ಹನುಮಂತ

Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್‌ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೃಹತ್ ಗದೆಯೊಂದು ಪತ್ತೆಯಾಗಿದ್ದು ಇದು ಹನುಮಂತನಿಗೆ ಸೇರಿದ್ದು ಮತ್ತು ಸೀತೆಯನ್ನು ರಕ್ಷಿಸುವಾಗ ಶ್ರೀಲಂಕಾದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅದನ್ನು ಬಿಡಲಾಗಿದೆ” ಎಂದು ಹೇಳಲಾಗುತ್ತಿದೆ. ಈ 2 ಟನ್ ಗದೆಯನ್ನು ಇತ್ತೀಚೆಗೆ ಶ್ರೀಲಂಕಾದಲ್ಲಿ ಉತ್ಖನನದ ಸಮಯದಲ್ಲಿ ಕಂಡುಹಿಡಿಯಲಾಗಿದೆ ಮತ್ತು ಕ್ರೇನ್ ಮೂಲಕ ಟ್ರೈಲರ್ಗೆ ಲೋಡ್ ಮಾಡುತ್ತಿರುವುದನ್ನು ತೋರಿಸಲಾಗಿದೆ ಎಂದು ಪೋಸ್ಟ್ ಹೇಳಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಯೂಟೂಬ್‌ನಲ್ಲಿ ಸಹ ಈ ಪೋಟೋವನ್ನು ಹಂಚಿಕೊಂಡು ಶ್ರೀಲಂಕಾದ ಬೆಟ್ಟಗಳಲ್ಲಿ ಆಂಜನೇಯನ ಗದೆ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check: ತೆಲಂಗಾಣದಲ್ಲಿ ಮುಸ್ಲಿಮರು ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ ಎಂಬುದು ಸುಳ್ಳು

ಕಳೆದ ಐದಾರು ವರ್ಷಗಳಿಂದ ಅನೇಕ ಕಡೆ ಹನುಮಂತನ ವಿಗ್ರಹವನ್ನು ಮುಸ್ಲಿಮರು ಹೊಡೆದು ಹಾಕಿದ್ದಾರೆ ಅಥವಾ ಅಪಮಾನ ಎಸಗಿದ್ದಾರೆ ಎಂದು ಸುಳ್ಳು ಹಬ್ಬಿಸಿ ಕೋಮುಗಲಭೆಗೆ ಪ್ರಚೋದನೆ ನೀಡಲಾಗಿತ್ತು. ನಂತರ ಇಂತಹ ಆರೋಪ ಸುಳ್ಳು ಎಂದು ಪತ್ತೆ ಆದ ನಂತರ ಇದರ ಸುದ್ದಿಯನ್ನು ಕೈಬಿಟ್ಟಿದ್ದರು. ಅಂತಹ ಕೆಲವು ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈಗ ಅದೇ ರೀತಿ, “ನಿನ್ನೆ ಕಾಂಗ್ರೆಸ್ ಪಕ್ಷದ ಸಿಎಂ ರೇವಂತ್ ರೆಡ್ಡಿ ಆಯೋಜಿಸಿದ್ದ ಇಫ್ತಾರ್ ಕೂಟದ ನಂತರ ಅಲ್ಲಿನ ಮುಸಲ್ಮಾನ ಸಮಾಜದವರು ಹನುಮಾನ್…

Read More

Fact Check: ಪ್ರಾಣ ಪ್ರತಿಷ್ಟೆಯ ದಿನ ಹನುಮಾನ್ ವೇಷ ಹಾಕಿದ್ದಕ್ಕೆ ಬಾಲಕ ಮೇಲೆ ಅತ್ಯಾಚಾರ ಎಂಬುದು ಸುಳ್ಳು

ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಯಾವುದೇ ಅಪರಾಧ ನಡೆದರೂ ಅದನ್ನು ಮುಸ್ಲೀಮರ ತಲೆಗೆ ಕಟ್ಟುವುದರ ಜೊತೆಗೆ, ಬೇಕೆಂದೇ ಅಪರಾಧಗಳನ್ನು ಎಸಗಿ ಅದನ್ನು ಮುಸ್ಲೀಮರ ಮೇಲೆ ಆರೋಪಿಸುವುದು ನಡೆಯುತ್ತಿದೆ. ಈಗ, “ಗುಜರಾತ್‌ನಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನದಂದು ಹನುಮಾನ್ ವೇಷಭೂಷಣ ತೊಟ್ಟಿದ್ದಕ್ಕೆ ಹಿಂದೂ ಹುಡುಗನೊಬ್ಬನನ್ನು ಮುಸ್ಲಿಂ ಯುವಕರ ಗುಂಪೊಂದು ಅಪಹರಿಸಿ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರವೆಸಗಿದೆ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಜರಂಗದಳ ಗುಜರಾತ್ ಹಂಚಿಕೊಂಡಿಂದೆ….

Read More

Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವರು ಹನುಮಾನ್ ಪ್ರತಿಮೆಯ ಸುತ್ತಲೂ ಮಾನವ ಮಲದ ರಾಶಿಗಳು ಕಂಡುಬಂದಿವೆ ಎಂಬ ಶೀರ್ಷಿಕೆಯಲ್ಲಿ ‘ಟೊರೊಂಟೊ ಸನ್’ ಸುದ್ದಿ ಪ್ರಕಟಿಸಿದೆ ಎಂದು ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನು ‘ಟೊರೊಂಟೊ ಸನ್’ ವರದಿಯ ಫೋಟೋವನ್ನು ಗಮನಿಸಿದಾಗ ಇದರಲ್ಲಿನ ಅಕ್ಷರಗಳು ಅಸ್ಪಷ್ಟವಾಗಿ ಸ್ವಲ್ಪ ಬದಲಾವಣೆಯೊಂದಿಗೆ ಕಂಡು ಬಂದಿದ್ದು, ಶೀರ್ಷಿಕೆ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ…

Read More
ಹನುಮಾನ್ ಚಾಲಿಸ

ಇಂಡಿಯಾ ಪಾಕಿಸ್ತಾನ ಪಂದ್ಯದ ವೇಳೆ 1.5ಲಕ್ಷ ಜನ ಹನುಮಾನ್ ಚಾಲಿಸ ಹಾಡಿದ್ದಾರೆ ಎಂಬುದು ಸುಳ್ಳು

ವಿಶ್ವಕಪ್ ಮುಗಿದರೂ ಅದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಮಾತ್ರ ನಿಂತಿಲ್ಲ. ಕ್ರಿಕೆಟ್ ಅಭಿಮಾನಿಗಳು ಕೆಲವರು ಸುಳ್ಳು ಸುದ್ದಿ  ಹಬ್ಬಿಸುತ್ತಿದ್ದರೆ ಇನ್ನೂ ಕೆಲವು ಬಲಪಂಥೀಯರು ಕ್ರಿಕೆಟ್‌ಗೂ ಧರ್ಮ, ರಾಜಕಾರಣ ಬೆರೆಸಿ ಸುಳ್ಳು ಆರೋಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಸತ್ಯಶೋಧನೆ ನಡೆಸಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಈಗ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದ್ದು “ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಸಂದರ್ಭದಲ್ಲಿ…

Read More