ಹಮಾಸ್‌ ಕೃತ್ಯ ಎಂದು ಸುಳ್ಳು ಪೋಟೋ ಹಂಚಿಕೊಂಡ ಇಸ್ರೇಲ್‌ನ ವಿದೇಶಾಂಗ ಸಚಿವಾಲಯ

ಇಸ್ರೇಲ್ ಹಮಾಸ್ ಸಂಘರ್ಷ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮುಂದುವರೆದಿದೆ. ಆದರೆ ಯುದ್ಧಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಊಹಾಪೋಹಗಳು, ಹಳೆಯ ಘಟನೆಗಳನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಅನೇಕ ಸುದ್ಧಿಗಳ ಸತ್ಯಶೋಧನೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಹೀಗಾಗಲೇ ಪ್ರಕಟಿಸಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ನೆನ್ನೆಯಷ್ಟೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಒಂದು ವಿಡಿಯೋ ಪ್ರಕಟಿಸಿ ಹಮಾಸ್ ಮುಗ್ದ ಮಹಿಳೆಯರನ್ನು, ಎಲ್ಜಿಬಿಟಿಕ್ಯೂ+(LGBTQ+) ಸಮುದಾಯದವರನ್ನು, ಅಲ್ಪಸಂಖ್ಯಾತರನ್ನು ಮತ್ತು ಯಹೂದಿಗಳನ್ನು ಕೊಲ್ಲುತ್ತಿದೆ. ಹಮಾಸ್‌ ನವರನ್ನು ಬೆಂಬಲಿಸುವವರು ಭಯೋತ್ಪಾದಕರನ್ನು ಬೆಂಬಲಿಸಿದಂತೆ…

Read More

Fact Check | ತಾಯಿಯೊಬ್ಬಳು ತನ್ನ ಧ್ವಂಸಗೊಂಡ ಮನೆಯಿಂದ ಮಗುವಿನ ಆಟಿಕೆ ತರುತ್ತಿರುವ ಫೋಟೋ ಗಾಜಾದಲ್ಲ!

ಇಸ್ರೆಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಸಾಕಷ್ಟು ಮಂದಿ ಹಮಾಸ್‌ ಜನರ ಶಕ್ತಿ ಕುಗ್ಗುವುದಿಲ್ಲ ಎಂದು ತಲೆ ಬರಹವನ್ನು ನೀಡಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಈ ಫೋಟೋಗೆ ವಿವಿಧ ರೀತಿಯ ಸುಳ್ಳು ಕತೆಗಳನ್ನು ಕಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ  “ಈ ಛಾಯಾಚಿತ್ರದಲ್ಲಿ ಪ್ಯಾಲೇಸ್ಟಿನಿಯನ್ ತಾಯಿಯೊಬ್ಬಳು ಗಾಜಾದಲ್ಲಿರುವ ಧ್ವಂಸವಾದ ಕಟ್ಟಡದಲ್ಲಿರುವ ತಮ್ಮ ಮನೆಯಿಂದ ತನ್ನ ಮಗುವಿನ ಆಟಿಕೆಯ ಕಾರನ್ನು ವಾಪಸ್ಸು ತರುತ್ತಿರುವುದನ್ನ ನೋಡಬಹುದಾಗಿದೆ.”…

Read More

ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್‌ ಬೆಂಬಲದೊಂದಿಗೆ ಭಯೋತ್ಪಾದಕರಾದ ಹಮಾಸರನ್ನು ಬೆಂಬಲಿಸಿ ಕೇರಳದಲ್ಲಿ ಬೃಹತ್ ರ್ಯಾಲಿಯೊಂದು ನಡೆದಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲೋ, ಪ್ಯಾಲೆಸ್ಟೈನ್‌ನಲ್ಲೋ ಅಲ್ಲ ದೇವರ ನಾಡು ಕೇರಳದಲ್ಲಿ.  ಎಂಬ ತಲೆಬರಹದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಕ್ಟೋಬರ್ 26ರಂದು ಕೇರಳದ ಕೋಜಿಕೊಡೆ ತೀರದಲ್ಲಿ ನಡೆದ ಪ್ಯಾಲಸ್ಟೈನ್ ಪರವಾಗಿ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಶಶಿ ತರೂರ್ ಹಮಾಸ್‌ ಮತ್ತು ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದ್ದಾರೆ. ಇಬ್ಬರ ನಡೆಗಳು ಕೂಡ ನೂರಾರು ನಾಗರೀಕರನ್ನು ಬಲಿ ತೆಗೆದುಕೊಳ್ಳುತ್ತದೆ…

Read More

Fact Check : ಹಮಾಸ್‌ನಲ್ಲಿನ ಮೃತದೇಹಗಳು ಅಲುಗಾಡುತ್ತಿವೆ ಎನ್ನಲಾಗುತ್ತಿರುವ ವಿಡಿಯೋ ಈಜಿಪ್ಟ್‌ನದ್ದು

ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಆರಂಭವಾದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಇತ್ತೀಚೆಗೆ ಹಮಾಸ್‌ ವಿಶ್ವದ ಬೆಂಬಲವನ್ನು ಗಳಿಸಲು ಜಗತ್ತಿನ ಮುಂದೆ ಸಂತ್ರಸ್ತ ರಾಷ್ಟ್ರದಂತೆ ನಾಟಕವಾಡುತ್ತಿದೆ ಎಂದು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್ ದಾಳಿಯ ನಂತರ ಪ್ಯಾಲೆಸ್ತೀನಿಯರು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ನಕಲಿ ಹೆಣಗಳನ್ನ ಪ್ರದರ್ಶಿಸಿದ್ದಾರೆ. ಆ ಮೂಲಕ ವಿಶ್ವದ ಮುಂದೆ ಸಿಂಪಥಿ ಗಿಟ್ಟಿಸಿಕೊಂಡು ತಾವೇ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಯನ್ನು…

Read More

ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು

“ದಕ್ಷಿಣ ಇಸ್ರೇಲ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳ ಪತ್ತೆ ಮಾಡಿದ ಹಮಾಸ್ ಭಯೋತ್ಪಾದಕರು  ಆಕೆಯ ದೇಹವನ್ನು ಸೀಳಿ ಅವರ ಹೊಕ್ಕುಳ ಬಳ್ಳಿಯಿಂದ ಭ್ರೂಣವನ್ನು ಹೊರತೆಗೆದು, ಹುಟ್ಟಲಿರುವ ಮಗು ತನ್ನ ತಾಯಿಯ ಗರ್ಭದಿಂದ ನಿಧಾನವಾಗಿ ಸಾಯುವಂತೆ ಮಾಡಿದ್ದಾರೆ. ಅಮಾನವೀಯ ಅನಾಗರಿಕರಾದ ಹಮಾಸ್ ಜನರಿಗೆ ಮಾಡುತ್ತಿರುವುದು ಇದನ್ನೇ” ಎಂದು ಆದಿತ್ಯ ರಾಜ್ ಕೌಲ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ಸುದ್ದಿಯನ್ನು ಹಲವರು ಹಂಚಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: 10 ಆಕ್ಟೋಬರ್ 2023ರಂದು 9ಟಿವಿ ನೆಟ್ವರ್ಕ್‌ನ ಸುದ್ದಿ…

Read More

ಕೇರಳದಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದೆ ಮುಸ್ಲಿಮರ ಕೈವಾಡವಿದೆ ಎಂಬುದು ಸುಳ್ಳು

ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಭಯೋತ್ಪಾಧನೆಯಂತಹ ದುರ್ಘಟನೆ ಸಂಭವಿಸಿದಾಗಲೆಲ್ಲಾ ಮೊದಲು ಶಂಕೆ ಪಡುವುದು ಮುಸ್ಲಿಂ ಸಮುದಾಯದ ಮೇಲೆಯೆ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಉಗ್ರರು ಭಯೋತ್ಪಾಧನೆಯಲ್ಲಿ ತೊಡಗಿಕೊಂಡಿರುವುದರಿಂದ ಈ ಪೂರ್ವಾಗ್ರಹಗಳು ಹುಟ್ಟಿಕೊಂಡಿವೆ. ಆದರೆ ಭಾರತದಲ್ಲಿಯೂ ಸಹ ಮುಸ್ಲಿಂ ಸಮುದಾಯದವರನ್ನು ಉಗ್ರರು, ಭಯೋತ್ಪಾದಕರೆಂದು ಕರೆಯುವ ಕೆಟ್ಟ ಪದ್ದತಿಯೊಂದು ರೂಢಿಯಲ್ಲಿದೆ. ಹೀಗೆ ಸುಳ್ಳು ಅಪವಾದಕ್ಕೆ ಗುರಿಯಾದ ಅನೇಕ ಮುಸ್ಲಿಂ ಯುವಕರ ಬದುಕು ನರಕವಾಗಿ ಬದಲಾಗಿದೆ, ಇಂತಹ ಆರೋಪಗಳಿಂದ ಖಿನ್ನತೆ, ಆತ್ಮಹತ್ಯೆಯಂತವುಗಳಿಗೆ ಸಹ ಕಾರಣವಾಗುತ್ತಿವೆ. ಇಂತಹದ್ದೇ ಇನ್ನೋಂದು ಆರೋಪವೊಂದು ಈಗ ಕೇಳಿ ಬರುತ್ತಿದೆ….

Read More

Fact Check : ಹಮಾಸ್‌ ಶಾಲಾ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುತ್ತಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಶಾಲಾ-ವಯಸ್ಸಿನ ಮಕ್ಕಳಿಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವ್ಯಾಯಾಮಗಳಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.. ಆದರೆ ಈ ವಿಡಿಯೋ ಸತ್ಯಾಸತ್ಯತೆಯನ್ನು ಪರಶೀಲಿಸಿದಾಗ ಸಿಕ್ಕ ಉತ್ತರವೇ ಬೇರೆಯದ್ದಾಗಿತ್ತು. ಕಳೆದ ಒಂದು ಎರಡು ವಾರಗಳಿಂದ “ಹಮಾಸ್‌ ಬಂಡುಕೋರಾರು ಇಸ್ರೇಲ್‌ ವಿರುದ್ಧ ಹೋರಾಟವನ್ನು ಮುಂದುವರೆಸಲು ಶಾಲಾ ಮಕ್ಕಳಿಗೆ ಸೈನಿಕ ತರಬೇತಿಯನ್ನು ನೀಡುತ್ತಿದೆ. ಯುದ್ಧದಲ್ಲಿ ಹೋರಾಡಲು ಮಕ್ಕಳನ್ನ ಮುಂದಕ್ಕೆ ಬಿಟ್ಟು ಹಮಾಸ್‌ ಬಂಡುಕೋರರು ತಪ್ಪಿಸಿಕೊಳ್ಳಲು ರಣತಂತ್ರವನ್ನು ಹೂಡುತ್ತಿದ್ದಾರೆ…

Read More

Fact Check :ಈ ಫೋಟೋ ಇಸ್ರೇಲ್‌ನ ಸೇನೆಗೆ ಸಂಬಂಧಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಆರಂಭವಾಗುತ್ತಿದ್ದಂತೆ ಈ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಕೆಲವೊಂದು ಸುದ್ದಿಗಳಿಗೆ ಹಳೆಯ ಫೋಟೋಗಳನ್ನು ಬಳಸಿಕೊಂಡು ಅದು ಇತ್ತೀಚಿನ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಫೋಟೋವಾಗಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಯೋಧೆಯೊಬ್ಬಳು ಸೈನಿಕರ ರೀತಿ ಬಟ್ಟೆ ಧರಿಸಿ ಒಂದು ಕೈಯಲ್ಲಿ ಗನ್‌ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿರುವ ಫೋಟೋ ಸಾಮಾಜಿಕ…

Read More
ಗಾಜಾ

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು

ಗಾಜಾದ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಪ್ಯಾಲೆಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ದಾಳಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು. 33 ಸೆಕೆಂಡುಗಳ ಈ ವಿಡಿಯೋದಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಏಸು ಶಿಲುಬೆಯನ್ನು ನೆಲದ ಮೇಲೆ ಎಸೆದು ನಂತರ ಅದನ್ನು ನಾಶಪಡಿಸುವುದನ್ನು ತೋರಿಸಲಾಗಿದೆ. ಬಂದೂಕುಧಾರಿಗಳು ಇತರ ಕ್ರಿಶ್ಚಿಯನ್ ಪ್ರತಿಮೆಗಳನ್ನು ನಾಶಪಡಿಸುವುದನ್ನು ಸಹ ಕ್ಲಿಪ್ ನಲ್ಲಿ ನೋಡಬಹುದಾಗಿದೆ.  ಅಮಿತಾಭ್ ಚೌಧರಿ (@MithilaWaala) ಮತ್ತು ಅನಿಲ್ ಕೌಹ್ಲಿ ಎಂಬುವವರು ಈ ವಿಡಿಯೋವನ್ನು  ತಮ್ಮ ಎಕ್ಸ್(X) ಖಾತೆಯಲ್ಲಿ ” ಗಾಜಾ ನಗರದ ಬ್ಯಾಪ್ಟಿಸ್ಟ್ ಚರ್ಚ್ ಅನ್ನು…

Read More

Fact Check : ಇಬ್ಬರು ಸೈನಿಕರನ್ನ ಬೆಂಕಿ ಹಚ್ಚಿ ಕೊಂದಿರುವ ವಿಡಿಯೋಗೂ ಹಮಾಸ್‌-ಇಸ್ರೇಲ್‌ ಯುದ್ಧಕ್ಕೂ ಸಂಬಂಧವಿಲ್ಲ

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ ಸದ್ಯದ ಮಟ್ಟಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಇದರ ನಡುವೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಈ ಯುದ್ಧದ ಕುರಿತು ವ್ಯಾಪಕವಾಗಿ ಹಬ್ಬುತ್ತಿವೆ. ಅದೇ ರೀತಿಯಾಗಿ “ಹಮಾಸ್ ಜಿಹಾದಿ ಭಯೋತ್ಪಾದಕರು ಇಸ್ರೇಲಿ ಸೈನಿಕರು ಮತ್ತು ಅಲ್ಲಿನ ಸಾರ್ವಜನಿಕರೊಂದಿಗೆ ಯಾವ ರೀತಿಯ ಅಮಾನವೀಯತೆಯನ್ನು ದಾಟುತ್ತಿದ್ದಾರೆ? ಜಗತ್ತಿನಾದ್ಯಂತ ಮುಸ್ಲಿಮರು ಈ ಜಿಹಾದಿಗಳೊಂದಿಗೆ ನಿಂತಿದ್ದಾರೆ.” “ಒಬ್ಬನೇ ಒಬ್ಬ ಮುಸಲ್ಮಾನನೂ ಹಮಾಸ್‌ನ ಕ್ರಮಗಳನ್ನು ತಪ್ಪು ಎಂದು ಖಂಡಿಸಲಿಲ್ಲ” ಎಂದು ಇಬ್ಬರು ಇಸ್ರೇಲಿ ಸೈನಿಕರಿಗೆ ಹಮಾಸ್‌ ಬಂಡುಕೋರರು…

Read More