Fact Check |ಇದು ವಿಚಿತ್ರ ಜೀವಿಯಲ್ಲ, ಇದರ ಹೆಸರು ಜೈಂಟ್ ಆಂಟ್‌ಈಟರ್‌.. ಗುಬ್ಬಿಗೆ ಬಂದಿದೆ ಎಂಬುದು ಸುಳ್ಳು!

“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇನ್ನೂ ಕೆಲವರು ಈ ಸುದ್ದಿಯಿಂದಾಗಿ ತುಮಕೂರು ಅರಣ್ಯವಲಯದ ಸುತ್ತಮುತ್ತಲು ವಾಸಿಸುವ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಾಣಿ ಯಾವುದು? ಇದು ನಿಜಕ್ಕೂ ವಿಚಿತ್ರ ಪ್ರಾಣಿಯೇ…

Read More