಭಾರತಿ, ಸಾಣೆಹಳ್ಳಿ ಮಠ ಸೇರಿದಂತೆ ಬಾಂಧವರ ಕೃಪಾಪೋಷಿತ ಜಾತ್ಯತೀತ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋ ಹಲವರು ವ್ಯಂಗ್ಯಯುತವಾಗಿ ಮತ್ತುಅಶ್ಲೀಲವಾಗಿ ಕೂಡ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ನಿಜವೆಂದು ನಂಬಿದರೆ, ಮತ್ತೆ ಕೆಲವರು ಇದೇ…

Read More

Video | ವಿಶ್ವಕಪ್‌ ಟ್ರೋಫಿಗೆ ಅಗೌರವ ಹಿನ್ನೆಲೆ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿದೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ “ಭಾರತ ವಿರುದ್ಧ ವಿಶ್ವಕಪ್‌ ಗೆದ್ದ ಬಳಿಕ ಆಸ್ಟ್ರೆಲಿಯಾದ ಕ್ರಿಕೆಟಿಗ ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಈಗ FIR ದಾಖಲಾಗಿದೆ.” ಎಂಬ ಪೋಸ್ಟ್‌ ವೈರಲ್‌ ಆಗಿದೆ. ಹಲವು ಮಂದಿ ಈ ವಿಚಾರವನ್ನು ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದಾರೆ. ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲು ಹಾಕಿ ಕುಳಿತ ನಂತರದಲ್ಲಿ ಅವರ ವಿರುದ್ಧ ಹಲವು ರೀತಿಯಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ…

Read More

Fact Check : ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನೆಯಾದದ್ದು ಸ್ಟೀವ್‌ ಸ್ಮಿತ್‌ ಪ್ರತಿಮೆ ಅಲ್ಲ

ಭಾರತದಲ್ಲಿ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದರ ಮಧ್ಯೆ ಕ್ರಿಕೆಟ್‌ ಜಗತ್ತಿಗೆ ಸಂಬಂಧಿಸಿದ್ದಂತೆ ಕುತೂಹಲಕಾರಿ ಬೆಳವಣಿಗೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈಗ ಕ್ರಿಕೆಟ್‌ ದೇವರು ಅಂತ ಕರೆಯಿಸಿಕೊಳ್ಳು ಸಚಿನ್‌ ತೆಂಡೂಲ್ಕರ್ ಅವರ ಪ್ರತಿಮೆಯ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಬೆಳವಣಿಗೆಯೊಂದು ನಡೆದಿದೆ. ನವಂಬರ್‌ ಒಂದರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಪ್ರತಿಮೆಯೊಂದನ್ನು ಅನಾವರಣಗೊಳಿಸಿದ್ದರು. ಇದೀಗ ಇದೇ ಪ್ರತಿಮೆಯ ಬಗ್ಗೆ ಸುಳ್ಳು ಸುದ್ದಿಯೊಂದು ವೈರಲ್‌ ಆಗದೆ.  “ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್‌ ದೇವರು…

Read More

Fact Check : ಉತ್ತರ ಪ್ರದೇಶದ ಅತ್ಯಾಧುನಿಕ ಸ್ಟೇಡಿಯಂ ಎಂದು ಕೆನಡಾದ ಸ್ಟೇಡಿಯಂನ ಫೋಟೋ ಮತ್ತು ವಿಡಿಯೋ ವೈರಲ್‌

ಭಾರತದಲ್ಲಿ ವಿಶ್ವಕಪ್‌ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇನ್ನು ಭಾರತದಲ್ಲಿ ಈ ಪಂದ್ಯಾವಳಿಗಳು ಆರಂಭವಾದ ಬೆನ್ನಲ್ಲೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಕೂಡ ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಆಟಗಾರರ ಬಗ್ಗೆ, ಪಂದ್ಯಗಳ ಬಗ್ಗೆ, ತೀರ್ಪುಗಾರರ ಬಗ್ಗೆ ಹೀಗೆ ಸಾಕಷ್ಟು ಮಂದಿಯ ಬಗ್ಗೆ ಮತ್ತು ಹಲವು ವಿಚಾರಗಳ ಬಗ್ಗೆ ಸುಳ್ಳುಗಳು ವ್ಯಾಪಕವಾಗಿ ಹರಡುತ್ತಿವೆ. ಇದೀಗ ಈ ಸುಳ್ಳುಗಳ ಸರಣಿ ಕ್ರಿಕೆಟ್‌ ಸ್ಟೇಡಿಯಂವೊಂದರ ಸುತ್ತ ಸುತ್ತಿಕೊಳ್ಳಲು ಪ್ರಾರಂಭವಾಗಿದೆ. ಭಾರತದ ಸ್ಟೇಡಿಯಂವೊಂದರ ಕುರಿತು ಸುಳ್ಳು ಸುದ್ದಿ ಹಬ್ಬಿಸೋದರ ಜೊತೆಗೆ ಕೆನಡಾದ…

Read More

ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿಲ್ಲ

ಇಸ್ರೇಲ್ ಮತ್ತು ಪ್ಯಾಲೆಸ್ಟೈನಿನ ಯುದ್ಧದ ಕಾವು ಎಲ್ಲಾ ರಂಗಗಳಿಗೂ ಹರಡಿದ್ದು , ಪ್ರಸ್ತುತ ನಡೆಯುತ್ತಿರುವ ICC ಏಕದಿನ ವಿಶ್ವಕಪ್ 2023ರಲ್ಲಿ ಸಹ ಪ್ರತಿಫಲಿಸುತ್ತಿದೆ. ಇತ್ತೀಚೆಗೆ ಭಾರತದ ಪ್ರತಿಭಾನ್ವಿತ ಬೌಲರ್ ಮಹಮ್ಮದ್ ಸಿರಾಜ್ ಪಾಕಿಸ್ತಾನದ ವಿರುದ್ಧ ಇಂಡಿಯಾದ ಗೆಲುವನ್ನು ಇಸ್ರೇಲಿನ ಜನರಿಗೆ ಅರ್ಪಿಸಿದ್ದಾರೆ ಎಂಬ ಟ್ವಿಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಕ್ಟೋಬರ್ 14, 2023 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದಲ್ಲಿ ಭಾರತವು…

Read More