Fact Check | ವಿರಾಟ್‌ ಕೊಹ್ಲಿ ಗೋಮಾಂಸ ಸೇವಿಸಿದ್ದಾರೆ ಎಂಬ ರೆಸ್ಟೋರೆಂಟ್ ಬಿಲ್ ನಕಲಿ

“ಅಮೆರಿಕದ ಫ್ಲೋರಿಡಾದಲ್ಲಿರುವ ಗಾರ್ಡನ್ ರಾಮ್‌ಸೇ ರೆಸ್ಟೊರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಗೋಮಾಂಸ ಸೇವಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಬಿಲ್ ಈಗ ವೈರಲ್ ಅಗಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋದೊಂದಿಗೆ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇದೊಂದು ಸುಳ್ಳು ಸುದ್ದಿ ಎಂದು ಪ್ರತಿಪಾದಿಸಿದ್ದಾರೆ ವಿರಾಟ್‌ ಕೊಹ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ಸುಳ್ಳಿನೊಂದಿಗೆ ಹಂಚಿಕೊಳ್ಳಲಾಗಿರುವ  ಪೋಸ್ಟ್‌ https://twitter.com/DankShubhum/status/1733102791147536616 ಇನ್ನು ಕೆಲವೊಂದು ಪೋಸ್ಟ್‌ಗಳಲ್ಲಿ ವಿರಾಟ್‌ ಕೊಹ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ…

Read More

Fact Check | ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ  “ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.” ಎಂಬ ಸುದ್ದಿ ವೈರಲ್‌ ಆಗಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವೈರಲ್‌ ಆಗಿರುವ ಫೋಟೋ ಹಾಗೂ ಈ ಕುರಿತು ಹಬ್ಬಿರುವ ಸುಳ್ಳು ಸುದ್ದಿ ಬಟಾ ಬಯಲಾಗಿದೆ. ಆದರೆ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನೇ ಬಹುತೇಕರು ನಂಬಿದ್ದು ಈ ವಿಚಾರವನ್ನು ಪರಿಶೀಲನೆ ನಡೆಸದೆ ಬಹುತೇಕರು ಶೇರ್‌ ಮಾಡಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ರೀತಿ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಬಹಳ…

Read More

Video | ವಿಶ್ವಕಪ್‌ ಟ್ರೋಫಿಗೆ ಅಗೌರವ ಹಿನ್ನೆಲೆ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿದೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ “ಭಾರತ ವಿರುದ್ಧ ವಿಶ್ವಕಪ್‌ ಗೆದ್ದ ಬಳಿಕ ಆಸ್ಟ್ರೆಲಿಯಾದ ಕ್ರಿಕೆಟಿಗ ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಈಗ FIR ದಾಖಲಾಗಿದೆ.” ಎಂಬ ಪೋಸ್ಟ್‌ ವೈರಲ್‌ ಆಗಿದೆ. ಹಲವು ಮಂದಿ ಈ ವಿಚಾರವನ್ನು ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದಾರೆ. ಮಿಚೆಲ್‌ ಮಾರ್ಷ್‌ ಅವರು ವಿಶ್ವಕಪ್‌ ಟ್ರೋಫಿ ಮೇಲೆ ಕಾಲು ಹಾಕಿ ಕುಳಿತ ನಂತರದಲ್ಲಿ ಅವರ ವಿರುದ್ಧ ಹಲವು ರೀತಿಯಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ…

Read More

Fact Check | ರೋಹಿತ್‌ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಸುಳ್ಳು.!

ಏಕದಿನ ವಿಶ್ವಕಪ್‌ ಕಿಕೆಟ್‌ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ ತಂಡದ ಆಟಗಾರರ ಮೇಲೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿಯೆಂದರೆ ರೋಹಿತ್‌ ಶರ್ಮಾ ಅವರ ನಿವೃತ್ತಿ ವಿಚಾರ ಇದಕ್ಕೆ ಸಂಬಂಧ ಪಟ್ಟಂತೆ ಪೋಸ್ಟರ್‌ವೊಂದು ವೈರಲ್‌  ಕೂಡ ಆಗಿತ್ತು ಅದರಲ್ಲಿ “ಬ್ರೆಕಿಂಗ್‌ ನ್ಯೂಸ್‌…..

Read More

Fact Check : ಮ್ಯಾಕ್ಸ್‌ವೆಲ್ ಜಾಗದಲ್ಲಿ ಕೊಹ್ಲಿ ಇದ್ದಿದ್ದರೆ ಸಿಂಗಲ್ ತೆಗೆದುಕೊಳ್ಳುತ್ತಿದ್ದರು ಎಂದು ಗೌತಮ್ ಗಂಭೀರ್ ಹೇಳಿಲ್ಲ

“ಒಂದು ವೇಳೆ ವಿರಾಟ್‌ ಕೊಹ್ಲಿ 195 ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದರೆ, ಅಲ್ಲಿ ದ್ವಿಶತಕ ಬಾರಿಸುವ ಸಲುವಾಗಿ ಅವರು ಸಿಂಗಲ್ಸ್‌ ತೆಗೆದುಕೊಳ್ಳುತ್ತಿದ್ದರು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೆ ಮಾಡಲಿಲ್ಲ. ಅವರು ಸಿಕ್ಸರ್‌ ಬಾರಿಸಿದರು. ಆದ್ದರಿಂದಲೇ ಅವರು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ವೈಯಕ್ತಿಕ ಮೈಲುಗಲ್ಲುಗಳ ಸಲುವಾಗಿ ಆಡುವವರಲ್ಲ” ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭಿರ್‌ ಅವರು ಹೇಳಿದ್ದಾರೆ ಎಂದು  ವ್ಯಾಪಕವಾಗಿ ಸುದ್ದಿಯೊಂದು ಹರಡುತ್ತಿದೆ. ಈ ಸುದ್ದಿಯ ಪೂರ್ವಪರವನ್ನು ಅಳೆಯದೆ, ತಿಳಿಯದೆ ಯಥಾವತ್ತಾಗಿ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ….

Read More

Fact Check : ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್‌ ಹಾಕಿದ್ದಾರೆ ಎಂಬುದು ಸುಳ್ಳು

ಭಾರತದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಗಾಜಾವನ್ನು ಬೆಂಬಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವ್ಯಾಪಕವಾಗಿ ಹರಡಲಾಗುತ್ತಿದೆ. ಆ ಸುದ್ದಿಯನ್ನು ವ್ಯಾಪಾಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಆ ಪೋಸ್ಟ್‌ನ ತಲೆಬರಹದಲ್ಲಿ “ಕೊಹ್ಲಿ ತಮ್ಮ ಏಕದಿನ ಪಂದ್ಯದಲ್ಲಿ 49ನೇ ಶತಕದ ಸಿಡಿಸಿದ ನಂತರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “ಇನ್‌ ಸಾಲಿಡರಿಟಿ ವಿಥ್‌ ಗಾಜಾ” ಎಂಬ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಪ್ಯಾಲೆಸ್ಟೈನ್‌ ಬೆಂಬಲಕ್ಕೆ ನಿಂತಿದ್ದಾರೆ.” ಎಂದು ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಮತ್ತು ಪೋಸ್ಟ್‌ನ ಕುರಿತು…

Read More

Fact Check : ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನೆಯಾದದ್ದು ಸ್ಟೀವ್‌ ಸ್ಮಿತ್‌ ಪ್ರತಿಮೆ ಅಲ್ಲ

ಭಾರತದಲ್ಲಿ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದರ ಮಧ್ಯೆ ಕ್ರಿಕೆಟ್‌ ಜಗತ್ತಿಗೆ ಸಂಬಂಧಿಸಿದ್ದಂತೆ ಕುತೂಹಲಕಾರಿ ಬೆಳವಣಿಗೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈಗ ಕ್ರಿಕೆಟ್‌ ದೇವರು ಅಂತ ಕರೆಯಿಸಿಕೊಳ್ಳು ಸಚಿನ್‌ ತೆಂಡೂಲ್ಕರ್ ಅವರ ಪ್ರತಿಮೆಯ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಬೆಳವಣಿಗೆಯೊಂದು ನಡೆದಿದೆ. ನವಂಬರ್‌ ಒಂದರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಪ್ರತಿಮೆಯೊಂದನ್ನು ಅನಾವರಣಗೊಳಿಸಿದ್ದರು. ಇದೀಗ ಇದೇ ಪ್ರತಿಮೆಯ ಬಗ್ಗೆ ಸುಳ್ಳು ಸುದ್ದಿಯೊಂದು ವೈರಲ್‌ ಆಗದೆ.  “ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್‌ ದೇವರು…

Read More

Fact Check : ಉತ್ತರ ಪ್ರದೇಶದ ಅತ್ಯಾಧುನಿಕ ಸ್ಟೇಡಿಯಂ ಎಂದು ಕೆನಡಾದ ಸ್ಟೇಡಿಯಂನ ಫೋಟೋ ಮತ್ತು ವಿಡಿಯೋ ವೈರಲ್‌

ಭಾರತದಲ್ಲಿ ವಿಶ್ವಕಪ್‌ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇನ್ನು ಭಾರತದಲ್ಲಿ ಈ ಪಂದ್ಯಾವಳಿಗಳು ಆರಂಭವಾದ ಬೆನ್ನಲ್ಲೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಕೂಡ ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಆಟಗಾರರ ಬಗ್ಗೆ, ಪಂದ್ಯಗಳ ಬಗ್ಗೆ, ತೀರ್ಪುಗಾರರ ಬಗ್ಗೆ ಹೀಗೆ ಸಾಕಷ್ಟು ಮಂದಿಯ ಬಗ್ಗೆ ಮತ್ತು ಹಲವು ವಿಚಾರಗಳ ಬಗ್ಗೆ ಸುಳ್ಳುಗಳು ವ್ಯಾಪಕವಾಗಿ ಹರಡುತ್ತಿವೆ. ಇದೀಗ ಈ ಸುಳ್ಳುಗಳ ಸರಣಿ ಕ್ರಿಕೆಟ್‌ ಸ್ಟೇಡಿಯಂವೊಂದರ ಸುತ್ತ ಸುತ್ತಿಕೊಳ್ಳಲು ಪ್ರಾರಂಭವಾಗಿದೆ. ಭಾರತದ ಸ್ಟೇಡಿಯಂವೊಂದರ ಕುರಿತು ಸುಳ್ಳು ಸುದ್ದಿ ಹಬ್ಬಿಸೋದರ ಜೊತೆಗೆ ಕೆನಡಾದ…

Read More

ಭಾರತಕ್ಕೆ ಬಂದ ಎಲ್ಲಾ ಪಾಕ್ ಕ್ರಿಕೆಟಿಗರಿಗೂ ಕೇಸರಿ ಶಾಲು ಹಾಕಿ ಸ್ವಾಗತಿಸಿಲ್ಲ

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಕೂಡ ಆಗಿಮಿಸಿದೆ. ಇದೇ ಬುಧವಾರ ತಡರಾತ್ರಿ  ಹೈದರಾಬಾದ್‌ನಲ್ಲಿರುವ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಸದಸ್ಯರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ. ಆದರೆ ಇದರ ಹಿಂದಿರುವ ಅಸಲಿ ವಿಚಾರವೇ ಬೇರೆಯದ್ದಿದೆ. ಇದನ್ನ ತಿಳಿಯದ ದೇಶದ ಕೆಲ ಪ್ರಮುಖ ದೃಶ್ಯ ಮಾಧ್ಯಮಗಳು ಹಾಗೂ ದೈನಂದಿನ ಪತ್ರಿಕೆಗಳು ಯತಾವಥ್‌ ಆಗಿ…

Read More